ಸೇವ್ ಕೆಆರ್ಎಸ್ ಡ್ಯಾಂ, ಸ್ಟಾಪ್ ಇಲ್ಲೀಗಲ್ ಮೈನಿಂಗ್, ಅಭಿಯಾನ ಶುರು ಮಾಡಿದ ಸುಮಲತಾ..!
ಕೆಆರ್ಎಸ್ ಡ್ಯಾಂ ಬಿರುಕು ಬಿಟ್ಟಿರುವ ವಿಚಾರಕ್ಕೆ ಮತ್ತು ಬೇಬಿ ಬೆಟ್ಟದಲ್ಲಿ ನಡೆಯುತ್ತಿರವ ಅಕ್ರಮ ಗಣಿಗಾರಿಕೆ ವಿರುದ್ಧದ ಹೋರಾಟಕ್ಕೆ ಹಲವು ಅಡ್ಡಿಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈ ಬಗ್ಗೆ ಸಂಸದೆ ಸುಮಲತಾ ರವರು ತಮ್ಮ ಟ್ಟಿಟರ್ ಖಾತೆಯಲ್ಲಿ ಆಕ್ರೋಷವನ್ನ ವ್ಯಕ್ತ ಪಡಿಸುತ್ತಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಮತ್ತು ಮಂಡ್ಯ ಸಂಸದೆ ಸುಮಲತಾ ನಡುವಿನ ಜಗಳ ಹಲವು ಬಣ್ಣಗಳನ್ನು ಪಡೆದಿದ್ದು, ಇಡೀ ದೇಶವೇ ರಾಜ್ಯದ ಕಡೆ ತಿರುಗಿ ನೋಡವಷ್ಟರ ಮಟ್ಟಿಗೆ ಪ್ರಕರಣ ಉಲ್ಬಣವಾಗಿದೆ. ಇಬ್ಬರಲ್ಲಿ ಒಬ್ಬರೂ ಜಗಳಕ್ಕೆ ಅಂತ್ಯ ವಾಡಲು ಸಿದ್ದವಾಗಿಲ್ಲದಂತಹ ಪರಿಸ್ಥಿತಿ ಇದೆ.
ಇದೀಗ ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಟ್ಟೀಟ್ ಮಾಡಿರುವ ಸುಮಲತಾ, ಸೇವ್ ಕೆಆರ್ಎಸ್ ಡ್ಯಾಂ, ಸ್ಟಾಪ್ ಇಲ್ಲೀಗಲ್ ಮೈನಿಂಗ್ ಎಂಬ ಹ್ಯಾಷ್ಟ್ಯಾಗ್ ಮೂಲಕ ಅಭಿಯಾನವನ್ನ ಪ್ರಾರಂಭಿಸಿದ್ದಾರೆ.