ಇತ್ತೀಚೆಗೆ ಮದುವೆಯಾದ ನಟಿ ಯಾಮಿ ಗೌತಮ್ಗೆ ಸಂಕಷ್ಟ; ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ ಇಡಿ
ಹೈಲೈಟ್ಸ್:
- ನಟಿ ಯಾಮಿ ಗೌತಮ್ಗೆ ಕಾನೂನಿನ ತಲೆನೋವು
- ಯಾಮಿ ಗೌತಮ್ ಖಾತೆಗೆ ಅಕ್ರಮ ಹಣ ಜಮಾ ಆಗಿತ್ತು
- ಎರಡನೇ ಬಾರಿಗೆ ಸಮನ್ಸ್ ನೀಡಿದ ಇಡಿ
- ಯಾಮಿ ಗೌತಮ್ ಕೈಯಲ್ಲಿ ಕೆಲ ಸಿನಿಮಾಗಳಿವೆ
ಇತ್ತೀಚೆಗಷ್ಟೇ ಸದ್ದಿಲ್ಲದೆ ಸರಳವಾಗಿ ಮದುವೆಯಾಗಿ ಆಶ್ಚರ್ಯ ಉಂಟು ಮಾಡಿದ್ದ ನಟಿ ಯಾಮಿ ಗೌತಮ್ ಅವರಿಗೆ ಈಗ ಇಡಿ ತಲೆನೋವು ಎದುರಾಗಿದೆ. ಹೌದು, ಯಾಮಿ ಕಾನೂನು ವಿಚಾರಣೆಗೆ ಒಳಬೇಕಾಗಿದೆ.
ನಟಿ ಯಾಮಿ ಗೌರಮ್ ಅವರು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯ (Foreign Exchange Management Act) ಉಲ್ಲಂಘನೆ ಮಾಡಿ, ಬ್ಯಾಂಕ್ ಖಾತೆಗೆ 1.5 ಕೋಟಿ ರೂಪಾಯಿ ಹಣ ಅಕ್ರಮ ವರ್ಗಾವಣೆ ಆಗಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ಯಾಮಿಗೆ ಇಡಿ ( Enforcement Directorate ) ಸಮನ್ಸ್ ನೀಡಿದ್ದಾರೆ. ಈ ಹಿಂದೆ ಕೂಡ ಯಾಮಿಗೆ ನೋಟಿಸ್ ನೀಡಲಾಗಿತ್ತಾದರೂ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ.
ಎರಡನೇ ಬಾರಿಗೆ ಸಮನ್ಸ್ ನೀಡಿರುವುದರಿಂದ ಈಗ ಯಾಮಿ ವಿಚಾರಣೆಗೆ ಹಾಜರಾಗಲೇಬೇಕಿದೆ. ಜುಲೈ 7ರ ಒಳಗೆ ಯಾಮಿ ಗೌತಮ್ ಅವರು ವಿಚಾರಣೆಗೆ ಹಾಜರಾಗೇಕಿದೆ. ಎರಡು ವರ್ಷದ ಹಿಂದೆ ಯಾಮಿ ಅಕೌಂಟ್ಗೆ 6 ಬಾರಿ ಹಣ ವರ್ಗಾವಣೆಯಾಗಿದೆ. ಲಾಕ್ಡೌನ್ ಕಾರಣದಿಂದಾಗಿ ಯಾಮಿಗೆ 7ರವರೆಗೆ ಸಮಯ ನೀಡಲಾಗಿದೆ.
2019ರಲ್ಲಿ ರಿಲೀಸ್ ಆಗಿ ಭಾರೀ ಪ್ರಶಂಸೆ ಪಡೆದಿದ್ದ ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಸಿನಿಮಾದ ನಿರ್ದೇಶಕ ಆದಿತ್ಯ ಧರ್ ಅವರನ್ನು ಚಂಡೀಗಢದಲ್ಲಿ ಯಾಮಿ ಗೌತಮ್ ಮದುವೆಯಾಗಿದ್ದಾರೆ. ಲಾಕ್ಡೌನ್ ಕಾರಣಕ್ಕೆ ಈ ಮದುವೆ ಸರಳವಾಗಿ ನಡೆದಿದೆ. ಅಮ್ಮನ ಸೀರೆಯನ್ನು ತನ್ನ ಮದುವೆಯಲ್ಲಿ ಯಾಮಿ ಧರಿಸಿದ್ದರು. ಕೆಲವೇ ಕೆಲವು ಮಂದಿ ಈ ಮದುವೆಗೆ ಆಗಮಿಸಿದ್ದರು.
ಆದಿತ್ಯ ಧರ್ ಹಾಗೂ ಯಾಮಿ ಗೌತಮ್ ಅವರು ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಸಿನಿಮಾದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದರು. ಅಲ್ಲಿಂದ ಈ ಜೋಡಿ ಪ್ರೀತಿ ಮಾಡುತ್ತಲಿತ್ತು. ಸಿನಿಮಾಗಳ ಶೂಟಿಂಗ್ನಲ್ಲಿ ಭಾಗಿಯಾಗಲು ಯಾಮಿ ಪತಿ ಜೊತೆಗೆ ಮುಂಬೈಗೆ ಆಗಮಿಸಿದ್ದಾರೆ. ಈಗ ಯಾಮಿ ಕೈಯ್ಯಲ್ಲಿ ‘ಭೂತ್ ಪೊಲೀಸ್’, ‘ದಸ್ವಿ’, ‘ಎ ಥರ್ಸಡೇ’ ಸಿನಿಮಾಗಳಿವೆ.