ಕೆಆರ್ ಎಸ್ ಗೆ ಸುಮಲತಾರನ್ನೇ ಅಡ್ಡ ಮಲಗಿಸಬೇಕು; ಹೆಚ್ ಡಿಕೆ ಹೊಸ ವಿವಾದ

ಕೆಆರ್ ಎಸ್ ಡ್ಯಾಂ ಬಿರುಕು ಬಿಟ್ಟಿದೆ. ರಕ್ಷಣೆಗಾಗಿ ಕ್ರಮ ಕೈಗೊಳ್ಳುವುದಾಗಿ ಹೇಳಿಕೆ ನೀಡಿದ್ದ ಸಂಸದೆ ಸುಮಲತಾ ವಿರುದ್ಧ ವಾಗ್ದಾಳಿ ನಡೆಸಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಕೆ ಆರ್ ಎಸ್ ಬಿರುಕು ಬಿಟ್ಟರೆ ಸುಮಲತಾರನ್ನೇ ಕೆಆರ್ ಎಸ್ ಬಾಗಿಲಿಗೆ ಅಡ್ದ ಮಲಗಿಸಬೇಕು. ಆಗ ಬಿರುಕು ಮುಚ್ಚಬಹುದು ಎಂದು ವ್ಯಂಗ್ಯವಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಕೆಆರ್ ಎಸ್ ಬಿರುಕುಬಿಟ್ಟು ನೀರು ಸೋರಿಕೆಯಾಗುತ್ತಿದೆ. ಅದರ ಉಳಿವಿಗಾಗಿ ಹೋರಾಡುತ್ತೇನೆ ಎಂಬ ಹೇಳಿಕೆ ನಿಡಿದ್ದಾರೆ. ಸೋರುತ್ತಿದ್ದರೆ ಅವರನ್ನೇ ಅಡ್ಡ ಮಲಗಿಸಬೇಕು. ಮಂಡ್ಯ ಜಿಲ್ಲೆಗೆ ಸುಮಲತಾರಂತ ಸಂಸದರು ಹಿಂದೆ ಬಂದಿಲ್ಲ, ಮುಂದೆ ಬರುವುದೂ ಇಲ್ಲ. ಯಾವುದೋ ಅನುಕಂಪದ ಆಧಾರದ ಮೇಲೆ ಸಂಸದರಾಗಿ ಆಯ್ಕೆಯಾದವರು, ಅವಕಾಶ ಸಿಕ್ಕಿರುವಾಗ ಸಮರ್ಪಕವಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡಿ, ಜನರ ಹಿತ ಕಾಯಬೇಕು. ಅದನ್ನು ಬಿಟ್ಟು ಯಾವುದೇ ಕೆಲಸವನ್ನೇ ಮಾಡದೇ ಅನಗತ್ಯ ಹೇಳಿಕೆಗಳನ್ನು ನೀಡುವುದು ಯಾರದೋ ಮೇಲಿನ ವೈಯಕ್ತಿಕ ದ್ವೇಷದಿಂದ ಇನ್ನೆಲ್ಲೋ ಮಾತನಾಡುವುದು ಸರಿಯಲ್ಲ ಎಂದರು.

ಸಂಸದರು ಜಿಲ್ಲೆಯಲ್ಲಿ ಮಾಡಿದ ಕೆಲಸವಾದರೂ ಏನು ಎಂಬುದನ್ನು ಕ್ಷೇತ್ರದ ಜನರೂ ನೋಡುತ್ತಿದ್ದಾರೆ ಎಲ್ಲರಿಗೂ ಗೊತ್ತಿದೆ. ಇಂತಹ ರಾಜಕಾರಣಿಗಳಿಗೆ ಮುಂದಿನ ದಿನಗಳಲ್ಲಿ ಜನರೇ ಬುದ್ಧಿ ಕಲಿಸ್ತಾರೆ ಎಂದು ಕಿಡಿಕಾರಿದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *