3ನೇ ಅಲೆ ಮಕ್ಕಳಿಗಿಲ್ಲ ಅಪಾಯ: ಸುಧಾಕರ್
ದಾವಣಗೆರೆ -ಕೊರೊನಾ ಮೂರನೇ ಅಲೆಯಲ್ಲಿ ಮಕ್ಕಳಿಗೆ ಯಾವುದೇ ಅಪಾಯವಿಲ್ಲ ಎಂದು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ಸಚಿವ ಡಾ.ಕೆ ಸುಧಾಕರ್ ಹೇಳಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಕ್ಕಳಿಗೆ ಯಾವುದೇ ಅಪಾಯವಿಲ್ಲ ಎಂದು ತಜ್ಞರ ವರದಿ ಹೇಳುತ್ತಿದ್ದು, ಹಾಗಂತ ಯಾವ ಪೋಷಕರು ಮೈಮರೆಯುವಂತಿಲ್ಲ. ಲಾಕ್‍ಡೌನ್ ಸಡಿಲಿಕೆ ಆಗಿದೆ ಎಂದು ಜನರು ಕೂಡ ಮೈಮೆರಯುವಂತಿಲ್ಲ ಎಂದು ಹೇಳಿದರು.
ಪ್ರತಿಯೊಬ್ಬರು ಎರಡನೇ ಡೋಸ್ ಪಡೆಯುವವರೆಗೂ ಎಲ್ಲರೂ ಕೊರೊನಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಈಗಾಗಲೇ ಕೇರಳ, ಮಹಾರಾಷ್ಟ್ರದಲ್ಲಿ ಕೊರೊನಾ ಕೇಸ್‍ಗಳ ಸಂಖ್ಯೆ ಹೆಚ್ಚಿದ್ದು, ಕೇರಳದಲ್ಲಿ ಪ್ರತಿದಿನ 15 ಸಾವಿರಕ್ಕೂ ಹೆಚ್ಚು ಕೇಸ್ ಬರುತ್ತಿದೆ. ಈ ಹಿನ್ನಲೆಯಲ್ಲಿ ಕರ್ನಾಟಕದ ಗಡಿಭಾಗದಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದೇವೆ, ಕರ್ನಾಟಕದಲ್ಲಿ ಕೊರೊನಾ ಸಂಖ್ಯೆ ಇಳಿಮುಖವಾಗುತ್ತಿದೆ ಎಂದು ತಿಳಿಸಿದರು.
ಶೇ 1.5ರ ದರದಲ್ಲಿ ಕೇಸ್‍ಗಳು ದಾಖಲಾಗುತ್ತಿವೆ. ಪ್ರತಿದಿನ 1.50 ಲಕ್ಷದಷ್ಟು ಟೆಸ್ಟಿಂಗ್ ಮಾಡುತ್ತಿದ್ದೇವೆ. ಸಧ್ಯ ಕರ್ನಾಟಕದಲ್ಲಿ ಕೊರೊನಾ ನಿಯಂತ್ರಣದಲ್ಲಿದೆ. ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಎರಡನೇ ಪ್ಯಾಕೇಜ್‍ನಲ್ಲಿ ಕರ್ನಾಟಕಕ್ಕೆ 1500 ಕೋಟಿ ಬರುತ್ತಿದ್ದು, ಮೂರನೇ ಅಲೆ ಸಂಭ್ಯಾವದ ಹಿನ್ನಲೆಯಲ್ಲಿ ದೊರೆಯುತ್ತಿರುವ ವಿಶೇಷ ಪ್ಯಾಕೇಜ್ ಇದಾಗಿದೆ. ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರ, ಪಿಹೆಚ್‍ಸಿಗಳಲ್ಲಿ ಮಕ್ಕಳ ವಿಶೇಷ ವಾರ್ಡ್ ಸೇರಿದಂತೆ ವಿವಿಧ ಸೌಲಭ್ಯವು ಕಲ್ಪಿಸಲು ಹಣ ಸದ್ಭಳಕೆ ಮಾಡಿಕೊಳ್ಳಬಹುದಾಗಿದೆ ಎಂದಿದ್ದಾರೆ