ಕುವೈತ್ ನಲ್ಲಿರುವ ಬೀದರ ಜಿಲ್ಲೆಯ ಯುವಕರ ಜೊತೆ ಮಾತನಾಡಿದ ಬೀದರನ ಜನಪ್ರಿಯ ಸಂಸದ ಭಗವಂತ ಖೂಬಾ
ಬೀದರ:- ಕುವೈತ್ ನಲ್ಲಿರುವ ಬೀದರ ಜಿಲ್ಲೆಯ ಯುವಕರ ಜೊತೆ ಮಾತನಾಡಿದ ಬೀದರನ ಜನಪ್ರಿಯ ಸಂಸದ ಭಗವಂತ ಖೂಬಾ ರವರು
ಕುವೈತನಲ್ಲಿರುವ ನಮ್ಮ ಯುವಕರ ಬಗ್ಗೆ ಇಂದು ಬೆಳಿಗ್ಗೆಯುವಕರ ಜೊತೆ ವಿಡಿಯೋ ಮೂಲಕ ಮಾತನಾಡಿ ನಾನು ವಿದೇಶಾಂಗ ಸಚಿವರಾದ ಸನ್ಮಾನ್ಯ ಶ್ರೀ. ಡಾ.ಸುಬ್ರಮಣ್ಯಂ ಜೈಶಂಕರ ಜಿಯವರೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿದಾಗ, ಮಾನ್ಯ ಸಚಿವರು, ಕುವೈತ್ ನಲ್ಲಿರುವ ಭಾರತದ ರಾಯಭಾರ ಕಚೇರಿಯು ನಮ್ಮ ಎಲ್ಲಾ 195 ಯುವಕರ ತಂಡವನ್ನು ಸಂಪರ್ಕಿಸಿದೆ ಹಾಗೆ ಮೇಘಾ ಇಂಜಿನಿಯರಿಂಗ ಕಂಪನಿಯವರನ್ನು ಸಹ ಸಂಪರ್ಕಿಸಿದೆ. ಸದ್ಯ ಕಂಪನಿಯವರು ಎಲ್ಲಾ ಯುವಕರನ್ನು ಭೇಟಿ ಮಾಡಿ, ಅವರಿಗೆ ಊಟದ ವ್ಯವಸ್ಥೆ ಮಾಡುತ್ತಿದೆ ಮತ್ತು ಭಾರತಕ್ಕೆ ವಾಪಸ್ಸು ಕರೆತರಲು ವಿಮಾನ ಟಿಕೆಟ್ (ಜಾಜಿರಾ ಎರಲೈನ್ಸ್ ವಿಮಾನ) ವ್ಯವಸ್ಥೆ ಕೂಡ ಮಾಡಿದೆ ಎಂದು ಬೀದರ ಸಂಸದರಾದ ಭಗವಂತ ಖೋಬಾ ತಿಳಿಸಿ ಆಗಸ್ಟ್ ಎರಡನೇ ವಾರದಲ್ಲಿ ಅಂತರಾಷ್ಟ್ರೀಯ ವಿಮಾನಗಳ ಪ್ರಾರಂಭವಾಗುತ್ತಿವೆ, ಪ್ರಾರಂಭವಾದ ತಕ್ಷಣವೇ ಮೊದಲ ಆದ್ಯತೆಯಲ್ಲಿ ನಿಮ್ಮ ಯುವಕರನ್ನು ಕರೆತರಲಾಗುವುದು ಎಂದು ತಿಳಿಸಿ
ಕುವೈತ್ ನಲ್ಲಿರುವ ಯುವಕರೊಂದಿಗೆ ವಿಡಿಯೋ ಕಾಲ್ ಮುಖಾಂತರ ಮಾತನಾಡಿ ಈ ವಿಷಯದ ಬಗ್ಗೆ ಯಾರು ಕೂಡ ಹೆದರುವ ಅವಶ್ಯಕತೆ ಇಲ್ಲಾ ಎಂದು ತಿಳಿಸಿ ಆದಷ್ಟೂ ಬೇಗ ಒಂದೆರಡು ದಿನಗಳಲ್ಲಿ ಅಂತರಾಷ್ಟ್ರೀಯ ವಿಮಾನ ಯಾನ ಪ್ರಾರಂಭವಾಗಲಿವೆ ಪ್ರಥಮ ಆದೇತ್ಯೆ ತಮಗೆ ನಿಡಲಾಗುವದೆಂದು ಯುವಕರಿಗೆ ತಿಳಿಸಿದರು.
ವರದಿ:-ಮಹೇಶ ಸಜ್ಜನ ಬೀದರ