ಬೀದರ : ಬಲಿದಾನ ದಿವಸ: ಸಸಿ ನೆಡುವ ಕಾರ್ಯಕ್ರಮ
ಬೀದರ:ಜೂ.24: ಡಾ. ಶಾಮಾ ಪ್ರಸಾದ್ ಮುಖರ್ಜಿ ಅವರ ಪುಣ್ಯಸ್ಮರಣೆ ನಿಮಿತ್ಯ ಬಿಜೆಪಿ ನಗರ ಘಟಕ ವತಿಯಿಂದ ಬಲಿದಾನ ದಿವಸ ಆಚರಣೆ ಮಾಡಲಾಯಿತು.
ಇದರ ನಿಮಿತ್ಯ ಶ್ರೀ ಸಿದ್ಧರೂಢ ಮಠದಲ್ಲಿ ಸಸಿ ನಡುವ ಕಾರ್ಯಕ್ರಮ ಕೈಗೊಳ್ಳಲಾಯಿತು.
ಪೂಜ್ಯ ಶಿವಕುಮಾರ ಸ್ವಾಮೀಜಿ ಅವರ ದಿವ್ಯ ಸಾನಿಧ್ಯ ವಹಿಸಿದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬು ವಾಲಿ, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಕುಶಾಲ ಪಾಟೀಲ ಗಾದಗಿ, ನಗರ ಘಟಕದ ಅಧ್ಯಕ್ಷ ಹಣಮಂತ ಬುಳ್ಳಾ, ನಗರ ಸಭೆ ಸದಸ್ಯ ರಾಜರಾಮ ಚಿಟ್ಟಾ, ಶಶಿ ಹೊಸಳ್ಳಿ, ಪ್ರಭು ಪಾಟೀಲ, ಬಸವರಾಜ ಮಲ್ಕಪ್ಪ, ಪವನ ಉಂಡೆ ನೇತೃತ್ವದಲ್ಲಿ ಸಸಿ ನೆಡುವ ಕಾರ್ಯ ನಡೆಯಿತು. ಪ್ರಮುಖರಾದ ಚಂದ್ರಶೇಖರ ಶೇಕಾಪುರ, ಅನಿಲ ರಾಜಗಿರಾ, ಸುನೀಲ ಗೌಳಿ, ಅಂಬರೇಶ ಭಟನಾಪುರೆ, ಸಂತೋಷ ಪಾಟೀಲ, ನರೇಶ ಗೌಳಿ, ಸುದರ್ಶನ ಗಡರೆ, ಗೋರಕ್ ಗೌಳಿ, ಕೃಷ್ಣಾ ಉಪ್ಪಾರ್, ರಾಜಶೇಖರ ರೆಡ್ಡಿ, ರವಿ ಪಾಟೀಲ, ಗೋವಿಂದ ಕಾವಳೇ, ಗೋಪಾಲ ಕುಕಡಾಲ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.