ಬೆಂಗಳೂರಿನಲ್ಲಿ ದುಷ್ಕರ್ಮಿಗಳ ಅಟ್ಟಹಾಸ.. ಪೆಟ್ರೋಲ್ ಪಂಪ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಹಣ ದೋಚಿ ಪರಾರಿ

ಬೆಂಗಳೂರು: ದುಷ್ಕರ್ಮಿಗಳ ಗುಂಪೊಂದು ಪೆಟ್ರೋಲ್ ಪಂಪ್ ಬಳಿ ಪಂಪ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ 43,000 ರೂ ಕದ್ದು ಪರಾರಿಯಾದ ಘಟನೆ ಬೆಂಗಳೂರಿನ ಭಾರತಿ ನಗರ ವ್ಯಾಪ್ತಿಯಲ್ಲಿ ನಡೆದಿದೆ. ಪೆಟ್ರೋಲ್ ಪಂಪ್ನಲ್ಲಿ ನಡೆದ ಇಡೀ ಘಟನೆ ಅಲ್ಲೆ ಸಮೀಪದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಆರೋಪಿಗಳು ಇಂಧನ ತುಂಬಿಸಿಕೊಳ್ಳುವ ಸೋಗಿನಲ್ಲಿ ಪೆಟ್ರೋಲ್ ಪಂಪ್ಗೆ ಬೈಕ್ನಲ್ಲಿ ಬಂದು ಸಿಬ್ಬಂದಿಗೆ ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಸಿ ಹಲ್ಲೆ ನಡೆಸಿ ಹಣ ಕದ್ದಿದ್ದಾರೆ. ಈ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಟ್ಟೆಯಿಂದ ಮುಖ ಮುಚ್ಚಿಕೊಂಡಿದ್ದ ಇಬ್ಬರು ವ್ಯಕ್ತಿಗಳು ಪಂಪ್ ಸಿಬ್ಬಂದಿ ಬಳಿ ಬಂದು ಮಾರಕಾಸ್ತ್ರವನ್ನು ತೋರಿಸಿ ಹೆದರಿಸುತ್ತಾರೆ. ಮತ್ತು ಮುಖ ಮುಚ್ಚಿದ ಕೆಂಪು ಶರ್ಟ್ ಧರಿಸಿರುವ ಮತ್ತೊಮ್ಮ ವ್ಯಕ್ತಿ ಸಿಬ್ಬಂದ ಬಳಿ ಬಂದು ಆತನ ಬಳಿ ಇದ್ದ ಹಣವನ್ನು ಕದ್ದು ಆತನ ಮೇಲೆ ಹಲ್ಲೆ ನಡೆಸಿ ಮೂವರು ಬೈಕ್ ಹತ್ತಿ ಪರಾರಿಯಾಗುತ್ತಾರೆ. ಈ ಭಯಾನಕ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿವೆ.

ಹಲ್ಲೆ ನೋಡಿ ಗ್ರಾಹಕರೂ ಸಹ ಪರಾರಿ
ಇನ್ನು ದುಷ್ಕರ್ಮಿಗಳು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದನ್ನು ನೋಡಿ ಪೆಟ್ರೋಲ್ ತುಂಬಿಸಿಕೊಳ್ಳಲು ಬಂದಿದ್ದ ಇತರೆ ಗ್ರಾಹಕರು ಯಾಕಪ್ಪ ಸಹವಾಸ ಎಂದು ಅಲ್ಲಿಂದ ಪರಾರಿಯಾಗಿದ್ದಾರೆ. ಅದರಲ್ಲಿ ಒಬ್ಬ ಗ್ರಾಹಕ ತನ್ನ ದ್ವಿಚಕ್ರ ವಾಹನವನ್ನು ಬಿಟ್ಟು ಆರೋಪಿಗಳನ್ನು ನೋಡಿದ ನಂತರ ಓಡಿಹೋಗುವುದನ್ನು ಕಾಣಬಹುದು.

ಸಿಬ್ಬಂದಿ ಬಳಿ ಇದ್ದ ಹಣವನ್ನು ಕಸಿದುಕೊಂಡ ನಂತರ ಆರೋಪಿಗಳು ಸ್ಥಳದಿಂದ ಪರಾರಿಯಾದ ಬಳಿಕ ಕೊನೆಗೆ ಪೆಟ್ರೋಲ್ ಪಂಪ್‌ನ ಇತರ ಇಬ್ಬರು ಉದ್ಯೋಗಿಗಳು ಆರೋಪಿಗಳ ಕಡೆಗೆ ಓಡಿ ಬರುತ್ತಾರೆ. ಕೆಳಗೆ ಬಿದ್ದ ಸಿಬ್ಬಂದಿಯನ್ನು ಮೇಲೆತ್ತಿ ಆತನಿಗೆ ಹಲ್ಲೆಯಾಗಿರುವುದನ್ನು ನೋಡುತ್ತಾರೆ. ಸದ್ಯ ಘಟನೆಯ ಅಷ್ಟೂ ದೃಶ್ಯಗಳು ಸೆರೆಯಾಗಿದ್ದು ಘಟನೆಗೆ ಸಂಬಂಧಿಸಿದಂತೆ ಭಾರತಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Miscreants assault petrol pump employee

ಬೆಂಗಳೂರಿನಲ್ಲಿ ದುಷ್ಕರ್ಮಿಗಳ ಅಟ್ಟಹಾಸ

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *