6 ಸಚಿವರ ಒಗ್ಗಟ್ಟಿನ ರಹಸ್ಯವೇನು.. ?
ಬೆಂಗಳೂರು, ಜು.4- ಚುನಾವಣೆ ದೃಷ್ಟಿಯಿಂದಾಗಿ ಜಾತಿವಾರು ಮತಗಳ ಕ್ರೂಢೀಕರಣಕ್ಕೆ ಬಿಜೆಪಿಯಲ್ಲಿ ರಣತಂತ್ರ ಶುರುವಾಗಿದ್ದು, ಪ್ರಭಾವಿ ಸಮುದಾಯಗಳ ನಾಯಕರು ಸಿಡಿಕೇಟ್ ಮಾಡಿಕೊಂಡು ಮುನ್ನೆಲೆಗೆ ಬರುವ ಪ್ರಯತ್ನ ನಡೆಸುತ್ತಿದ್ದಾರೆ.
ಫುಡ್‍ಕಿಟ್‍ವಿತರಣೆ ಸೇರಿದಂತೆ ಅನೇಕ ಕಾರ್ಯಕ್ರಮಗಳಲ್ಲಿ ಈ ಆರು ಮಂದಿ ಸಚಿವರು ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಶೋಕ್ ಅವರ ಪದ್ಮನಾಭನಗರ ಕ್ಷೇತ್ರ, ಬೈರತಿ ಬಸವರಾಜು ಅವರ ಕೆ.ಆರ್.ಪುರಂ ಕ್ಷೇತ್ರ ಸೇರಿದಂತೆ ಅನೇಕ ಕಾರ್ಯಕ್ರಮಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ.
ವಿಧಾನಸೌಧದ ಮುಂಭಾಗದಲ್ಲಿ ನಡೆದ ಕೆಂಪೇಗೌಡ ಜಯಂತಿ ಆಚರಣೆ ಸಂದರ್ಭದಲ್ಲೂ ಅಶೋಕ್ ಕಾರ್ಯಕ್ರಮದಲ್ಲಿ ಭಾಗವಹಿಸದೆ ಕೆ.ಆರ್.ಪುರಂನಲ್ಲಿ ಬೀಡುಬಿಟ್ಟಿದ್ದು ಹಲವರು ಉಬ್ಬೇರಿಸುವಂತೆ ಮಾಡಿತ್ತು.
ಮುಂದಿನ ದಿನಗಳಲ್ಲೂ ಈ ಸಚಿವರ ಸಿಂಡಿಕೇಟ್ ಒಟ್ಟಾಗಿ ಕಾಣಿಸಿಕೊಳ್ಳಲಿದೆ ಎಂಬ ಚರ್ಚೆಗಳು ನಡೆಯುತ್ತಿದೆ. ತಮ್ಮ ತಮ್ಮ ಕ್ಷೇತ್ರಗಳನ್ನು ಗಟ್ಟಿಮಾಡಿಕೊಳ್ಳಲು ಅಲ್ಲಿರುವ ಜಾತಿವಾರು ಮತಗಳನ್ನು ಕ್ರೂಢೀಕರಿಸಲು ಪರಸ್ಪರ ಒಪ್ಪಂದದ ಮೂಲಕ ಸಿಂಡಿಕೇಟ್‍ನ ಸಚಿವರು ಕಾರ್ಯಾಚರಣೆಗಿಳಿದಿದ್ದಾರೆ.
ಜತೆಗೆ ಬಿಜೆಪಿಗೆ ಬೇರೆ ಬೇರೆ ಜಾತಿಗಳ ಮತಗಳನ್ನು ಕ್ರೂಢೀಕರಿಸುವ ಪ್ರಯತ್ನ ನಡೆಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಮತ್ತೊಂದೆಡೆ ರಾಜಕೀಯವಾಗಿಯೂ ನಾನಾ ರೀತಿಯ ವ್ಯಾಕ್ಯಾನಗಳು ನಡೆದಿವೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಶಕ್ತಿ ಕೇಂದ್ರ ಕರ್ನಾಟಕದಲ್ಲಿ ಬಲವಾಗಿದೆ. ಇದಕ್ಕೆ ಪರ್ಯಾಯವಾಗಿ ಮತ್ತೊಂದು ಶಕ್ತಿ ಕೇಂದ್ರ ಸೃಷ್ಟಿಸುವ ಪ್ರಯತ್ನವೂ ನಡೆದಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.