New Ministers Portfolio: ಶೋಭಾಗೆ ಕೃಷಿ, ರಾಜೀವ್ ಚಂದ್ರಶೇಖರ್ಗೆ ಕೌಶಲ ಅಭಿವೃದ್ಧಿ: ಇಲ್ಲಿದೆ ಹೊಸ ಸಚಿವರಿಗೆ ಸಿಕ್ಕ ಖಾತೆಗಳ ವಿವರ
ದೆಹಲಿ: ಕೇಂದ್ರ ಸಚಿವ ಸಂಪುಟ ಪುನಾರಚನೆ ಪ್ರಕ್ರಿಯೆ ಅಂತಿಮ ಘಟ್ಟಕ್ಕೆ ಬಂದಿದೆ. ರಾಷ್ಟ್ರಪತಿ ಭವನದಲ್ಲಿ ಬುಧವಾರ ಸಂಜೆ ಪ್ರಮಾಣ ವಚನ ಸ್ವೀಕರಿಸಿದ ನೂತನ ಸಚಿವರಿಗೆ ಪ್ರಧಾನಿ ನರೇಂದ್ರ ಮೋದಿ ರಾತ್ರಿ ಖಾತೆ ಹಂಚಿಕೆ ಮಾಡಿದ್ದಾರೆ.
ಕರ್ನಾಟಕದ ರಾಜೀವ್ ಚಂದ್ರಶೇಖರ್ ಅವರಿಗೆ ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯ ರಾಜ್ಯ ಸಚಿವರ ಹೊಣೆ ನೀಡಲಾಗಿದೆ. ಶೋಭಾ ಕರಂದ್ಲಾಜೆ ಅವರಿಗೆ ಕೃಷಿ ಮತ್ತು ರೈತರ ಯೋಗಕ್ಷೇಮ, ಎ.ನಾರಾಯಣಸ್ವಾಮಿ ಅವರಿಗೆ ಸಾಮಾಜಿಕ ನ್ಯಾಯ ಮತ್ತು ಸ್ವಾವಲಂಬನೆ ಇಲಾಖೆ, ಭಗವಂತ ಖೂಬ ಅವರಿಗೆ ನವೀಕರಿಸಬಹುದಾದ ಇಂಧನ ಮತ್ತು ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ರಾಜ್ಯ ಸಚಿವರ ಹೊಣೆ ವಹಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ. ಅಮಿತ್ ಶಾ ಅವರಿಗೆ ಗೃಹ ಖಾತೆ ಜೊತೆ ಸಹಕಾರ ಇಲಾಖೆಯ ಹೊಣೆ ನೀಡಲಾಗಿದೆ.
ಉಳಿದಂತೆ ಇತರ ಸಚಿವರ ಖಾತೆ ಹಂಚಿಕೆ ವಿವರ ಇಂತಿದೆ.
ಮನಸುಖ್ ಮಾಂಡವೀಯಾ- ಆರೋಗ್ಯ, ರಾಸಾಯನಿಕ, ಫಾರ್ಮಾಸೂಟಿಕಲ್ಸ್ ಇಲಾಖೆ.
ಸ್ಮೃತಿ ಇರಾನಿ-ಮಹಿಳಾ ಮತ್ತು ಮಕ್ಕಳ ಕಲ್ಯಾಣ. ಪಿಯೂಷ್ ಗೋಯಲ್-ಜವಳಿ, ವಾಣಿಜ್ಯ. ಅಶ್ವಿನಿ ವೈಷ್ಣವ್-ರೈಲ್ವೆ, ಐಟಿ ಇಲಾಖೆ. ಧರ್ಮೇಂದ್ರ ಪ್ರಧಾನ್-ಶಿಕ್ಷಣ, ಕೌಶಲ್ಯಾಭಿವೃದ್ಧಿ. ಹರ್ದೀಪ್ ಸಿಂಗ್ ಪುರಿ-ನಗರಾಭಿವೃದ್ಧಿ, ವಸತಿ, ಪೆಟ್ರೋಲಿಯಂ.
ಜ್ಯೋತಿರಾದಿತ್ಯ ಸಿಂಧಿಯಾ-ನಾಗರಿಕ ವಿಮಾನಯಾನ ಖಾತೆ, ಪುರುಷೋತ್ತಮ್ ರೂಪಾಲಾ-ಡೇರಿ ಮತ್ತು ಮೀನುಗಾರಿಕೆ, ಅನುರಾಗ್ ಸಿಂಗ್ ಠಾಕೂರ್-ಕ್ರೀಡೆ, ಮಾಹಿತಿ ಮತ್ತು ಪ್ರಸಾರ, ಪಶುಪತಿಕುಮಾರ್ ಪಾರಸ್-ಆಹಾರ ಸಂಸ್ಕರಣೆ, ಗಿರಿರಾಜ್ ಸಿಂಗ್-ಗ್ರಾಮೀಣಾಭಿವೃದ್ಧಿ, ಭೂಪೇಂದ್ರ ಯಾದವ್-ಕಾರ್ಮಿಕ, ಪರಿಸರ ಇಲಾಖೆ, ಕಿರಣ್ ರಿಜಿಜು-ಸಂಸ್ಕೃತಿ, ಈಶಾನ್ಯ ಅಭಿವೃದ್ಧಿ, ಪ್ರವಾಸೋದ್ಯಮ, ಸರ್ಬಾನಂದ್ ಸೋನಾವಾಲ್- ಬಂದರು, ಹಡಗು, ಆಯುಷ್ ಇಲಾಖೆ.
ಕೇಂದ್ರ ಸಚಿವ ಸಂಪುಟದಲ್ಲಿ ಯಾರು ಯಾವ ಖಾತೆ ನಿರ್ವಹಿಸುತ್ತಿದ್ದಾರೆ?
ನರೇಂದ್ರ ಮೋದಿ: ಪ್ರಧಾನ ಮಂತ್ರಿ, ಪರ್ಸನಲ್, ಸಾರ್ವಜನಿಕ ಕುಂದುಕೊರತೆ, ಪಿಂಚಣಿ, ಅಣುಶಕ್ತಿ, ಬಾಹ್ಯಾಕಾಶ ಇಲಾಖೆಗಳ ಜೊತೆಗೆ ಹಂಚಿಕೆಯಾಗದ ಇತರೆಲ್ಲಾ ಇಲಾಖೆಗಳ ಜವಾಬ್ದಾರಿ.
ಸಂಪುಟ ದರ್ಜೆ ಸಚಿವರು
1) ರಾಜನಾಥ್ ಸಿಂಗ್: ರಕ್ಷಣಾ ಇಲಾಖೆ
2) ಅಮಿತ್ ಶಾ: ಗೃಹ ಮತ್ತು ಸಹಕಾರ ಇಲಾಖೆ
3) ನಿತಿನ್ ಜಯರಾಮ್ ಗಡ್ಕರಿ: ರಸ್ತೆ ಸಾರಿಗೆ ಮತ್ತು ಹೆದ್ದಾರಿ
4) ನಿರ್ಮಲಾ ಸೀತಾರಾಮನ್: ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರ
5) ನರೇಂದ್ರ ಸಿಂಗ್ ತೊಮಾರ್: ಕೃಷಿ ಮತ್ತು ರೈತರ ಕಲ್ಯಾಣ
6) ಡಾ.ಸುಬ್ರಹ್ಮಣ್ಯಂ ಜೈಶಂಕರ್: ವಿದೇಶಾಂಗ ವ್ಯವಹಾರ
7) ಅರ್ಜುನ್ ಮುಂಡಾ: ಬುಡಕಟ್ಟು ಕಲ್ಯಾಣ
8) ಸ್ಮೃತಿ ಝುಬಿನ್ ಇರಾನಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
9) ಪಿಯೂಷ್ ಗೋಯಲ್: ವಾಣಿಜ್ಯ ಮತ್ತು ಕೈಗಾರಿಕೆ, ಗ್ರಾಹಕ ವ್ಯವಹಾರ, ಆಹಾರ ಮತ್ತು ಪಡಿತರ, ಜವಳಿ
10) ಧರ್ಮೇಂದ್ರ ಪ್ರಧಾನ್: ಶಿಕ್ಷಣ, ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆ
11) ಪ್ರಲ್ಹಾದ್ ಜೋಶಿ: ಸಂಸದೀಯ ವ್ಯವಹಾರ, ಕಲ್ಲಿದ್ದಲು ಮತ್ತು ಗಣಿ
12) ನಾರಾಯಣ ತಟು ರಾಣೆ: ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳು
13) ಸರ್ಬಾನಂದ ಸೋನಾವಾಲ್: ಬಂದರು, ಶಿಪಿಂಗ್, ಜಲಸಾರಿಗೆ ಮತ್ತು ಆಯುಷ್
14) ಮುಖ್ತಾರ್ ಅಬ್ಬಾಸ್ ನಖ್ವಿ: ಅಲ್ಪಸಂಖ್ಯಾತರ ಕಲ್ಯಾಣ
15) ಡಾ.ವೀರೇಂದ್ರ ಕುಮಾರ್: ಸಾಮಾಜಿಕ ನ್ಯಾಯ ಮತ್ತು ಸ್ವಾವಲಂಬನೆ
16) ಗಿರಿರಾಜ್ ಸಿಂಗ್: ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್
17) ಜ್ಯೋತಿರಾದಿತ್ಯ ಎಂ.ಸಿಂಧಿಯಾ: ನಾಗರಿಕ ವಿಮಾನಯಾನ
18) ರಾಮಚಂದ್ರ ಪ್ರಸಾದ್ ಸಿಂಗ್: ಉಕ್ಕು
19) ಅಶ್ವಿನಿ ವೈಷ್ಣವ್: ರೈಲ್ವೆ, ಕಮ್ಯುನಿಕೇಶನ್ಸ್, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ
20) ಪಶುಪತಿ ಕುಮಾರ್: ಆಹಾರ ಸಂಸ್ಕರಣೆ
21) ಗಜೇಂದ್ರ ಸಿಂಗ್ ಶೇಖಾವತ್: ಜಲ್ ಶಕ್ತಿ
22) ಕಿರಣ್ ರಿಜಿಜು: ಕಾನೂನು ಮತ್ತು ನ್ಯಾಯ
23) ರಾಜ್ಕುಮಾರ್ ಸಿಂಗ್: ಪವರ್, ಹೊಸ ಮತ್ತು ನವೀಕರಿಸಬಹುದಾದ ಇಂಧನ
24) ಹರ್ದೀಪ್ ಸಿಂಗ್ ಪುರಿ: ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ವಸತಿ ಮತ್ತು ನಗರಾಡಳಿತ
25) ಮನ್ಸುಖ್ ಮಾಂಡವೀಯ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ರಾಸಾಯನಿಕ ಮತ್ತು ರಸಗೊಬ್ಬರ
26) ಭೂಪೆಂದರ್ ಯಾದವ್: ಪರಿಸರ, ಅರಣ್ಯ, ವಾತಾವರಣ ಬದಲಾವಣೆ, ಕಾರ್ಮಿಕ ಮತ್ತು ಉದ್ಯೋಗ
27) ಡಾ.ಮಹೇಂದ್ರ ನಾಥ್ ಪಾಂಡೆ: ಭಾರೀ ಕೈಗಾರಿಕೆ
28) ಪುರುಷೋತ್ತಮ್ ರೂಪಾಲ: ಮೀನುಗಾರಿಕೆ, ಪಶುಸಂಗೋಪನೆ ಮತ್ತು ಡೇರಿ
29) ಅನುರಾಗ್ ಸಿಂಗ್ ಠಾಕೂರ್: ಮಾಹಿತಿ ತಂತ್ರಜ್ಞಾನ, ಪ್ರಸಾರ, ಯುವ ವ್ಯವಹಾರ, ಕ್ರೀಡೆ.
ಸಚಿವರ ಸಂಪುಟದ ಸ್ವತಂತ್ರ ನಿರ್ವಹಣೆ ಮತ್ತು ರಾಜ್ಯ ದರ್ಜೆ ಸಚಿವರ ವಿವರ ಇಂತಿದೆ..