ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಇದು ಸಕಾಲವಲ್ಲ : ಎಚ್.ವಿಶ್ವನಾಥ್
ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಸೂಕ್ತ ಸಮಯವಲ್ಲ ಎಂದು ಮಾಜಿ ಸಚಿವ ಎಚ್. ವಿಶ್ವನಾಥ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಜುಲೈ 3ನೇ ವಾರದಲ್ಲಿ ಡೆಲ್ಟಾ ಪ್ಲಸ್ ಅಲೆ ಬರಲಿದೆ ಎಂದು ಹೇಳಲಾಗುತ್ತಿದೆ.
ಡೆಲ್ಟಾ ಪ್ಲಸ್ ಮಕ್ಕಳ ಮೇಲೆ ಪರಿಣಾಮ ಬೀರಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಇದರಿಂದ ಎಲ್ಲಾ ಕಡೆ ಒಂದು ರೀತಿಯ ಆತಂಕದ ವಾತಾವರಣವಿದ್ದು, ಪರೀಕ್ಷೆ ನಡೆಸಲು ಸಕಾಲವಲ್ಲ ಎಂದಿದ್ದಾರೆ.
ಇನ್ನು ಸರಿಯಾಗಿ ಪಾಠ ಪ್ರವಚನ ಗಳಾಗಿಲ್ಲ. ಮಕ್ಕಳು ಶಾಲೆ ಮುಖ ನೋಡಿ ತಿಂಗಳುಗಟ್ಟಲೆ ಆಗಿದೆ. ಮಕ್ಕಳು ಆನ್ ಲೈನ್ ಪಾಠ ಕೇಳೋಕೆ ಸೂಕ್ತ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದಾರೆ. ಪರೀಕ್ಷೆ ನಡೆಸುವುದರಿಂದ ಮಕ್ಕಳ ಮೇಲೆ ಅನಾಹುತ ವಾದರೆ ಯಾರು ಹೊಣೆ ಎಂದು ಅವರು ಪ್ರಶ್ನಿಸಿದ್ದಾರೆ.
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಪರೀಕ್ಷೆ ನಡೆಸಲೇ ಬೇಕೆಂಬ ಹಠದಿಂದ ಹಿಂದೆ ಸರಿಯಬೇಕು ಎಂದು ಅವರು ಹೇಳಿದರು.