9 ಮಂದಿ ನಾಮಿನೇಟೆಡ್: ಈ ವಾರ ‘ಬಿಗ್ ಬಾಸ್’ ಮನೆಯಿಂದ ಔಟ್ ಆಗೋರು ಯಾರು?

ಹೈಲೈಟ್ಸ್‌:

  • ‘ಬಿಗ್ ಬಾಸ್ ಕನ್ನಡ 8’ ಕಾರ್ಯಕ್ರಮದಿಂದ ಈ ವಾರ ಔಟ್ ಆಗೋರು ಯಾರು?
  • ನಾಮಿನೇಟ್ ಆಗಿದ್ದಾರೆ ಒಟ್ಟು 9 ಮಂದಿ
  • ಡೇಂಜರ್ ಝೋನ್‌ನಲ್ಲಿದ್ದಾರೆ ಚಕ್ರವರ್ತಿ ಚಂದ್ರಚೂಡ್, ಮಂಜು ಪಾವಗಡ, ಪ್ರಿಯಾಂಕಾ ತಿಮ್ಮೇಶ್, ದಿವ್ಯಾ ಸುರೇಶ್, ಪ್ರಶಾಂತ್ ಸಂಬರಗಿ, ರಘು, ಶಮಂತ್, ವೈಷ್ಣವಿ ಹಾಗೂ ಅರವಿಂದ್

ಬಿಗ್ ಬಾಸ್ ಕನ್ನಡ 8‘ ಕಾರ್ಯಕ್ರಮದ ಸೆಕೆಂಡ್ ಇನ್ನಿಂಗ್ಸ್‌ನ ಎರಡನೇ ನಾಮಿನೇಷನ್ ಪ್ರಕ್ರಿಯೆ ಮುಕ್ತಾಯಗೊಂಡಿದೆ. ನಾಮಿನೇಷನ್ ಪ್ರಕ್ರಿಯೆಯಲ್ಲಿ ಅಂತಿಮವಾಗಿ ಒಟ್ಟು 9 ಮಂದಿ ನಾಮಿನೇಟ್ ಆಗಿದ್ದಾರೆ. ಚಕ್ರವರ್ತಿ ಚಂದ್ರಚೂಡ್, ಮಂಜು ಪಾವಗಡ, ಪ್ರಿಯಾಂಕಾ ತಿಮ್ಮೇಶ್, ದಿವ್ಯಾ ಸುರೇಶ್, ಪ್ರಶಾಂತ್ ಸಂಬರಗಿ, ರಘು, ಶಮಂತ್, ವೈಷ್ಣವಿ ಹಾಗೂ ಅರವಿಂದ್ ಈ ವಾರ ಡೇಂಜರ್ ಝೋನ್‌ನಲ್ಲಿದ್ದಾರೆ.

ಸೇಫ್ ಆಗಿದ್ದ ದಿವ್ಯಾ ಉರುಡುಗ
ಈ ವಾರ ಮನೆಯ ಕ್ಯಾಪ್ಟನ್ ಆಗಿರುವುದರಿಂದ ದಿವ್ಯಾ ಉರುಡುಗ ನಾಮಿನೇಷನ್ ಪ್ರಕ್ರಿಯೆಯಲ್ಲಿ ಸೇಫ್ ಆಗಿದ್ದರು. ಇನ್ನೂ ಅರವಿಂದ್‌ರನ್ನ ನಿಧಿ ಸುಬ್ಬಯ್ಯ ನೇರವಾಗಿ ನಾಮಿನೇಟ್ ಮಾಡಿದ್ದರು. ಹೀಗಾಗಿ ಅರವಿಂದ್ ವಿರುದ್ಧವೂ ಯಾರೂ ಮತ ಚಲಾಯಿಸುವಂತಿರಲಿಲ್ಲ.

ಟಾರ್ಗೆಟ್ ಆದ ಚಕ್ರವರ್ತಿ ಚಂದ್ರಚೂಡ್
ಕಳೆದ ವಾರ ‘ಬಿಗ್ ಬಾಸ್’ ಮನೆಯಲ್ಲಿ ರಂಪ ಮಾಡಿಕೊಂಡಿದ್ದ ಚಕ್ರವರ್ತಿ ಚಂದ್ರಚೂಡ್ ನಾಮಿನೇಷನ್‌ನಲ್ಲಿ ಟಾರ್ಗೆಟ್ ಆದರು. ಚಕ್ರವರ್ತಿ ಚಂದ್ರಚೂಡ್ ವಿರುದ್ಧ ಮಂಜು ಪಾವಗಡ, ವೈಷ್ಣವಿ, ಪ್ರಿಯಾಂಕಾ ತಿಮ್ಮೇಶ್, ದಿವ್ಯ ಸುರೇಶ್, ಶುಭಾ ಪೂಂಜಾ ವೋಟ್ ಹಾಕಿದರು.

