ಪ್ರತಾಪ್ ಸಿಂಹ ಸೇರಿ 28 ನೂತನ ಸಚಿವರು ಮೋದಿ ಸಂಪುಟಕ್ಕೆ ಸೇರ್ಪಡೆ ಸಾದ್ಯತೆ
ಮುಂದಿನ ವರ್ಷ ನಡೆಯುವ 5 ರಾಜ್ಯಗಳ ವಿಧಾನಸಭೆ ಚುನಾವಣೆ ಸೇರಿದಂತೆ 2024 ರ ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಂಪುಟಕ್ಕೆ 28 ಮಂದಿಯನ್ನು ಸೇರ್ಪಡೆ ಮಾಡಿಕೊಳ್ಳಲು ಮುಂದಾಗಿದ್ದಾರೆ.
ಕರ್ನಾಟಕದ ಪ್ರತಾಪ್ ಸಿಂಹ ಸೇರಿದಂತೆ ಅನೇಕು ಹಿರಿ ಕಿರಿಯ ಸಂಸದರು, ಮಿತ್ರ ಪಕ್ಷಗಳಿಗೆ ಮಣೆ ಹಾಕಲು ನಿರ್ಧರಿಸಿದ್ದಾರೆ ಅದರಲ್ಲೂ ಮುಂದಿನ ವರ್ಷ ಚುನಾವಣೆ ಇರುವ ರಾಜ್ಯಗಳಿಗೆ ಹೆಚ್ಚಿನ ಮಣೆ ಹಾಕಲಿದ್ದಾರೆ ಎನ್ನಲಾಗಿದೆ.
ಒಂದೆರಡು ದಿನದಲ್ಲಿ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗಧಿಯಾಗಲಿದೆ.
ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವ ಉತ್ತರ ಪ್ರದೇಶ, ಪಂಜಾಬ್, ಸೇರಿದಂತೆ ಐದು ರಾಜ್ಯಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಂಪುಟದಲ್ಲಿ ಹೆಚ್ಚಿನ ಸ್ಥಾನ ನೀಡಿವ ಸಾದ್ಯತೆಗಳಿವೆ
ಪ್ರಧಾನಿ ನರೇಂದ್ರ ಮೋದಿ ಅಧಿಕಾರ ವಹಿಸಿಕೊಂಡ ಎನ್ ಡಿಎ ಸರ್ಕಾರದ ಎರಡನೇ ಅವಧಿಯಲ್ಲಿ ಎರಡನೇ ಬಾರಿಗೆ ಕೇಂದ್ರ ಸಂಪುಟ ವಿಸ್ತರಣೆಗೆ ಮುಂದಾಗಿದ್ದು ಸದ್ಯದಲ್ಲಿಯೇ ಮುಹೂರ್ತ ನಿಗಧಿಯಾಗಲಿದೆ ಎನ್ನಲಾಗಿದೆ.
ಮೋದಿ ಸಂಪುಟದಲ್ಲಿ 81 ಸಚಿವರನ್ನು ಸೇರಿಸಿಕೊಳ್ಳುವ ಅವಕಾಶವಿದ್ದು ಹಲವು ಸಚಿವರ ನಿಧನ,ರಾಜೀನಾಮೆ ಯಿಂದ ಪ್ರಸ್ತುತ 53 ಸಚಿವರಿದ್ದಾರೆ, ಇನ್ನು ಖಾಲಿಇರುವ 28 ಸಚಿವ ಸ್ಥಾನ ಭರ್ತಿಗೆ ಮುಂದಾಗಿದ್ದಾರೆ.
