ಭೂಗತ ಪಾತಕಿ ರವಿ ಪೂಜಾರಿಯನ್ನು ಕಸ್ಟಡಿಗೆ ಪಡೆಯಲು ಮುಂದಾದ ಗುಜರಾತ್ ಪೊಲೀಸರು

ಹೈಲೈಟ್ಸ್‌:

  • ಕೇರಳ ಪೊಲೀಸರ ನಂತರ ರವಿಪೂಜಾರಿಯನ್ನು ಕಸ್ಟಡಿಗೆ ಪಡೆಯಲು ಮುಂದಾದ ಗುಜರಾತ್‌ ಪೊಲೀಸರು
  • ಭೂಗತ ಪಾತಕಿ ರವಿಪೂಜಾರಿಯನ್ನು ಬಾಡಿ ವಾರೆಂಟ್‌ ಮೇಲೆ ಕಸ್ಟಡಿಗೆ ಪಡೆಯಲು ಮುಂದು
  • ಬೆಂಗಳೂರಿನ 62ನೇ ಸಿಸಿಎಚ್‌ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ಗುಜರಾತ್‌ ಭಯೋತ್ಪಾದಕ ನಿಗ್ರಹ ದಳ

ಬೆಂಗಳೂರು: ಕೇರಳ ಪೊಲೀಸರ ನಂತರ ಇದೀಗ ಗುಜರಾತ್‌ ಪೊಲೀಸರು ಭೂಗತ ಪಾತಕಿ ರವಿಪೂಜಾರಿಯನ್ನು ಬಾಡಿ ವಾರೆಂಟ್‌ ಮೇಲೆ ಕಸ್ಟಡಿಗೆ ಪಡೆಯಲು ಮುಂದಾಗಿದ್ದಾರೆ.

ಮಹಾರಾಷ್ಟ್ರ, ಕೇರಳ ಬಳಿಕ ಗುಜರಾತ್‌ ಭಯೋತ್ಪಾದಕ ನಿಗ್ರಹ ದಳ (ಎಟಿಎಸ್‌) ಕಸ್ಟಡಿಗೆ ನೀಡುವಂತೆ ಬೆಂಗಳೂರಿನ 62ನೇ ಸಿಸಿಎಚ್‌ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ. 2017ರ ಜನವರಿಯಲ್ಲಿ ಗುಜರಾತ್‌ನ ಬೊರ್ಸಾದ್‌ ಕೌನ್ಸಿಲರ್‌ ಆಗಿದ್ದ ಪ್ರಗ್ನೇಶ್‌ ಪಟೇಲ್‌ ಎಂಬುವರ ಮೇಲೆ ಬೈಕ್‌ನಲ್ಲಿ ಬಂದ ಮೂವರು ಆಗಂತುಕರು ಗುಂಡಿನ ದಾಳಿ ನಡೆಸಿ ಕೊಲೆ ಮಾಡಿದ್ದರು. ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮೂವರು ಸುಪಾರಿ ಹಂತಕರನ್ನು ಗುಜರಾತ್‌ ಎಟಿಎಸ್‌ ಅಧಿಕಾರಿಗಳು ಬಂಧಿಸಿದ್ದರು. ವಿಚಾರಣೆ ವೇಳೆ ಪಾತಕಿಯಾಗಿದ್ದ ರವಿಪೂಜಾರಿ ಪಾತ್ರ ಬೆಳಕಿಗೆ ಬಂದಿತ್ತು.

ಈ ಸಂಬಂಧ ಹೆಚ್ಚಿನ ತನಿಖೆಗಾಗಿ ಆರೋಪಿಯನ್ನು ವಶಕ್ಕೆ ನೀಡುವಂತೆ ಎಟಿಎಸ್‌ ಅಧಿಕಾರಿಗಳು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ಹಿಂದೆ ನಡೆದಿದ್ದ ಕೊಚ್ಚಿ ಬ್ಯೂಟಿ ಪಾರ್ಲರ್‌ ಮೇಲಿನ ಗುಂಡಿನ ದಾಳಿ ಪ್ರಕರಣದ ಸಂಬಂಧ ರವಿ ಪೂಜಾರಿಯನ್ನ ಕೇರಳ ಪೊಲೀಸರು ಎಂಟು ದಿನಗಳ ಕಾಲ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದರು. ರಾಜ್ಯ ಗುಪ್ತಚರ ಇಲಾಖೆ ಅಧಿಕಾರಿಗಳು ನೀಡಿದ ಮಾಹಿತಿ ಮೇರೆಗೆ 2019ರ ಜ.19ರಂದು ಸೆನೆಗಲ್‌ ಪೊಲೀಸರು ಬಂಧಿಸಿ, ದೇಶಕ್ಕೆ ಕರೆತರುವಲ್ಲಿ ರಾಜ್ಯ ಪೊಲೀಸರು ಯಶಸ್ವಿಯಾಗಿದ್ದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *