🌹ವೈದ್ಯರೇ ಕೋವಿಡ್ ಸಂದರ್ಭದಲ್ಲಿ ನಿಮ್ಮ ಪಾತ್ರ ತುಂಬಾ ದೊಡ್ಡದು. 🌹. Article By Kashibai Guttedar
ಈ ಕರೋನಾ ಮಹಾಮಾರಿ ಹುಟ್ಟಿಕೊಂಡ ಅಂತಹ ಸಂದರ್ಭದಲ್ಲಿ ವೈದ್ಯರ ಪಾತ್ರ ತುಂಬಾ ದೊಡ್ಡದಾಗಿದೆ ಎಂದು ಹೇಳಿದರೆ ಯಾವುದೇ ರೀತಿಯ ತಪ್ಪಾಗಲಾರದು.
ಅವರು ಎಂದೂ ತಮ್ಮ ಮನೆ,ಮಠ , ಮಕ್ಕಳು ತಮ್ಮ ಜೀವನವನ್ನು ಲೆಕ್ಕಿಸದೆ ಎಲ್ಲವನ್ನೂ ತೊರೆದು ರೋಗಿಗಳ ಹಿತವಾದ ದೃಷ್ಟಿಯಿಂದಾಗಿ ಹಗಲು-ರಾತ್ರಿಯೆನ್ನದೇ ಕಾರ್ಯನಿರ್ವಹಿಸುತ್ತಿದ್ದಾರೆ.
ಕರೋನಾ ಮಹಾಮಾರಿಯ ವಿರುದ್ಧ ಹೋರಾಡುತ್ತಾ ನಮ್ಮೆಲ್ಲರ ಆರೋಗ್ಯಕ್ಕಾಗಿ ಸದಾ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಅವರಿವರೆನ್ನದೆ ಸಹೃದಯದಿಂದ ಆಗಿ ಆಸ್ಪತ್ರೆಗೆ ಬಂದಂತಹ ರೋಗಿಗಳ ಮನಸ್ಸಿಗೆ ಧೈರ್ಯ ತುಂಬುವ ಮಾತುಗಳೇ ವೈದ್ಯರ ಚಿಕಿತ್ಸೆಯಾಗಿದೆ.
ಸದಾ ನಮ್ಮೆಲ್ಲರ ಹಿತವನ್ನು ಬಯಸುತ್ತಾ ನಮ್ಮೆಲ್ಲರ ಜೀವ ಉಳಿಸುವ ತಮ್ಮ ಜೀವ ಲೆಕ್ಕಿಸದೆ ಹಗಲಿರುಳೆನ್ನದೆ ಶ್ರಮಿಸುತ್ತಿರುವ ಎಲ್ಲ ವೈದ್ಯರಿಗೆ ನಾವು ಚಿರಋಣಿಯಾಗಿರಬೇಕು ಎಂದು ಭಾವಿಸುತ್ತೇನೆ .
ಜನ್ಮದತೆ ಅಂದರೆ ತಾಯಿ ಯಾದವರು ಜನ್ಮ ನೀಡಿದರೆ ವೈದ್ಯರು ಮರುಜನ್ಮ ಕೊಡುವಂತಹ ದೇವರು.
ಇವರು ನಮ್ಮ ಪಾಲಿನ ಮುಖ್ಯಪಾತ್ರಗಳನ್ನು ವಹಿಸುತ್ತಾರೆ ಏಕೆಂದರೆ ಕರೋನಾ ಮಹಾಮಾರಿಯ ಸಂದರ್ಭದಲ್ಲಿ ಜೀವನದ ಹಂಗನ್ನು ತೊರೆದು ಸದಾ ತಮ್ಮ ಕುಟುಂಬವನ್ನು ಲೆಕ್ಕಿಸದೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಈ ವೈದ್ಯರನ್ನು ಅವರ ಶ್ರಮವನ್ನು ಎಷ್ಟು ವರ್ಣಿಸಿದರೂ ಕೂಡ ಕಡಿಮೇನೆ.
ವೈದ್ಯರು ತಮ್ಮ ಶ್ರಮ ತ್ಯಾಗವನ್ನು ಸಮಾಜಕ್ಕೆ ನೀಡಿದ ಅಪೂರ್ವ ಕೊಡುಗೆಯಾಗಿದೆ.
ವೈದ್ಯರು ನೋಡುವ ಆತ್ಮಸ್ಥೈರ್ಯ ಮಾತುಗಳೇ ರೋಗಿಯ ಕಾಯಿಲೆ ನಿವಾಸಿ ಮಾಡುವಂತಹ ಗುಣವನ್ನು ಇವರು ಹೊಂದಿದ್ದಾರೆ.
ಈ ಕೋವಿಡ್ ಸಂದರ್ಭದಲ್ಲಿ ಹಳ್ಳಿ ಹಳ್ಳಿಗೆ ಹೋಗಿ ಭೇಟಿ ನೀಡಿ ಕರೋನವನ್ನು ತಡೆಗಟ್ಟುವ ಹಿತದೃಷ್ಟಿಯಿಂದ ಹಳ್ಳಿಹಳ್ಳಿಯಲ್ಲಿ ತಮ್ಮ ಕಾರ್ಯವನ್ನು ನಿರ್ವಹಿಸಿದ್ದಾರೆ.
ತಮ್ಮ ಕುಟುಂಬಗಳಿಂದ ದೂರ ಉಳಿದು ಸದಾ ಸೇವೆಯನ್ನು ಮಾಡುತ್ತಿದ್ದಾರೆ ನಗುವ ಜವಾಬ್ದಾರಿ ಅತ್ಯಂತ ಕಷ್ಟದಾಯಕವಾದ ರೂ ಕೂಡ ಯಾವುದೇ ರೀತಿಯ ಕಂಡುಕೊಳ್ಳದೇ ಹಗಲು-ರಾತ್ರಿ ಲೆಕ್ಕಿಸದೆ ಸಮಾಜಕ್ಕೆ ಸಮಯವನ್ನು ಮೀಸಲಿಟ್ಟು ಸೇವೆ ಸಲ್ಲಿಸುತ್ತಿದ್ದಾರೆ.
ವೈದ್ಯರು ನಿಮ್ಮ ಕಾರ್ಯಪ್ರವೃತ್ತಿ ಜವಾಬ್ದಾರಿ ಪ್ರಾಮುಖ್ಯತೆ ಕುರಿತು ಜನರಲ್ಲಿ ಹಲವಾರು ರೀತಿಯಲ್ಲಿ ಅರಿವನ್ನು ಮೂಡಿಸುವುದು ನಿಮ್ಮ ಅಗತ್ಯ ಕರ್ತವ್ಯ ಇದೆ ಎಂದು ಹೇಳಬಹುದು.
ಇಂದಿನ ಅಂದರೆ ಕಳೆದು ಎರಡು ವರ್ಷಗಳಿಂದ ಪ್ರಪಂಚ ಎದುರಿಸುತ್ತಿರುವಂತಹ ಕರೋನ ಮಹಾಮಾರಿಯನ್ನು ಎದುರಿಸುವ ವಿಚಾರ ನಾವುಗಳು ಉಹಿಸಿಕೊಳ್ಳಲು ಅಸಾಧ್ಯವೆನಿಸುತ್ತದೆ,
ಅದಕ್ಕಾಗಿ ಇವರು ಪಾತ್ರ ತುಂಬಾ ದೊಡ್ಡದು ಎಂದು ಹೇಳಬಹುದು.
ವರ್ಷದಂತೆ ಈ ವರ್ಷ ಕೂಡ ತನ್ನದೇ ಆದಂತಹ ಒಂದು ಥೀಮ್ ಹೊಂದಿದೆ ಅದೇನೆಂದರೆ” ಕುಟುಂಬ ವೈದ್ಯರೊಂದಿಗೆ ಭವಿಷ್ಯವನ್ನು ನಿರ್ಮಿಸುವುದು.”
ಈ ಕಾಯಿಲೆಯ ಎಂಬ ರಾಕ್ಷಸ ಬಂದಾಗ
ಅದರ ಜೊತೆಗೆ ಹೋರಾಟ ಮಾಡಿ
ಮತ್ತೆ ನಮ್ಮೆಲ್ಲರ ಬದುಕಿನಲ್ಲಿ
ನಗು ತುಂಬುವ ದೇವರುಗಳೇ ಈ ವೈದ್ಯರು ಎಂದು ಹೇಳುತ್ತಾ ಯಾವಾಗಲೂ ಹೀಗೆ ಸಹೃದಯಿಗಳ ಆಗಿ ಕಾರ್ಯನಿರ್ವಹಿಸಲಿ ಎಂಬುವುದೇ ನನ್ನ ಆಸೆಯ.
ಕೊನೆಯದಾಗಿ ಜನರ ಆರೋಗ್ಯದ ಕಾಳಜಿಯಿಂದಾಗಿ ದೇಶದ ಹಿತದೃಷ್ಟಿಯಿಂದ ನನ್ನ ಕಳಕಳಿಯ ಮನವಿ ಅಂದರೆ ಈ ಕೊರೋನಾ ಎಂಬ ಮಹಾಮಾರಿ ಹಲವಾರು ರೀತಿಯಲ್ಲಿ ಹಲವಾರು ಕಡೆಯಲ್ಲಿ ಹರಡುತ್ತಿರುವ ಹಿನ್ನೆಲೆ ಎಲ್ಲರೂ ತಮ್ಮ ಆರೋಗ್ಯದ ಹಿತದೃಷ್ಟಿಯಿಂದ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ, ಬಿಡುವಿನ ವೇಳೆಯಲ್ಲಿ ಸ್ಯಾನಿಟೈಸರ್ ಮಾಡಿಕೊಳ್ಳಿ ಹಾಗೂ ಮುಖ್ಯವಾಗಿ ಕೋವ್ಯಾಕ್ಸಿನ್ ಲಸಿಕೆ ಪಡೆದು ಆರೋಗ್ಯವಂತರಾಗಿ ಇರಿ
ಕಾಶಿಬಾಯಿ ಗುತ್ತೇದಾರ್ ಪಾಳಾ