ಎಲ್ಲರ ವಿರುದ್ಧವೂ ವೋಟ್
ಮಂಜು ಪಾವಗಡ, ಪ್ರಶಾಂತ್ ಸಂಬರಗಿ, ಶುಭಾ ಪೂಂಜಾ, ರಘು, ಶಮಂತ್, ದಿವ್ಯಾ ಸುರೇಶ್, ವೈಷ್ಣವಿ, ಪ್ರಿಯಾಂಕಾ ವಿರುದ್ಧವೂ ವೋಟ್‌ಗಳು ಬಿದ್ದವು. ಹೀಗಾಗಿ ಎಲ್ಲರನ್ನೂ ಈ ವಾರ ಎಲಿಮಿನೇಷನ್‌ಗೆ ‘ಬಿಗ್ ಬಾಸ್’ ನಾಮಿನೇಟ್ ಮಾಡಿದ್ದಾರೆ.

ಬಚಾವ್ ಆದ ಶುಭಾ ಪೂಂಜಾ
‘ಬಿಗ್ ಬಾಸ್’ ಮನೆಯ ಕೆಲಸಗಳನ್ನು ಮಾಡಲ್ಲ, ಟಾಸ್ಕ್‌ಗಳಲ್ಲಿ ಸೀರಿಯಸ್ ಆಗಿ ಆಡಲ್ಲ ಎಂಬ ಆರೋಪ ಶುಭಾ ಪೂಂಜಾ ವಿರುದ್ಧ ಇದೆ. ಇದೇ ಕಾರಣವನ್ನು ಇಟ್ಟುಕೊಂಡು ಈ ವಾರ ಶುಭಾ ಪೂಂಜಾರನ್ನ ಕೆಲ ಸದಸ್ಯರು ನಾಮಿನೇಟ್ ಮಾಡಿದ್ದರು. ಆದರೆ, ಕೊನೆಯಲ್ಲಿ ನಾಮಿನೇಷನ್‌ನಿಂದ ಒಬ್ಬರನ್ನು ಸೇಫ್ ಮಾಡುವ ಅಧಿಕಾರವನ್ನು ಕ್ಯಾಪ್ಟನ್ ದಿವ್ಯಾ ಉರುಡುಗಗೆ ‘ಬಿಗ್ ಬಾಸ್’ ನೀಡಿದರು. ಅದರಂತೆ ಶುಭಾ ಪೂಂಜಾರನ್ನ ದಿವ್ಯಾ ಉರುಡುಗ ಸೇಫ್ ಮಾಡಿದರು.

ಔಟ್ ಆಗೋರು ಯಾರು?
ಈ ವಾರ ‘ಬಿಗ್ ಬಾಸ್’ ಮನೆಯಿಂದ ಔಟ್ ಆಗಲು ಚಕ್ರವರ್ತಿ ಚಂದ್ರಚೂಡ್, ಮಂಜು ಪಾವಗಡ, ಪ್ರಿಯಾಂಕಾ ತಿಮ್ಮೇಶ್, ದಿವ್ಯಾ ಸುರೇಶ್, ಪ್ರಶಾಂತ್ ಸಂಬರಗಿ, ರಘು, ಶಮಂತ್, ವೈಷ್ಣವಿ ಹಾಗೂ ಅರವಿಂದ್ ನಾಮಿನೇಟ್ ಆಗಿದ್ದಾರೆ. ಈ ಪೈಕಿ ಔಟ್ ಆಗೋರು ಯಾರು ಎಂಬುದು ವಾರಾಂತ್ಯದಲ್ಲಿ ತಿಳಿಯಲಿದೆ. ಅಂದ್ಹಾಗೆ, ನಿಮ್ಮ ಬೆಂಬಲ ಯಾರಿಗೆ ಎಂಬುದನ್ನು ಕಾಮೆಂಟ್ ಮೂಲಕ ತಿಳಿಸಿ…

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *