ಹಾಕಿ ನಮ್ಮ ಮನೆತನದ ಆಟ, ನಾನು ಅಂತರ್ ರಾಜ್ಯ ಹಾಕಿ ಆಟಗಾರ: ಚಕ್ರವರ್ತಿ ಚಂದ್ರಚೂಡ್
ಹೈಲೈಟ್ಸ್:
- ಬಿಗ್ ಬಾಸ್ ಮನೆಯಲ್ಲಿ ಸುಳ್ಳು-ಸತ್ಯದ ಆಟ
- ಬಿಗ್ ಬಾಸ್ ಮನೆಯಲ್ಲಿ ಎರಡು ಸತ್ಯ, ಒಂದು ಸುಳ್ಳು ಹೇಳಿದ ಚಕ್ರವರ್ತಿ
- ಚಕ್ರವರ್ತಿ ಚಂದ್ರಚೂಡ್ ಹೇಳಿದ ಸತ್ಯವನ್ನೇ ಸುಳ್ಳು ಎಂದು ಹೇಳಿದ ಕೆಲ ಸ್ಪರ್ಧಿಗಳು
- ಹಾಕಿ ಆಟದ ಕುರಿತು ಮಾತನಾಡಿದ ಚಕ್ರವರ್ತಿ ಚಂದ್ರಚೂಡ್
ಲೇಖಕ, ಪತ್ರಕರ್ತ ಚಕ್ರವರ್ತಿ ಚಂದ್ರಚೂಡ್ ಅವರು ಹಾಕಿ ನಮ್ಮ ಕುಟುಂಬದ ಆಟ, ಮನೆತನದ ಆಟ ಅಂತ ಬಿಗ್ ಬಾಸ್ ಮನೆಯಲ್ಲಿ ಹೇಳಿಕೊಂಡಿದ್ದಾರೆ. ಒಂದು ಸುಳ್ಳು, ಎರಡು ಸುಳ್ಳು ಆಟದಲ್ಲಿ ಚಕ್ರವರ್ತಿ ಮಾತು ಕೇಳಿ ಕೆಲವರು ಬೆರಗಾಗಿದ್ದಾರೆ. ಏನು ಆಟ? ಯಾವುದು ಸತ್ಯ? ಯಾವುದು ಸುಳ್ಳು?
ಬಿಗ್ ಬಾಸ್ ಮನೆಯಲ್ಲಿ ನಿತ್ಯ ಆಟಗಳು, ಆಟಕ್ಕೆ ತಕ್ಕಂತೆ ಟ್ವಿಸ್ಟ್ ಇರುತ್ತದೆ. ಅಂತೆಯೇ ಪ್ರತಿ ಸ್ಪರ್ಧಿ ಮೂರು ವಿಷಯ ಹೇಳಬೇಕು. ಅದರಲ್ಲಿ 2 ಸತ್ಯ ಆಗಿದ್ದರೆ ಇನ್ನೊಂದು ಸುಳ್ಳು ಆಗಿರಬೇಕು. ಆ ಸುಳ್ಳನ್ನು ಉಳಿದ ಸ್ಪರ್ಧಿಗಳು ಕಂಡು ಹಿಡಿಯಬೇಕು. ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ಹಾಕಿ ನಮ್ಮ ಕುಟುಂಬದ, ಮನೆತನದ ಆಟ ಎಂದು ಚಕ್ರವರ್ತಿ ಚಂದ್ರಚೂಡ್ ಹೇಳಿದ್ದಾರೆ. ನಾನು ಒಳ್ಳೆಯ ಹಾಕಿ ಆಟಗಾರ, ಪ್ರಶಸ್ತಿ ಕೂಡ ಪಡೆದುಕೊಂಡಿದ್ದೇನೆ ಎಂದು ಚಕ್ರವರ್ತಿ ಹೇಳಿದ್ದಾರೆ.
ಚಕ್ರವರ್ತಿ ಹೇಳಿದ ಆ ಮೂರು ವಿಷಯಗಳು
- ಕೆಂಪೇಗೌಡ ಪ್ರಶಸ್ತಿ ಪಡೆಯಲು ನನ್ನ ತಾಯಿಯವರನ್ನು ಕರೆದುಕೊಂಡು ಹೋಗಿದ್ದೆ
- ಅಂತರ್ ರಾಜ್ಯ ಹಾಕಿ ಆಡುತ್ತಿದ್ದೆ, ಅದರಲ್ಲಿ ಪ್ರಶಸ್ತಿ ಪಡೆದಿದ್ದೆ
- ಚಾಮರಾಜನಗರದ ಊರಿನ ಬಸ್ ಸ್ಟ್ಯಾಂಡ್‌ನಲ್ಲಿ ಮೂಟೆ ಹೋರುವ ಕೆಲಸ ಮಾಡಿ ಜೀವನ ಮಾಡುತ್ತಿದ್ದೆ
ಹಾಕಿಯಲ್ಲಿ ಪ್ರಶಸ್ತಿ ಪಡೆದಿದ್ದರೆ ಇಷ್ಟು ಹೊತ್ತಿಗೆ ಚಕ್ರವರ್ತಿ 10 ಸಲ ಹೇಳುತ್ತಿದ್ದರು ಎಂದು ಪ್ರಿಯಾಂಕಾ ತಿಮ್ಮೇಶ್ ಅವರು ಕೆಪಿ ಅರವಿಂದ್, ಪ್ರಶಾಂತ್ ಸಂಬರಗಿ, ವೈಷ್ಣವಿ ಗೌಡ, ಶುಭಾ ಪೂಂಜಾ ಬಳಿ ಹೇಳಿದ್ದರು. ಪ್ರಿಯಾಂಕಾ ಮಾತು ಕೇಳಿ ಎಲ್ಲರೂ ನಕ್ಕಿದ್ದಾರೆ.
ಸತ್ಯ ಹಾಗೂ ಸುಳ್ಳಿನ ಕುರಿತು ಚಕ್ರವರ್ತಿ ಚಂದ್ರಚೂಡ್ ಹೇಳಿದ್ದೇನು?
- ಕಾಲೇಜು ದಿನಗಳಿಂದ ನಾನು ಹಾಕಿ ಆಡುತ್ತಿದ್ದೇನೆ. ನಾನು ತುಂಬ ಒಳ್ಳೆಯ ಹಾಕಿ ಆಟಗಾರ. ನಾನು ಮೂಲತಃ ಮಲೆನಾಡಿನ ಸಕಲೇಶ್ವರದಲ್ಲಿ ಬೆಳೆದವನು. ಹಾಕಿ ನಮ್ಮ ಮನೆತನದ ಆಟ, ನಮ್ಮ ಕುಟುಂಬದ ಆಟ.
- ಬೆಂಗಳೂರು ಮಹಾನಗರ ಪಾಲಿಕೆ ನಾನಾ ರಾಜಕೀಯ ಕಾರಣಗಳಿಗೆ ನನಗೆ ಕೆಂಪೇಗೌಡ ಪ್ರಶಸ್ತಿ ಕೊಡಲಿಲ್ಲ.
- ಭಿಕ್ಷುಕರಾಗಿ ಹೋಗಿ ದೇವಸ್ಥಾನಗಳ ಮುಂದೆ ಹೋಗಿ ಭಿಕ್ಷೆ ಬೇಡಬೇಕಾಗತ್ತೆ, ಚಪ್ಪಲಿ ಹೊಲೆಯಬೇಕಾಗತ್ತೆ, ಮೂಟೆ ಹೊರಬೇಕಾಗತ್ತೆ, ಜಗತ್ತು ಯಾವುದನ್ನು ಕೀಳು ಅಂದುಕೊಳ್ಳುತ್ತೋ ಅದನ್ನು ಮಾರುವೇಷದಲ್ಲಿ ಹೋಗಿ ಮಾಡಬೇಕಾಗತ್ತೆ ಎಂದು ಚಕ್ರವರ್ತಿ ಹೇಳಿದ್ದಾರೆ.
ಹಾಕಿ ವಿಚಾರವಿಟ್ಟುಕೊಂಡು ವೈಷ್ಣವಿ ಸೇರಿದಂತೆ ಉಳಿದವರು ನಕ್ಕಿದ್ದರಯ, ಅದಕ್ಕಾಗಿ ವೈಷ್ಣವಿಗೆ ಚಕ್ರವರ್ತಿ ಟಾಂಗ್ ನೀಡಿದ್ದಾರೆ. ಚಕ್ರವರ್ತಿ ಹಾಕಿ ಹೇಳಿಕೆ ಸುಳ್ಳು ಅಂತ ಅರವಿಂದ್ ಟೀಂನವರು ಹೇಳಿದ್ದರು. ಅದು ತಪ್ಪಾಗಿತ್ತು. ಇನ್ನು ಬಿಗ್ ಬಾಸ್ ಕನ್ನಡ ಸೀಸನ್ 8ರ ಸೆಕೆಂಡ್ ಇನಿಂಗ್ಸ್‌ನಲ್ಲಿ ಚಕ್ರವರ್ತಿ ಚಂದ್ರಚೂಡ್ ಸಿಕ್ಕಾಪಟ್ಟೆ ಜಗಳ ಆಡಿಕೊಂಡಿದ್ದರು. ಅವರ ಸುಳ್ಳು ಮಾತು ಕೇಳಿ ಸುದೀಪ್ ಕೂಡ ತರಾಟೆಗೆ ತೆಗೆದುಕೊಂಡಿದ್ದರು.