ಬಾನಂಗಳದಲ್ಲಿ ಕೊರೊನಾ ಜಾಗೃತಿಯ ಗಾಳಿಪಟ ಹಾರಾಟ
ಬಾಗಲಕೋಟೆ: ಜೂ 27 : ನಗರದ ಭಾವಸಾರ ವ್ಹಿಜನ್ ಇಂಡಿಯಾ ಬಾಗಲಕೋಟ 101 ವತಿಯಿಂದ ನವನಗರದ ಭಾವಸಾರ ಶ್ರೀ ಅಂಬಾಭವಾನಿ ಮಂದಿರದ ಆವರಣದಲ್ಲಿ ಗಾಳಿಪಟ ಹಾರಿಸುವ ಕಾರ್ಯಕ್ರಮ ಜರುಗಿತು.
ವಿವಿಧ ರಂಗುರಂಗಿನ ಗಾಳಿಪಟಗಳ ಮೇಲೆ ಗೋ ಕೊರೊನಾ ಗೋ, ವ್ಯಾಕ್ಸಿನೇಶನ್ ಹಾಕಿಸಿಕೊಳ್ಳುವ ಚಿತ್ರಗಳನ್ನು ಅಂಟಿಸಿ ಗಾಳಿಪಟಗಳನ್ನು ಹಾರಿಸುವುದರೊಂದಿಗೆ ಕಾರ್ಯಕ್ರಮದಲ್ಲಿ ನೆರೆದಿದ್ದ ಜನರಲ್ಲಿ ಜಾಗೃತಿ ಮೂಡಿಸಲಾಯಿತು. ಈ ಸಂದರ್ಭದಲ್ಲಿ ಚಾರ್ಟರ್ಡ ಪ್ರೆಸಿಡೆಂಟ್ ದತ್ತಾತ್ರೇಯ ಚೌಧರಿ ಅವರು ಮಾತನಾಡುತ್ತಾ ಪ್ರತಿಯೊಬ್ಬರಲ್ಲಿ ಕೊರೊನಾದ ಬಗ್ಗೆ ಜಾಗೃತಿ ಮೂಡಿಸಬೇಕು, ಸರ್ಕಾರದ ನಿಯಮಗಳನ್ನು ಪಾಲನೆ ಮಾಡಿದಾಗ ಮಾತ್ರ ಕೊರೊನಾ ರೋಗವನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಗುತ್ತದೆ ಎಂದರು.
ಭಾವಸಾರ ವ್ಹಿಜನ್‍ನ ಅಧ್ಯಕ್ಷರಾದ ಮಹೇಶ ಮಹೀಂದ್ರಕರ ಅವರು ಮಾತನಾಡಿ, ಭಾವಸಾರ ವ್ಹಿಜನ್‍ದಿಂದ ಈ ತರದ ಗಾಳಿಪಟ ಹಾರಿಸುವ ಮನರಂಜನೆ ಕಾರ್ಯಕ್ರಮದ ಜೊತೆಗೆ ಜನರಲ್ಲಿ ಕೊರೊನಾ ಹೋಗಲಾಡಿಸುವ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಕೊರೋನಾ ಮುಕ್ತ ಸಮಾಜಕ್ಕಾಗಿ ಪ್ರತಿಯೊಬ್ಬರು ಸರ್ಕಾರದಿಂದ ಉಚಿತವಾಗಿ ಸಿಗುವ ಲಸಿಕೆಯನ್ನು ಹಾಕಿಸಿಕೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ಭಾವಸಾರ ವ್ಹಿಜನ್‍ನ ಅಧ್ಯಕ್ಷರಾದ ಮಹೇಶ ಮಹೀಂದ್ರಕರ, ಕಾರ್ಯದರ್ಶಿ, ಅರವಿಂದ ಸುಲಾಖೆ, ಚಾರ್ಟರ್ಡ ಪ್ರೆಸಿಡೆಂಟ ದತ್ತಾತ್ರೇಯ ಚೌಧರಿ, ಸದಸ್ಯರುಗಳಾದ ಭೀಮರಾವ ಲೋಖಂಡೆ, ಪ್ರಕಾಶ ಶಿಂತ್ರೆ, ಸುಭಾಶ್ಚಂದ್ರ ಕೋಳೆಕರ, ನಾಗೇಶ, ಉತ್ತರಕರ, ಸಂತೋಷ ಬೆಳಮಕರ, ಸಂಜೀವ ರಾಶಿನಕರ, ಸಂಜೀವ ಅಂಬೋರೆ, ಸತೀಶ ಲಾತೂರಕರ, ಸಂದೀಪ ಬಾಸೂತಕರ, ಪ್ರವೀಣ ರಂಗದಾಳೆ, ವಿನಾಯಕ ಚೌಧರಿ, ಮಮತಾ ಬಾಸೂತಕರ, ಪಾರ್ವತಿ ಕೊಳೇಕರ, ಜಯಶ್ರೀ ಚೌಧರಿ, ಶ್ರೀದೇವಿ ಸುಲಾಖೆ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.