ಪೂರ್ಣಪ್ರಮಾಣದಲ್ಲಿ ಸಂಪುಟಕ್ಕೆ ಎಲ್ಲರನ್ನೂ ತೆಗೆದುಕೊಳ್ಳದೆ ಇನ್ನು ಕೆಲವು ಸ್ಥಾನಗಳನ್ನು ಕಳೆದುಕೊಳ್ಳುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರ ಸಚಿವ ಸಂಪುಟ ವಿಸ್ತರಣೆ ಹಿನ್ನಲೆಯಲ್ಲಿ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಗೃಹ ಸಚಿವ ಅಮಿತ್ ಶಾ ಸೇರಿದಂತೆ ಪ್ರಮುಖ ಮುಖಂಡರೊಂದಿಗೆ ಹೆಸರನ್ನು ಸಭೆ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ಒಂದೆರಡು ದಿನಗಳಲ್ಲಿ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿ ಮಾಡಲು ಮುಂದಾಗಿದ್ದಾರೆ
ಕಾಂಗ್ರೆಸ್ ಪಕ್ಷಕ್ಕೆ ಕೈಕೊಟ್ಟು ಬಿಜೆಪಿ ಸೇರಿರುವ ಮಧ್ಯಪ್ರದೇಶದ ಮಾಜಿ ಸಂಸದ ಜ್ಯೋತಿರಾಧ್ಯ ಸಿಂಧಿಯಾ ಅವರೂ ಸೇರಿದಂತೆ ಹಲವು ಹಿರಿಯ ಕಿರಿಯ ಮುಖಂಡರು ಮತ್ತು ಮಿತ್ರ ಪಕ್ಷಗಳ ಸಂಸದರಿಗೆ ಹಾಕುವ ಸಾಧ್ಯತೆಗಳಿವೆ ಜೆಡಿಯು ಕೇಂದ್ರ ಸಂಪುಟದಲ್ಲಿ ಸೇರ್ಪಡೆಯಾಗಲಿದೆ ಎನ್ನುವುದು ತಿಳಿದಿಲ್ಲ.
ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರ ನಿಧನದಿಂದ ತೆರವಾಗಿರುವ ಸ್ಥಾನವನ್ನು ಪುತ್ರನಿಗೆ ನೀಡಲು ಪ್ರಧಾನಿ ಮುಂದಾಗಿದ್ದಾರೆ ಎನ್ನಲಾಗಿದೆ.
ಯಾರೆಲ್ಲಾ ಸಂಪುಟಕ್ಕೆ
- ಜ್ಯೋತಿರಾದ್ಯ ಸಿಂದಿಯಾ- ಮದ್ಯಪ್ರದೇಶ
- ಸರ್ಬಾನಂದ ಸೇನಾವಾಲ್ – ಅಸ್ಸಾಂ
- ಚಿರಾಗ್ ಪಾಸ್ವಾನ್- ಬಿಹಾರ ( ಎಲ್ ಜೆಪಿ)
- ಲಲ್ಲನ್ ಸಿಂಗ್ – ಬಿಹಾರ ( ಜೆಡಿಯು)
- ರಾಮನಾಥ ಠಾಕೂರು- ಬಿಹಾರ ( ಜೆಡಿಯು)
- ಸಂತೋಷ್ ಕುಮಾರ್ ಖುಶ್ವಾ – ಬಿಹಾರ (ಜೆಡಿಯು)
- ಸುಶೀಲ್ ಕುಮಾರ್ ಮೋದಿ- ಬಿಹಾರ
- ನಾರಾಯಣ ರಾಣೆ- ಮಹಾರಾಷ್ಟ್ರ
- ಭೂಪೇಂದ್ರ ಯಾದವ್ – ಮಹಾರಾಷ್ಟ್ರ
- ವರುಣ್ ಗಾಂಧಿ – ಉತ್ತರ ಪ್ರದೇಶ
- ರಮಾ ಶಂಕರ್ ಕಠಾರಿಯಾ- ಉತ್ತರ ಪ್ರದೇಶ
- ಅನಿಲ್ ಜನಿತ್ – ಉತ್ತರ ಪ್ರದೇಶ
- ರೀಟಾ ಬಹುಗಣ ಜೋಷಿ- ಉತ್ತರ ಪ್ರದೇಶ
- ಜಾಫರ್ ಇಸ್ಲಾಂ – ಉತ್ತರ ಪ್ರದೇಶ
- ಅನುಪ್ರಿಯ ಪಟೇಲ್ – ಉತ್ತರ ಪ್ರದೇಶ ( ಅಪ್ನಾ ದಳ)
- ಅಜಯ್ ಭಟ್ ಅಥವಾ ಅನಿಲ್ ಬಲೂನ್ – ಉತ್ತರ ಖಾಂಡ್
- ಪ್ರತಾಪ್ ಸಿಂಹ – ಕರ್ನಾಟಕ
- ಜಗನ್ನಾಥ್ ಸರ್ಕಾರ್ – ಪಶ್ಚಿಮ ಬಂಗಾಳ
- ಶಂತಾನು ಠಾಕೂರು – ಪಶ್ಚಿಮ ಬಂಗಾಳ
- ನಹೀತ್ ಪ್ರಮಾಣಿಕ್- ಪಶ್ವಿಮ ಬಂಗಾಳ
- ಬ್ರಿಜೇಂದ್ರ ಸಿಂಗ್ -ಹರ್ಯಾಣ
- ರಾಹುಲ್ ಕುಸ್ವಾನ್- ರಾಜಸ್ಥಾನ
- ಅಶ್ವಿನಿ ವೈಷ್ಣವ್- ಒಡಿಶಾ
- ಪೂನಮ್ ಮಹಾಜನ್ ಅಥವಾ ಪ್ರೀತಂ ಮುಂಡೆ ( ಮಹಾರಾಷ್ಟ್ರ)
- ಪರ್ವೇಶ್ ವರ್ಮಾ ಅಥವಾ ಮೀನಾಲ್ಷಿ ಲೇಖಿ ( ದೆಹಲಿ)
ಖಾತೆ ಬದಲು
ಹಾಲಿ ಸಚಿವರ ಕೆಲವು ಖಾತೆಗಳು ಬದಲಾವಣೆಯಾಗುವ ಸಾಧ್ಯತೆ ಗಳಿವೆ ಅಲ್ಲದೆ ಕೆಲವು ಸಚಿವರನ್ನು ಕೈಬಿಟ್ಟರು ಆಶ್ಚರ್ಯವಿಲ್ಲ ಎಂದು ಮೂಲಗಳು ತಿಳಿಸಿವೆ
9 ಸಚಿವರಿಗೆ ಹೆಚ್ಚುವರಿ ಖಾತೆ
ಸದ್ಯ ಕೇಂದ್ರ ಸಚಿವ ಸಂಪುಟದಲ್ಲಿರುವ ಒಂಬತ್ತು ಮಂದಿ ಸಚಿವರು ಹೆಚ್ಚುವರಿ ಖಾತೆ ಹೊಂದಿದ್ದು ಅವರಿಂದ ಪಡೆದು ಸಚಿವರಿಗೆ ನೀಡುವ ಸಾಧ್ಯತೆಗಳಿವೆ.
ಪ್ರಕಾಶ್ ಜಾವಡೇಕರ್, ಪಿಯುಷ್ ಗೊಯಲ್, ಧರ್ಮೇಂದ್ರ ಪ್ರಧಾನ್,ನಿತಿನ್ ಗಡ್ಕರಿ,ಹರ್ಷವರ್ಧನ್, ನರೇಂದ್ರ ಸಿಂಗ್ ಥೋಮರ್ ,ರವಿ ಶಂಕರ್ ಪ್ರಸಾದ್ ಸೃತಿ ಇರಾನಿ, ಹರ್ ದೀಪ್ ಸಿಂಗ್ ಪುರಿ ಅವರ ಬಳಿಯಿರುವ ಹೆಚ್ಚುವರಿ ಖಾತೆಗಳನ್ನು ಹಿಂಪಡೆಯುವ ಸಾಧ್ಯತೆಗಳು ಇವೆ