ಅವನೇ ಶ್ರೀಮನ್ನಾರಾಯಣ ಸಿನಿಮಾ ವಿಚಾರದಲ್ಲಿ ತಮ್ಮ ಮೇಲಿನ ಆರೋಪಗಳಿಗೆಲ್ಲಾ ಜುಲೈ 11ಕ್ಕೆ ಉತ್ತರ ಕೊಡ್ತೀನಿ ಅಂತ ರಿಷಬ್ ಶೆಟ್ಟಿ 10 ದಿನಗಳ ಹಿಂದೆ ಹೇಳಿದ್ರು.. 3 ದಿನಗಳ ಹಿಂದೆ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ತಮ್ಮ ಬ್ಯಾನರ್ನ 10ನೇ ಚಿತ್ರವನ್ನು ಅದೇ ದಿನ ಅನೌನ್ಸ್ ಮಾಡೋದಾಗಿ ಹೇಳಿದ್ರು.. ಅಲ್ಲಿಗೆ ಅಭಿಮಾನಿಗಳು ಜುಲೈ 11ಕ್ಕೆ ರಕ್ಷಿತ್ ಶೆಟ್ಟಿ ಕೊಡುವ ಬ್ರೇಕಿಂಗ್ ನ್ಯೂಸ್ ಏನು ಅನ್ನೋದನ್ನ ಗೆಸ್ ಮಾಡಿಬಿಟ್ಟಿದ್ರು.. ಕೊನೆಗೂ ಅಭಿಮಾನಿಗಳ ಲೆಕ್ಕಚಾರ ಪಕ್ಕಾ ಆಗಿದೆ.. ಹೊಂಬಾಳೆ ಮತ್ತು ರಕ್ಷಿತ್ ಶೆಟ್ಟಿ ಕಾಂಬಿನೇಷನ್ ಪ್ರಾಜೆಕ್ಟ್ ಫಿಕ್ಸ್ ಆಗಿದೆ..
ಕೊನೆಗೂ ರಕ್ಷಿತ್ ಶೆಟ್ಟಿ ಕೊಟ್ಟೇಬಿಟ್ರು ಬ್ರೇಕಿಂಗ್ ನ್ಯೂಸ್ ! ಹೊಂಬಾಳೆ ಫಿಲ್ಮ್ಸ್ ಜೊತೆ ಡ್ರೀಮ್ ಪ್ರಾಜೆಕ್ಟ್ ಅನೌನ್ಸ್ !
ರಿಚರ್ಡ್ ಆಂಟನಿ ಈಸ್ ಬ್ಯಾಕ್.. ಅಷ್ಟೇ ಅಲ್ಲ ಡೈರೆಕ್ಟರ್ ರಕ್ಷಿತ್ ಶೆಟ್ಟಿ ಈಸ್ ಬ್ಯಾಕ್ ಅಂತ ಕೂಡ ಹೇಳ್ಬೋದು.. ಸಿಂಪಲ್ ಸ್ಟಾರ್ ಡ್ರೀಮ್ ಪ್ರಾಜೆಕ್ಟ್ ಅಷ್ಟೇ ಅಲ್ಲ, ಅವರ ಅಭಿಮಾನಿಗಳ ಬಹುನಿರೀಕ್ಷಿತ ಸಿನಿಮಾ ಕೊನೆಗೂ ಘೋಷಣೆಯಾಗಿದೆ.. 2014ರಲ್ಲಿ ಬಂದಿದ್ದ ಕಲ್ಟ್ ಕ್ಲಾಸಿಕ್ ಸಿನಿಮಾ ಉಳಿದವರು ಕಂಡಂತೆ.. ಆ ಚಿತ್ರ ಬಾಕ್ಸಾಫೀಸ್ನಲ್ಲಿ ಸೌಂಡ್ ಮಾಡ್ದೇ ಇದ್ರು, ಒಂದು ವರ್ಗದ ಪ್ರೇಕ್ಷಕರಿಗೆ ಬಹಳ ಇಷ್ಟವಾಗಿತ್ತು.. ಆ ಚಿತ್ರದ ಪ್ರೀಕ್ವೆಲ್ ಬಗ್ಗೆ ರಕ್ಷಿತ್ ಶೆಟ್ಟಿ ಸಾಕಷ್ಟು ಸಲ ಮಾತನಾಡಿದ್ರು.. ಇದೀಗ ಆ ಚಿತ್ರವನ್ನ ಕೈಗೆತ್ತಿಕೊಂಡಿದ್ದು ಅಭಿಮಾನಿಗಳು ಖುಷಿಯಾಗಿದ್ದಾರೆ..
‘When the tide brings back the DEAD, the shores bleed RED ಅಂತ ಬರೆದು ಗುರುವಾರ ಹೊಂಬಾಳೆ ಫಿಲ್ಮ್ಸ್ ತಮ್ಮ ಬ್ಯಾನರ್ನ ಮುಂದಿನ ಸಿನಿಮಾ ಬಗ್ಗೆ ಸುಳಿವು ಕೊಟ್ಟಿದ್ರು.. ಆ ಪೋಸ್ಟರ್ ನೋಡಿ ಇದು ಉಳಿದವರು ಕಂಡಂತೆ ಪ್ರೀಕ್ವೆಲ್ ಅಂತ ಅಭಿಮಾನಿಗಳು ಗೆಸ್ ಮಾಡಿದ್ರು.. ಅಭಿಮಾನಿಗಳ ಲೆಕ್ಕಾಚಾರ ಪಕ್ಕಾ ಆಯ್ತು.. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಜೊತೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಕೈ ಜೋಡಿಸಿದ್ದಾಯ್ತು.. ರಿಚರ್ಡ್ ಆಂಟನಿ ಅಲಿಯಾಸ್ ರಿಚ್ಚಿ ಮತ್ತೆ ಅಖಾಡಕ್ಕೆ ಇಳಿಯೋಕೆ ಮುಹೂರ್ತ ಫಿಕ್ಸ್ ಆಗಿದೆ..
ಮೊದಲು ನಮ್ಮ ಕೆಲಸ ಮಾತನಾಡಲಿ ಉಳಿದವೆಲ್ಲ ತದ ನಂತರ !
ಅವನೇ ಶ್ರೀಮನ್ನಾರಾಯಣ ಚಿತ್ರದ ಲಾಭ ನಷ್ಟದ ವಿಚಾರದಲ್ಲಿ ರಕ್ಷಿತ್ ಶೆಟ್ಟಿ ಮೇಲೆ ಒಂದಷ್ಟು ಆರೋಪಗಳು ಕೇಳಿ ಬಂದಿತ್ತು.. ಅದಕ್ಕೆಲ್ಲಾ ಜುಲೈ 11ಕ್ಕೆ ಉತ್ತರ ಕೊಡ್ತೀನಿ ಅಂತ ಹೇಳಿದ್ರು.. ರಿಚರ್ಡ್ ಆಂಟನಿ ಸಿನಿಮಾ ಅನೌನ್ಸ್ ಮಾಡಿ ಟ್ವೀಟ್ ಮಾಡಿರೋ ರಕ್ಷಿತ್ ಶೆಟ್ಟಿ, ‘ಮೊದಲು ನಮ್ಮ ಕೆಲಸ ಮಾತನಾಡಲಿ ಉಳಿದವೆಲ್ಲ ತದ ನಂತರ’ ಅಂತ ಬರೆದುಕೊಂಡಿದ್ದಾರೆ.. ರಿಚರ್ಡ್ ಆಂಟನಿ ಸಿನಿಮಾ ಮೂಲಕ ತಮ್ಮ ಬಗ್ಗೆ ಮಾತನಾಡಿದವರಿಗೆಲ್ಲಾ ಉತ್ತರ ಕೊಡುವ ಸಂಕಲ್ಪ ಮಾಡಿದ್ದಾರೆ..
ಮತ್ತೆ ಶೂಟ್ ಮಾಡೋಕೆ ಬರ್ತಿದ್ದಾನೆ ರಿಚರ್ಡ್ ಆಂಟನಿ ! !
7 ವರ್ಷಗಳ ಹಿಂದೆ ಬಂದಿದ್ದ ಉಳಿದವರು ಕಂಡಂತೆ ಸಿನಿಮಾ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು.. ಆದ್ರೆ, ರಕ್ಷಿತ್ ಶೆಟ್ಟಿ ಶ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು.. ಆದ್ರು ಉಡುಪಿ, ಮಲ್ಪೆ ಭಾಗದ ಚಿತ್ರಣ, ಸಮುದ್ರ ತೀರ, ಹುಲಿವೇಷ ಅಲ್ಲಿನ ಜನರ ಮ್ಯಾನರಿಸಂ ಕೆಲವರಿಗೆ ಬಹಳ ಇಷ್ಟವಾಗಿತ್ತು.. ಒಂದು ಅಪರಾಧವನ್ನು ವಿವಿಧ ಕೋನಗಳಲ್ಲಿ ಕಟ್ಟಿಕೊಟ್ಟಿದ್ದ ಬಗೆ ಮೆಚ್ಚುಗೆ ಪಡೆದುಕೊಂಡಿತ್ತು.. ಅದ್ರಲ್ಲಿ ರಿಚರ್ಡ್ ಆಂಟನಿ ಅಲಿಯಾಸ್ ರಿಚ್ಚಿ ಮ್ಯಾನರಿಸಂ ಬೇರೆಯದ್ದೇ ಫೀಲ್ ಕೊಟ್ಟಿತ್ತು..
ಇದೀಗ ರಿಚರ್ಡ್ ಆಂಟನಿ ಚಿತ್ರದಲ್ಲಿ ಉಳಿದವರು ಕಂಡಂತೆ ಚಿತ್ರದ ಹಿಂದಿನ ಮತ್ತು ಮುಂದಿನ ಕಥೆ ಹೇಳೊಕೆ ರೆಡಿಯಾಗಿದ್ದಾರೆ ರಕ್ಷಿತ್ ಶೆಟ್ಟಿ.. ವಿಶೇಷ ಅಂದ್ರೆ, ರಕ್ಷಿತ್ ಶೆಟ್ಟಿ ಸ್ವತಃ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ.. ಸಿನಿಕರಿಯರ್ನಲ್ಲಿ ರಕ್ಷಿತ್ ಶೆಟ್ಟಿ ನಿರ್ದೇಶನ ಮಾಡಿದ್ದು ಒಂದೇ ಸಿನಿಮಾ ಅದು ಉಳಿದವರು ಕಂಡಂತೆ.. ಇದೀಗ ಅದೇ ಕಥೆಯ ಹಿಂದು ಮುಂದಿನ ಕಥೆಯನ್ನ ಹೇಳೋಕೆ ಮತ್ತೊಮ್ಮೆ ಡೈರೆಕ್ಟರ್ ಸೀಟ್ನಲ್ಲಿ ಕೂರ್ತಿದ್ದಾರೆ..
‘ಲಾರ್ಡ್ ಆಫ್ ದಿ ಸೀ’ ಅನ್ನೋ ಟ್ಯಾಗ್ಲೈನ್ ಜೊತೆಗೆ ರಿಚರ್ಡ್ ಆಂಟನಿ ಸಿನಿಮಾ ಟೀಸರ್ ರಿಲೀಸ್ ಆಗಿದೆ.. ಸಮುದ್ರ ರಾಜ ಅಂದ್ರೆ ರಿಚ್ಚಿ ಪಾತ್ರವನ್ನು ಬಹಳ ದೊಡ್ಡ ಮಟ್ಟದಲ್ಲಿ ಕಟ್ಟಿಕೊಡುವ ಪ್ರಯತ್ನ ನಡೀತಿದೆ.. ಉಳಿದವರು ಕಂಡಂತೆ ಚಿತ್ರದಲ್ಲಿ ಐದು ಪ್ರಧಾನ ಪಾತ್ರಗಳನ್ನು ಪಂಚ ಭೂತಗಳಿಗೆ ಹೋಲಿಸಿ, ರಕ್ಷಿತ್ ಶೆಟ್ಟಿ ಸಿನಿಮಾ ಮಾಡಿದ್ದರು.. ಅದ್ರಲ್ಲೂ ರಿಚ್ಚಿ ಅಂದ್ರೆ, ಬೆಂಕಿ.. ಈ ಬಾರಿ ಬೆಂಕಿಉಂಡೆಯಂತೆ ರಚ್ಚಿ ಧಗಧಗಿಸೋದು ಕನ್ಫರ್ಮ್ ಆಗೋಗಿದೆ..
ಪ್ಯಾನ್ ಇಂಡಿಯಾ ಸಿನಿಮಾ ಆಗುತ್ತಾ ರಿಚರ್ಡ್ ಆಂಟನಿ ? ನವರಿಯಲ್ಲಿ ಸೆಟ್ಟೇರಲಿದೆ ಕ್ರೈಂ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ !
ಇನ್ನು ರಿಚರ್ಡ್ ಆಂಟನಿ ಗ್ಲಿಂಪ್ಸ್ ನೋಡಿ, ರಕ್ಷಿತ್ ಶೆಟ್ಟಿ ಅಭಿಮಾನಿಗಳು ಫಿದಾ ಆಗಿದ್ದಾರೆ.. ತಮ್ಮದೇ ರೀತಿಯಲ್ಲಿ ಕಥೆಯನ್ನು ಊಹಿಸಿಕೊಂಡು ಥ್ರಿಲ್ಲಾಗಿದ್ದಾರೆ.. ಬಾಲು ಪಾತ್ರಧಾರಿ ಅಚ್ಯುತ್ ಕುಮಾರ್ ವಾಯ್ಸ್ನಲ್ಲಿ ಟೀಸರ್ ಮೂಡಿ ಬಂದಿದೆ.. 3 ಜನ ಸತೋಗಿದ್ದಾರೆ.. ಆದ್ರೆ, ಇವನು ಮಾತ್ರ ಬರೋದು ಬೇಡ ಅಂತ ಹೇಳ್ತಿರೋದು ನೋಡಿದ್ರೆ, ಸತ್ತಿರೋ ರಿಚ್ಚಿ ವಾಪಸ್ ಬಂದ್ರೆ ಏನೆಲ್ಲಾ ಆಗುತ್ತೆ ಅನ್ನೋ ಅರ್ಥದಲ್ಲಿ ರಿಚರ್ಡ್ ಆಂಟನಿ ಕಥೆ ಸುತ್ತುತ್ತೆ ಅನ್ನೋದು ಕೆಲವರ ವಾದ.. ಒಟ್ನಲ್ಲಿ ಸಿಂಗಲ್ ಗ್ಲಿಂಪ್ಸ್ ಟೀಸರ್ನಿಂದ್ಲೇ ಸಿನಿಮಾ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ..
ಹೊಂಬಾಳೆ ಫಿಲ್ಮ್ಸ್ ಮತ್ತು ರಕ್ಷಿತ್ ಶೆಟ್ಟಿ ಕಾಂಬಿನೇಷನ್ನಲ್ಲಿ ರಿಚರ್ಡ್ ಆಂಟನಿ ಸಿನಿಮಾ ಬರ್ತಿರೋದು ಸಹಜವಾಗಿಯೇ ಕುತೂಹಲ ಹೆಚ್ಚಿಸಿದೆ.. ಹೊಂಬಾಳೆ ಸಂಸ್ಥೆ ಬರೀ ಪ್ಯಾನ್ ಇಂಡಿಯಾ ಚಿತ್ರಗಳನ್ನೇ ಮಾಡ್ತಾ ಬರ್ತಿದೆ.. ರಿಚರ್ಡ್ ಆಂಟನಿ ಕೂಡ ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಗಳಲ್ಲಿ ಬರುತ್ತಾ ಅನ್ನೋದ್ರ ಬಗ್ಗೆ ಇನ್ನು ಮಾಹಿತಿ ಸಿಕ್ಕಿಲ್ಲ.. ಬೇರೆ ಭಾಷಿಕರು ಉಳಿದವರು ಕಂಡಂತೆ ಸಿನಿಮಾ ನೋಡಿಲ್ಲ.. ಹಂಗಾಗಿ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಸಿನಿಮಾ ಬರುತ್ತಾ ಇಲ್ವಾ ಅನ್ನೋದು ಗೊಂದಲ ಮೂಡಿದೆ.. ಆ ಸಿನಿಮಾ ನೋಡ್ದೆ ಇದ್ರು, ಈ ಸಿನಿಮಾ ನೋಡ್ಬೋದು ಅನ್ನೋದೇ ಆದ್ರೆ, ರಿಚರ್ಡ್ ಆಂಟನಿ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಗನ್ ಹಿಡ್ದು ಶೂಟ್ ಮಾಡೋದು ಪಕ್ಕಾ..