ಆ. 10ಕ್ಕೆ SSLC ಫಲಿತಾಂಶ: ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ

COVID- 19 ಕಾರಣಕ್ಕೆ ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆ ನಡೆಸುವ ವಿಷಯದಲ್ಲಿ ಇನ್ನಿಲ್ಲದ ಗೊಂದಲ ಸೃಷ್ಟಿಸಿದ್ದ ರಾಜ್ಯ ಸರ್ಕಾರ  ಫಲಿತಾಂಶ ಪ್ರಕಟಿಸುವ ವಿಷಯದಲ್ಲೂ ಗೊಂದಲಕ್ಕೀಡಾಗಿತ್ತು.

ಬೆಂಗಳೂರು: COVID- 19 ಹೆಚ್ಚಾಗುತ್ತಿದ್ದರೂ ಹಲವು ಗೊಂದಲಗಳ ನಡುವೆ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆ ನಡೆಸಿದ್ದ ರಾಜ್ಯ ಸರ್ಕಾರ ಆಗಸ್ಟ್ 10ಕ್ಕೆ SSLC ಫಲಿತಾಂಶ ಪ್ರಕಟಿಸುವುದಾಗಿ ತಿಳಿಸಿದೆ.

COVID- 19 ಕಾರಣಕ್ಕೆ ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆ ನಡೆಸುವ ವಿಷಯದಲ್ಲಿ ಇನ್ನಿಲ್ಲದ ಗೊಂದಲ ಸೃಷ್ಟಿಸಿದ್ದ ರಾಜ್ಯ ಸರ್ಕಾರ  ಫಲಿತಾಂಶ ಪ್ರಕಟಿಸುವ ವಿಷಯದಲ್ಲೂ ಗೊಂದಲಕ್ಕೀಡಾಗಿತ್ತು. ಈಗ ಆಗಸ್ಟ್ 10ಕ್ಕೆ ಎಸ್‌ಎಸ್‌ಎಲ್‌ಸಿ (SSLC) ಫಲಿತಾಂಶ ಪ್ರಕಟಿಸುವುದಾಗಿ ತಿಳಿಸಿದೆ. ಈ ಮೂಲಕ ಗೊಂದಲಕ್ಕೆ ತೆರೆ ಎಳೆದಿದೆ.

ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಿದ್ದೇ ವಿವಾದಾಸ್ಪದವಾಗಿತ್ತು. ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಣ ಕ್ಷೇತ್ರದ ತಜ್ಞರ ವಿರೋಧದ ನಡುವೆಯೂ ಸರ್ಕಾರ ಸ್ವಪ್ರತಿಷ್ಠೆಗಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಿತ್ತು. ಬಳಿಕ ಫಲಿತಾಂಶ ಯಾವಾಗ ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲದಂತಾಗಿತ್ತು. ಈಗ ವಿದ್ಯಾರ್ಥಿಗಳು ಮತ್ತು‌ ಪೋಷಕರು ನಿಟ್ಟುಸಿರು ಬಿಡುವಂತಾಗಿದೆ.

ಆಗ ಪರೀಕ್ಷೆ ನಡೆಸುವಾಗ ಮಕ್ಕಳ ಜೀವ ಒತ್ತೆ ಇಟ್ಟು ಪರೀಕ್ಷೆ ನಡೆಸಲಾಯಿತು. ಬಳಿಕ ಸರ್ಕಾರದ ಯಾವ ಮೂಲದಿಂದ ಮಾಹಿತಿ ಸೋರಿಕೆಯಾಗಿದೆಯೋ ಗೊತ್ತಿಲ್ಲ. ಆಗಸ್ಟ್ 7ರಂದೇ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಎಂಬ ಸುದ್ದಿಗಳು ಸರಿದಾಡುತ್ತಿದ್ದವು. ಈ ಬಗ್ಗೆ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಎಸ್ ಎಸ್ ಎಲ್ ಸಿ (SSLC) ಫಲಿತಾಂಶ ಇಲ್ಲ’ ಎಂದು ಸ್ಪಷ್ಟೀಕರಣ ನೀಡಿದ್ದರು. ಈಗ ಆಗಸ್ಟ್ 10ರಂದು ಫಲಿತಾಂಶ ನೀಡುವ ಬಗ್ಗೆ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಘೋಷಿಸಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *