ಕಷ್ಟ ಎಂದ ಮೀನುಗಾರ ಮಹಿಳೆಯ ಬಳಿ 100 ಕೇಜಿ ಮೀನು ಖರೀಧಿಸಿದ ನಲಪಾಡ್ ! ಕರಾವಳಿಯಲ್ಲಿ ಕೆವೈಸಿ ನಿಯೋಜಿತ ಅಧ್ಯಕ್ಷನ ಹವಾ !
ಬೆಂಗಳೂರಿನಲ್ಲಿ ಹವಾ ಸೃಷ್ಟಿಸುತ್ತಿದ್ದ ಕಾಂಗ್ರೆಸ್ ನಿಯೋಜಿತ ಅಧ್ಯಕ್ಷ, ಯುವ ನಾಯಕ ಮೊಹಮ್ಮದ್ ನಲಪಾಡ್ ಕರಾವಳಿಯಲ್ಲೂ ಹೊಂದಿದ್ದಾರೆ.

ಯೂತ್ ಕಾಂಗ್ರೆಸ್ನ ಮುಂದಿನ ಪಟ್ಟಾಭಿಷೇಕ ಖಾತ್ರಿ ಆಗುತ್ತಿದ್ದಂತೆ ಮಹಮ್ಮದ್ ನಲಪಾಡ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜೊತೆ ಸೇರಿ ಉಡುಪಿಯ ಮಲ್ಪೆ ಬಂದರಿಗೆ ಭೇಟಿ ನೀಡಿದ್ದಾರೆ. ಮಲ್ಪೆ ಬಂದರನ್ನು ಜೊತೆಯಾಗಿ ಸುತ್ತಾಡಿ, ಪಕ್ಕದಲ್ಲಿನ ಮೀನು ಮಾರುಕಟ್ಟೆಗೂ ಭೇಟಿ ನೀಡಿ ಮೀನು ಮಾರಾಟಗಾರರ ಜೊತೆ ಮಾತಿಗಿಳಿದಿದ್ದಾರೆ.

ಕೊರೊನಾ ಮಹಾಮಾರಿಯಿಂದಾಗಿ ಮೀನಿನ ವ್ಯಾಪಾರ ತುಂಬ ಡಲ್ ಆಗಿದ್ದು, ಯಾವುದೇ ಲಾಭ ಆಗುತ್ತಿಲ್ಲ ಎಂದು ಮೀನು ವ್ಯಾಪಾರಸ್ಥರು ನಲಪಾಡ್ ಬಳಿ ನೋವು ತೊಡಿಕೊಂಡ ಬೆನ್ನಲ್ಲೆ ಜೇಬಿನಿಂದ ಕಂತೆ ಕಂತೆ ಹಣ ತೆಗೆದು ಎರಡು ಸಾವಿರಕ್ಕೆ ಕೆಜಿಯಂತೆ ಬರೋಬ್ಬರಿ 100 ಕೆಜಿ ಮೀನುಗಳನ್ನ ಖರೀದಿಸಿದ್ದಾರೆ.

