Karnataka Unlock 3.0: ಅನ್ಲಾಕ್ 3.O ಜಾರಿ, ಇಂದಿನಿಂದ ಕರುನಾಡು ಕಂಪ್ಲೀಟ್ ಓಪನ್

ಬೆಂಗಳೂರು: ಕೊರೊನಾ ನಿಯಂತ್ರಿಸಲು ಲಾಕ್ಡೌನ್ ಹೇರಲಾಗಿತ್ತು. ಸದ್ಯ ಕೊರೊನಾ ಕಡಿಮೆಯಾಗಿದ್ದು ಹಂತ ಹಂತವಾಗಿ ಅನ್ಲಾಕ್ ಮಾಡಲಾಗುತ್ತಿದೆ. ಸೆಮಿ ಅನ್ಲಾಕ್, ಹಾಫ್ ಅನ್ಲಾಕ್ ಅಂತಾ ಅರ್ಧಂಬರ್ಧ ಓಪನ್ ಆಗಿದ್ದ ಕರುನಾಡು ಕಂಪ್ಲೀಟ್ ಆಗಿ ಅನ್ಲಾಕ್ ಆಗಿದೆ. ಫಿಫ್ಟಿ ಲಾಕ್ ಫಿಫ್ಟಿ ಓಪನ್ ಸೂತ್ರ ಬಿಟ್ಟು ಹಂಡ್ರೆಡ್ ಪರ್ಸೆಂಟ್ ಓಪನ್ ಆಗಲಿದೆ. ಕಳೆದೆರಡು ತಿಂಗಳಿಂದ ಬಿದ್ದಿದ್ದ ಬೀಗ ಸಂಪೂರ್ಣವಾಗಿ ಓಪನ್ ಮಾಡಲಾಗಿದೆ. ಆನ್ಲಾಕ್ 3.Oನಲ್ಲಿ ರಾಜ್ಯದ ಒಂದೆರಡು ಜಿಲ್ಲೆ ಹೊರತುಪಡಿಸಿ ಎಲ್ಲಾ ಕಡೆ ಕಂಪ್ಲೀಟ್ ಓಪನ್ಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಹೀಗಾಗಿ ಇಷ್ಟು ದಿನ ಸಂಜೆ 5ರವರೆಗೆ ಮಾತ್ರ ಓಪನ್ ಇದ್ದ ಅಂಗಡಿಗಳು ಇಂದಿನಿಂದ ಬೆಳಗ್ಗೆ 6 ಗಂಟೆಯಿಂದ ರಾತ್ರಿ 9 ಗಂಟೆವರೆಗೂ ವಹಿವಾಟು ನಡೆಸಲಿವೆ.

ಕಂಪ್ಲೀಟ್ ಅನ್ಲಾಕ್ ಘೋಷಣೆಯಾಗ್ತಿದ್ದಂತೆ ಮನೆಯಲ್ಲೇ ಕೂತು ಬೋರ್ ಹೊಡೆದಿದ್ದ ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಇನ್ನಾದ್ರೂ ಸ್ವಲ್ಪ ಶಾಪಿಂಗ್, ಈಟಿಂಗು ಅಂತಾ ಹೊರಗಡೆ ಹೋಗ್ಬಹುದು. ವೀಕೆಂಡ್ನಲ್ಲಿ ಮಾಲ್ಗಳಲ್ಲಿ ಸ್ವಚ್ಛಂದವಾಗಿ ಓಡಾಡಬಹುದು ಅಂತಾ ಖುಷಿಯಾಗಿದ್ದಾರೆ. ಇತ್ತ ಸರ್ಕಾರ ಪರ್ಮಿಷನ್‌ ಕೊಡ್ತಿದ್ದಂತೆ ಶಾಪಿಂಗ್ ಮಾಲ್‌ಗಳಲ್ಲಿ ಎಲ್ಲಾ ಪ್ರಿಪರೇಷನ್ ಮಾಡಲಾಗಿದೆ. ಬೆಂಗಳೂರಿನ ಗರುಡಾ ಮಾಲ್, ಮಂತ್ರಿ ಮಾಲ್, ಓರಾಯನ್ ಮಾಲ್ಗಳು ಶಾಪಿಂಗ್ ಪ್ರಿಯರನ್ನು ವೆಲ್ಕಮ್ ಮಾಡಲು ಸರ್ವಸನ್ನದ್ಧವಾಗಿವೆ.

ಮತ್ತೊಂದೆಡೆ ಇಷ್ಟು ದಿನ ಪಾರ್ಸೆಲ್ ಕೌಂಟರ್ನಲ್ಲಿ ಮಾತ್ರ ವಹಿವಾಟು ನಡೆಸ್ತಿದ್ದ ಬಾರ್ಗಳ ಟೇಬಲ್ಗಳಲ್ಲಿ ಮತ್ತೆ ಹಿಂದಿನ ಕಳೆ ಮೂಡಿದೆ. ಕಂಪ್ಲೀಟ್ ಕ್ಲೀನ್ ಆಗಿ ಲಕಲಕ ಹೊಳೆಯುತ್ತಿರೋ ಟೇಬಲ್ಗಳು ಮದ್ಯಪ್ರಿಯರನ್ನು ಅಟ್ರ್ಯಾಕ್ಟ್ ಮಾಡ್ತಿವೆ.

ಮಾಲ್ ಬೀಗ ಓಪನ್
ಇನ್ನು ಶಾಪಿಂಗ್‌ ಮಾಲ್‌ಗಳಿಗೂ ಯಾವುದೇ ಕಂಡಿಷನ್ ಇಲ್ಲದೇ, ಬಾಗಿಲು ತೆರೆಯೋಕೆ ಪ್ರಮಿಷನ್ ಸಿಕ್ಕಿದ್ದು ಇಂದಿನಿಂದ ಮಾಲ್‌ಗಳು ಝಗಮಗಿಸೋಕೆ ರೆಡಿಯಾಗಿವೆ. ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆವರೆಗೂ ಮಾಲ್‌ಗಳು ಓಪನ್ ಆಗುತ್ತೆ. ಕೊವಿಡ್ ನಿಯಮ ಪಾಲಿಸಿಕೊಂಡು ಶೇಕಡಾ 100ರಷ್ಟು ಸಿಬ್ಬಂದಿಯೊಂದಿಗೆ ಮಾಲ್‌ಗಳನ್ನ ಓಪನ್ ಮಾಡಬಹುದಾಗಿದೆ.

ಬಾರ್ನಲ್ಲೇ ಮತ್ತಿನ ಗಮ್ಮತ್ತು
ಅನ್‌ಲಾಕ್ 3.Oನಲ್ಲಿ ಮದ್ಯಪ್ರಿಯರಿಗೆ ಮತ್ತಷ್ಟು ಕಿಕ್‌ ನೀಡಿರೋ ಸರ್ಕಾರ, ಬಾರ್‌ಗಳಲ್ಲಿ ಸಿಟ್ಟಿಂಗ್ ಹಾಕೋದಕ್ಕೆ ಪರ್ಮಿಷನ್ ಕೊಟ್ಟಿದೆ. ಈವರೆಗೂ ಸಂಜೆ 5ಗಂಟೆವರೆಗೂ ಮಾತ್ರ ಬಾರ್‌ನಲ್ಲಿ ಮದ್ಯ ಪಾರ್ಸೆಲ್‌ಗೆ ಅವಕಾಶವಿತ್ತು. ಆದ್ರೆ, ಇಂದಿನಿಂದ ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆವರೆಗೂ ಬಾರ್ ಓಪನ್ ಆಗುತ್ತೆ. ಎರಡು ತಿಂಗಳ ಬಳಿಕ ಬಾರ್‌ನಲ್ಲಿ ಕುಳಿತು ಕಿಕ್‌ ಏರಿಸೋ ಚಾನ್ಸ್ ಕೊಡಲಾಗಿದೆ.

ಮೆಟ್ರೋ, ಬಸ್ ‘ಫುಲ್’ ರಶ್
ಇಂದಿನಿಂದ ಶೇಕಡಾ 100ರಷ್ಟು ಪ್ರಯಾಣಿಕರ ಸಂಚಾರಕ್ಕೆ ಸರ್ಕಾರ ಪರ್ಮಿಷನ್ ಕೊಟ್ಟಿದೆ. ಬಿಎಂಟಿಸಿ, ಕೆಎಸ್ಆರ್ಟಿಸಿ, ಖಾಸಗಿ ಬಸ್ ಸಂಚಾರಕ್ಕೆ ಸಂಪೂರ್ಣ ಅವಕಾಶ ನೀಡಲಾಗಿದ್ದು, ಇಂದಿನಿಂದ ಮೂರುವರೆ ಸಾವಿರದಿಂದ ನಾಲ್ಕು ಸಾವಿರ ಕೆಎಸ್‌ಆರ್‌ಟಿಸಿ ಬಸ್‌ಗಳು ರಸ್ತೆಗಿಳಿಯಲಿವೆ. ಅಲ್ಲದೇ 5 ಸಾವಿರ ಬಿಎಂಟಿಸಿ ಬಸ್ಗಳು ಬೀದಿಗಿಳಿಯಲಿವೆ. ಇನ್ನೂ ಮೆಟ್ರೋದಲ್ಲೂ ಶೇಕಡಾ 100 ಪ್ರಯಾಣಿಕರ ಸಂಚಾರಕ್ಕೆ ಅವಕಾಶ ನೀಡಲಾಗಿದ್ದು, ರಾತ್ರಿ 8ಗಂಟೆವರೆಗೂ ಮೆಟ್ರೋ ಓಡಾಡಲಿದೆ.

ಇವಿಷ್ಟು ಮೇಜರ್ ರಿಲೀಫ್ಗಳಾದ್ರೆ ಇನ್ನು ಕಚೇರಿಗಳ ಕಾರ್ಯನಿರ್ವಹಣೆ, ಮದ್ವೆ, ಫ್ಯಾಮಿಲಿ ಪ್ರೋಗ್ರಾಂಗಳ ಕತೆ ಏನು ಅನ್ನೋದನ್ನು ನೋಡೋದಾದ್ರೆ..

ಯಾವುದಕ್ಕೆ ಏನ್ ಕಂಡಿಷನ್?
ಹೋಟೆಲ್ಗಳಲ್ಲಿ ರಾತ್ರಿ 9 ಗಂಟೆವರೆಗೂ ಕುಳಿತು ಊಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ಅಷ್ಟೇ ಅಲ್ಲದೆ ಎಲ್ಲ ಅಂಗಡಿ ಮುಂಗಟ್ಟುಗಳು ರಾತ್ರಿ 9 ಗಂಟೆವರೆಗೂ ಓಪನ್ ಮಾಡಿ ವ್ಯಾಪಾರ ವಹಿವಾಟು ನಡೆಸಬಹುದಾಗಿದೆ. ಇನ್ನು ಶೇಕಡಾ100ರಷ್ಟು ಸಿಬ್ಬಂದಿ ಬಳಸಿ ಸರ್ಕಾರಿ, ಖಾಸಗಿ ಕಚೇರಿಗಳು ಕಾರ್ಯನಿರ್ವಹಿಸಬಹುದಾಗಿದೆ. ಹಾಗೇನೆ ದೇವಸ್ಥಾನಗಳಲ್ಲಿ ಭಕ್ತರಿಗೆ ದೇವರ ದರ್ಶನಕ್ಕೆ ಮಾತ್ರ ಅವಕಾಶ ಇದೆ. ಆದ್ರೆ, ದೇವಸ್ಥಾನದಲ್ಲಿ ಜನರಿಗೆ ಪ್ರಸಾದ ಹಂಚಿಕೆ, ಪೂಜೆಗೆ ಅವಕಾಶ ವಿಲ್ಲ. ಇನ್ನು ಮದುವೆ ಸಮಾರಂಭಕ್ಕೆ ಇಷ್ಟು ದಿನ 40 ಜನರಿಗಷ್ಟೇ ಅವಕಾಶ ಇತ್ತು. ಆದ್ರೆ ಸೋಮವಾರದಿಂದ ಮದುವೆಗಳಲ್ಲಿ 100 ಜನ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಇನ್ನು ಅಂತ್ಯ ಸಂಸ್ಕಾರದಲ್ಲಿ 20 ಜನರಿಗೆ ಭಾಗವಹಿಸಲು ಪರ್ಮಿಷನ್ ಇದೆ. ಇನ್ನು ಈಜುಕೊಳ ಓಪನ್ ಮಾಡೋಕೆ ಅವಕಾಶ ಇದೆ ಆದ್ರೂ, ಕ್ರೀಡಾಪಟುಗಳಿಗೆ ಮಾತ್ರ ಪ್ರ್ಯಾಕ್ಟಿಸ್ ಮಾಡಲು ಪರ್ಮಿಷನ್ ನೀಡಲಾಗಿದೆ. ಜೊತೆಗೆ ಕ್ರೀಡಾ ಸಂಕೀರ್ಣಗಳು ತೆರೆಯಲಿದ್ದು, ಅಲ್ಲಿಯೂ ಕ್ರೀಡಾಪಟುಗಳು ಮಾತ್ರ ಅಭ್ಯಾಸ ಮಾಡೋ ಕಂಡಿಷನ್ ಇದೆ.

ರಾತ್ರಿ 9ರಿಂದ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂಗೆ ಗುಡ್ಬೈ
ಇನ್ನು ವೀಕೆಂಡ್ ಕರ್ಫ್ಯೂ ಕ್ಯಾನ್ಸಲ್ ಆಗುತ್ತಾ ಅನ್ನೋ ಕುತೂಹಲ ವೀಕೆಂಡ್ ಮಸ್ತಿ ಪ್ರಿಯರಿಗೆ ಇತ್ತು. ಅಂತವರಿಗೆ ಸರ್ಕಾರ ರಿಲೀಫ್ ಕೊಟ್ಟಿದ್ದು, ಈ ವಾರದಿಂದಲೇ ವೀಕೆಂಡ್ ಕರ್ಫ್ಯೂ ಇರಲ್ಲ. ಆದ್ರೆ, ನೈಟ್ ಕರ್ಫ್ಯೂ ಇರಲಿದ್ದು, ನೈಟ್ ಕರ್ಫ್ಯೂ ಅವಧಿಯನ್ನ ಕಡಿಮೆ ಮಾಡಲಾಗಿದೆ. ಅಂದ್ರೆ ಸಂಜೆ 7ರ ಬದಲಿಗೆ ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೂ ನೈಟ್ಕರ್ಫ್ಯೂ ಇರಲಿದೆ.

ಇಂದಿನಿಂದ ದೇಗುಲ ಓಪನ್, ಭಕ್ತರಿಗೆ ದೇವರ ದರ್ಶನ
ಇನ್ನು ಮಂದಿರ, ಚರ್ಚ್ ಮಸೀದಿಗಳಿಗೆ ತೆರಳಲಾಗದೆ ಮನಸ್ಸಿನಲ್ಲೇ ಪ್ರಾರ್ಥನೆ ಮಾಡ್ತಿದ್ದ ಭಕ್ತರಿಗೆ ಕೊನೆಗೂ ಗುಡ್‌ ನ್ಯೂಸ್ ಸಿಕ್ಕಿದೆ. ಹೀಗಾಗಿ ರಾಜ್ಯದ ಎಲ್ಲಾ ಪ್ರಾರ್ಥನಾ ಮಂದಿರಗಳಲ್ಲಿ ಇಂದಿನಿಂದ ಪ್ರಾರ್ಥನೆಗೆ ಅವಕಾಶ ಕಲ್ಪಿಸಲಾಗಿದೆ. ಬೆಂಗಳೂರಿನ ಬನಶಂಕರಿ, ಕಾಡು ಮಲ್ಲೇಶ್ವರ, ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ದೇವರ ದರ್ಶನ ಶುರುವಾಗಿದೆ.

ಒಟ್ನಲ್ಲಿ ಎರಡು ತಿಂಗಳ ಬಳಿಕ ಕರುನಾಡು ಕಂಪ್ಲೀಟ್ ಆಗಿ ಓಪನ್ ಆಗ್ತಿದೆ. ಹಾಗಂತಾ ಅನ್ಲಾಕ್ ಇದೆ ಅಂತೇಳಿ ಬೇಕಾಬಿಟ್ಟಿ ಓಡಾಡುತ್ತಾ, ಕೊವಿಡ್ ರೂಲ್ಸ್ ಬ್ರೇಕ್ ಮಾಡಿದ್ರೆ ಸಂಕಷ್ಟಕ್ಕೆ ಒಳಗಾಗಬೇಕಾಗುತ್ತೆ ಹುಷಾರ್. ಯಾಕಂದ್ರೆ ಅನ್‌ಲಾಕ್‌ನಲ್ಲೂ ಕಟ್ಟು ನಿಟ್ಟಿನ ರೂಲ್ಸ್‌ಗಳಿವೆ. ಈ ರೂಲ್ಸ್‌ಗಳನ್ನ ನೀವು ಫಾಲೋ ಮಾಡ್ಲೇ ಬೇಕು. ರೂಲ್ಸ್ ಫಾಲೋ ಮಾಡದೆ ಮತ್ತೆ ಕೊರೊನಾಗೆ ಆಹ್ವಾನ ಕೊಟ್ರೆ ಕಠಿಣ ಕ್ರಮಗಳನ್ನು ನೀವೇ ಮೈಮೇಲೆ ಹೇರಿದಂತಾಗುತ್ತೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *