ಅಂದು ಶಿವರಾಂ, ದೊಡ್ಡಣ್ಣ ಹೋದಾಗ ಮುಖದ ಮೇಲೆ ಪೇಪರ್ ಎಸೆದಿದ್ರು – ಸಂಸದೆ ಸುಮಲತಾ..
ಹಿರಿಯ ನಟ ದಿವಂಗತ ಅಂಬರೀಶ್ ಸ್ಮಾರಕದ ಬಗ್ಗೆ ಹಲವಾದು ವಾದಗಳು ನಡೆಯುತ್ತಿವೆ. ಸ್ಮಾರಕದ ಕುರಿತು ಸ್ಪಷ್ಟನೆ ನೀಡಿದ ಸಂಸದೆ ಸುಮಲತಾ ಅಂಬರೀಶ್, ಸ್ಮಾರಕ ಬಗ್ಗೆ ಮಾತಾಡಲು ದೊಡ್ಡಣ್ಣ, ಶಿವರಾಮ್ ಹೋದಾಗ ದೊಡ್ಡಣ್ಣ ಮುಖದ ಮೇಲೆ ಪೇಪರ್ ಎಸೆದಿದ್ದರು. ಆನಂತರ ಯಡಿಯೂರಪ್ಪ ಸಹಿ ಮಾಡಿ ಕೆಲಸ ಪ್ರಾರಂಭ ಮಾಡಿದರು ಎಂದು ಸಂಸದೆ ಸುಮಲತಾ ಹೇಳಿದ್ದಾರೆ. ಅಲ್ಲದೇ ಗಣಿಗಾರಿಕೆ ಸಂಬಂಧ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಮತ್ತೆ ಕಿಡಿಕಾರಿದ್ದಾರೆ.

ಸಿಎಂ ಬಿಎಸ್ ಯಡಿಯೂರಪ್ಪ ಸಹಿ ಮಾಡಿ ಸ್ಮಾರಕದ ಕೆಲಸ ಪ್ರಾರಂಭ ಮಾಡಿದರು. ಅಂಬರೀಶ್ ಸ್ಮಾರಕ ಕುಮಾರಸ್ವಾಮಿ ಮಾಡಿಲ್ಲ. ಒಬ್ಬೊಬ್ಬ ಶಾಸಕರು ಒಂದೊಂದು ರೀತಿ ಮಾತಾಡ್ತೀರಾ. ಸ್ಮಾರಕ ಬಗ್ಗೆ ಮಾತಾಡಲು ದೊಡ್ಡಣ್ಣ, ಶಿವರಾಮ್ ಹೋದಾಗ ಇವ್ರು ಹೇಗೆ ಮಾತಾಡಿದ್ರು ಅಂತ ಅವ್ರನ್ನೆ ಕೇಳಿ ಎಂದು ಹೇಳಿದರು.

ಯಾರೇ ಸಿಎಂ ಆಗಿದ್ರು ಅವತ್ತು ಸಹಕಾರ ಕೊಡ್ತಿದ್ದರು. ಇನ್ನು ವಿಷ್ಣು ಸ್ಮಾರಕವೂ ಆರಂಭ ಆಗಿದೆ. ಯಾಕೆ ವಿಚಾರ ತಿರುಚುತ್ತಿದ್ದಾರೆ ಎಂದು ಗೊತ್ತಿಲ್ಲ. ಸಿಂಗಾಪುರ್ ಸಮಾವೇಶದಲ್ಲಿ ಆದಿಚುಂಚನಗಿರಿ ಶ್ರೀ ಬಳಿ ಇದ್ದನ್ನ ನಾನು ಹೇಳಿದ್ದೆ. ಶ್ರೀಗಳು ಅಂದು ನನಗೆ ಧೈರ್ಯ ಹೇಳಿದ್ರು. ಆದರೆ ಈಗ ಕುಮಾರಸ್ವಾಮಿ ಅವರು ಅಂಬರೀಶ್ ಸ್ಮಾರಕದಿಂದ ಕ್ರೆಡಿಟ್ ತೆಗೆದುಕೊಳ್ತಿದ್ದಾರೆ.

