ಕೋವಿಶೀಲ್ಡ್‌ ಹಾಕಿಸಿಕೊಂಡ 70ರ ಹರೆಯದ ಅಜ್ಜಿಗೆ ಮರುಕಳಿಸಿತು ಕಣ್ಣಿನ ದೃಷ್ಟಿ..!

ಮುಂಬಯಿ: ಮಹಾರಾಷ್ಟ್ರದ ವಾಶಿಮ್‌ ಜಿಲ್ಲೆಯ ಮಥುರಾಬಾಯಿ ಬಿಡ್ವೆ ಅವರು ಜೂ.26ರಂದು ಕೋವಿಶೀಲ್ಡ್‌ ಲಸಿಕೆ ಪಡೆದ ಮಾರನೇಯ ದಿನವೇ ಕಣ್ಣಿನ ದೃಷ್ಟಿಯನ್ನು ಮರಳಿ ಪಡೆದಿದ್ದಾರೆ.

ಒಂಬತ್ತು ವರ್ಷ ಹಿಂದೆ ಕ್ಯಾಟರಾರ‍ಯಕ್ಟ್ನಿಂದಾಗಿ 70 ವರ್ಷದ ಮಥುರಾಬಾಯಿ ಅವರು ದೃಷ್ಟಿ ಕಳೆದುಕೊಂಡಿದ್ದರು. ಸದ್ಯ ಲಸಿಕೆಯ ಪ್ರಭಾವದಿಂದ ಅವರಿಗೆ 30-40% ದೃಷ್ಟಿ ಮರುಕಳಿಸಿದೆ ಎಂದು ವರದಿಯಾಗಿದೆ. ಈ ಬಗ್ಗೆ ವೈಜ್ಞಾನಿಕ ಅಧ್ಯಯನ ಇನ್ನೂ ಕೂಡ ನಡೆಯಬೇಕಿದೆ. ಕಳೆದ ಜೂನ್‌ನಲ್ಲಿ 71 ವರ್ಷದ ಅರವಿಂದ್‌ ಸೋನಾರ್‌ ಎಂಬ ವ್ಯಕ್ತಿಯು ಕೋವಿಶೀಲ್ಡ್‌ ಪಡೆದ ಬಳಿಕ ದೇಹವು ಅಯಸ್ಕಾಂತ ಶಕ್ತಿ ಪಡೆದಿದೆ ಎಂದು ಹೇಳಿಕೊಂಡಿದ್ದರು. ಅವರ ಮೈಗೆ ಕಬ್ಬಿಣದ ಸಾಧನಗಳು ಅಂಟಿಕೊಂಡಿರುವ ವಿಡಿಯೊವೊಂದು ವೈರಲ್‌ ಆಗಿತ್ತು.

ಸ್ಪುಟ್ನಿಕ್‌ ತಯಾರಿಕೆ: ಭಾರತದ ಔಷಧ ತಯಾರಿಕೆ ಕಂಪನಿ ಮೋರ್‌ಪೆನ್‌ ಲ್ಯಾಬೊರೆಟರೀಸ್‌, ರಷ್ಯಾ ಅಭಿವೃದ್ಧಿಪಡಿಸಿರುವ ಸ್ಪುಟ್ನಿಕ್‌ ವಿ ಕೊರೊನಾ ನಿರೋಧಕ ಲಸಿಕೆಯ ಪರೀಕ್ಷಾರ್ಥ ಬ್ಯಾಚ್‌ಗಳ ಉತ್ಪಾದನೆ ಆರಂಭಿಸಿದೆ. ಹಿಮಾಚಲ ಪ್ರದೇಶದಲ್ಲಿನ ಘಟಕದಲ್ಲಿ ಲಸಿಕೆಯ ತಯಾರಿಕೆ ನಡೆಯುತ್ತಿದ್ದು, ಶೀಘ್ರವೇ ಲಸಿಕಾ ಅಭಿಯಾನಕ್ಕೆ ಡೋಸ್‌ಗಳು ಪೂರೈಕೆ ಆಗಲಿವೆ ಎಂದು ತಿಳಿದುಬಂದಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *