ಮೋದಿ ಹೇಳಿದಂತೆ ಪಕೋಡಾ ಮಾರೋಕೆ ಹೋದ್ರೆ ಎಣ್ಣೆ ಬೆಲೆಯೂ ಹೆಚ್ಚಾಗಿದೆ; ಸಿದ್ದರಾಮಯ್ಯ

ಹೈಲೈಟ್ಸ್‌:

  • ನಿರೋದ್ಯೋಗಿಗಳನ್ನಾಗಿ ಮಾಡಿ ಪಕೋಡ ಮಾರಾಟ ಮಾಡಿ ಎಂದು ಹೇಳುತ್ತಿದ್ದಾರೆ
  • ಮೋದಿ ಹೇಳಿದಂತೆ ಪಕೋಡಾ ಮಾಡೋಕೆ ಹೋದ್ರೆ ಎಣ್ಣೆ ಬೆಲೆಯೂ ಹೆಚ್ಚಾಗಿದೆ
  • ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾಜಿ ಸಿಎಂ ಸಿದ್ಧರಾಮಯ್ಯ ವ್ಯಂಗ್ಯ

ಬಾಗೇಪಲ್ಲಿ: ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡಲಾಗುವುದು ಎಂದು ಭರವಸೆ ನೀಡುತ್ತಿದ್ದ ಪ್ರಧಾನಿ ಮೋದಿ, ಈಗ ನಿರೋದ್ಯೋಗಿಗಳನ್ನಾಗಿ ಮಾಡಿ ಪಕೋಡ ಮಾರಾಟ ಮಾಡಿ ಎಂದು ಹೇಳುತ್ತಿದ್ದಾರೆ. ಆದರೆ ಪಕೋಡ ಮಾಡಲು ಹೋದರೆ ಎಣ್ಣೆ ಬೆಲೆಯೂ ಹೆಚ್ಚಾಗಿದೆ ಎಂದು ಪ್ರತಿಪಕ್ಷ ನಾಯಕ

ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ಪಟ್ಟಣದಲ್ಲಿ ಸುಬ್ಬಾರೆಡ್ಡಿ ಚಾರಿಟಬಲ್‌ ಟ್ರಸ್ಟ್‌ ವತಿಯಿಂದ 81 ಸಾವಿರ ದಿನಸಿ ಕಿಟ್‌ ವಿತರಿಸಿ ಮಾತನಾಡಿ, ಈಗ ಪೆಟ್ರೋಲ್‌ ಬೆಲೆ 100ರೂ., ಗ್ಯಾಸ್‌ 900ರೂ., ಅಡುಗೆ ಎಣ್ಣೆ 200ರೂ.ಗಳ ಗಡಿ ದಾಟಿದೆ. ಪ್ರಧಾನಿ ಮೋದಿ ಆಚ್ಛೇದಿನ್‌ ಬರಲಿದೆ ಎಂದು ಹೇಳುತ್ತಿದ್ದರು. ಇದೇನಾ ಆ ದಿನಾ ಎಂದು ಪ್ರಶ್ನಿಸಿದರು. ಕೊರೊನಾ ನಿರ್ವಹಣೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿಫಲವಾಗಿದ್ದು ಸಾರ್ವಜನಿಕರಿಗೆ ವ್ಯಾಕ್ಸಿನ್‌ ಪೂರೈಸದೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನಿದ್ದೆ ಮಾಡುತ್ತಿದ್ದಾರೆ. ಲಾಕ್‌ಡೌನ್‌ ಸಂದರ್ಭದಲ್ಲಿ ಬಡವರಿಗೆ 10 ಸಾವಿರ ನಗದು, 10ಕೆಜಿ ಅಕ್ಕಿ ಕೊಡಿ ಎಂದು ಹೇಳಿದಾಗ ಕಿವಿಗೆ ಹಾಕಿಕೊಳ್ಳದ ಇದು ರಾಕ್ಷಸ ಸರಕಾರ. ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯಯನ್ನೂ ಹಂಚಿದ ಅಪಕಿರ್ತೀ ಈ ಸರಕಾರಕ್ಕೆ ಸಲ್ಲುತ್ತದೆ ಎಂದು ದೂರಿದರು.

ಕೊರೊನಾ ಹೆಸರಲ್ಲಿ ಲೂಟಿ:
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಭಾಷಣ ಆರಂಭವಾಗುತ್ತಿದ್ದಂತೆ ದಿಢೀರ್‌ ಮಳೆ ಆರಂಭವಾಯಿತು. ಆದರೆ ಮಳೆಯನ್ನೂ ಲೆಕ್ಕಿಸದೆ ಮಾತನಾಡಿ, ಕೊರೊನಾ ಹೆಸರಿನಲ್ಲಿ ಬಿಜೆಪಿಯವರು ಇಡೀ ರಾಜ್ಯವನ್ನೇ ಲೂಟಿ ಮಾಡಿ ಜನರನ್ನು ಬೀದಿಗೆ ತಳ್ಳಿದ್ದಾರೆ. ಅವರಿಗೆ ಜನರ ಸಾವು ನೋವಿಗೆ ಸ್ಪಂದಿಸುವುದು ಬೇಕಿಲ್ಲ ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಭಾಷಣ ಮಾಡುತ್ತಿದ್ದಂತೆ ಜನರು ‘ಮುಂದಿನ ಮುಖ್ಯಮಂತ್ರಿ’ ಎಂದು ಕೂಗಿದರು. ವೇದಿಕೆಯಲ್ಲಿ ಆಸೀನರಾಗಿದ್ದ ಡಿ.ಕೆ.ಶಿವಕುಮಾರ್‌, ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪ ಮೊಯಿಲಿ, ಶಾಸಕ ಎಸ್‌.ಎನ್‌.ಸುಬ್ಬಾರೆಡ್ಡಿ ಮತ್ತಿತರ ಮುಖಂಡರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *