ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಹೆಚ್ಚುತ್ತಿರುವ ಡೆಲ್ಟಾ ಪ್ಲಸ್ ಸೋಂಕಿಗೆ ಬ್ರೇಕ್ ಹಾಕಲು ಸಿಡ್ನಿ ಸಜ್ಜಾಗಿದೆ. ದಿನೇ ದಿನೇ ಸೋಂಕಿನ ಪ್ರಕರಣಗಳು ಹೆಚ್ಚುತ್ತಿದ್ದು, ನಿಯಂತ್ರಣವನ್ನು ತಪ್ಪಿದ ಹಿನ್ನಲೆ ಶುಕ್ರವಾರದಿಂದ ಮತ್ತಷ್ಟು ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ.
ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಅನಾವಶ್ಯಕವಾಗಿ ’ಮನೆಯಿಂದ ಯಾರೂ ಹೊರ ಬರಬೇಡಿ’, ಎಂದು ಸುಮಾರು 50 ಲಕ್ಷ ಸಿಡ್ನಿಯ ನಿವಾಸಿಗಳಿಗೆ ಗ್ಲಾಡಿಸ್ ಬೆರೆಜಿಕ್ಲಿಯನ್ ಮನವಿ ಮಾಡಿಕೊಂಡಿದ್ದಾರೆ. ಕಳೆದ 24 ಗಂಟೆಯಲ್ಲಿ 44 ಹೊಸ ಕೋರೊನ ವೈರಸ್ ಪತ್ತೆಯಾಗಿದೆ.
ಮೂರು ವಾರಗಳಿಂದ ಸಿಡ್ನಿಯಲ್ಲಿ ಲಾಕ್ಡೌನ್ ಮಾಡಿದ್ದರೂ ಸಹ ಹೊಸ ಸೋಂಕಿನ ಪ್ರಕರಣಗಳು ಏರಿಕೆಯಾಗುತ್ತಲೆ ಇದೆ. ಹೀಗಾಗಿ ಇನ್ನಷ್ಟು ಕಠಿಣಕ್ರಮಗಳನ್ನು ಜಾರಿಗೊಳಿಸಿದ್ದು, ಬೆಳಗಿನ ಜಾವ ವಾಕಿಂಗ್ ಮಾಡಲು ಇಬ್ಬರಿಗಿಂತ ಹೆಚ್ಚು ಜನ ಸೇರುವಂತಿಲ್ಲ ಹಾಗೂ ಅನಗತ್ಯವಾಗಿ ಪ್ರವಾಸವನ್ನು ಮಾಡುವಂತಿಲ್ಲ.