ಇನ್ಫೋಸಿಸ್ ಲಾಭ ಹೆಚ್ಚಳ 35 ಸಾವಿರ ಪದವೀಧರರ ನೇಮಕ
ದೇಶದ ಎರಡನೇ ಅತಿ ದೊಡ್ಡ ಸಾಫ್ಟ್ವೇರ್ ಕಂಪನಿ ಇನ್ಫೋಸಿಸ್ ತ್ರೈಮಾಸಿಕ ಏಪ್ರಿಲ್ನಿಂದ ಜೂನ್ ವರೆಗೆ ಹಣಕಾಸು ಫಲಿತಾಂಶವನ್ನು ಪ್ರಕಟಿಸಿದ್ದು
ಸಂಸ್ಥೆಯ ಲಾಭದಲ್ಲಿ ಶೇ. 22.7ರಷ್ಟು ಹೆಚ್ಚಳವಾಗಿದೆ.
ಈ ವರ್ಷ ಇನ್ನೂ ಸಾಕಷ್ಟು ಪ್ರಾಜೆಕ್ಟ್ಗಳು ಬರುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಮತ್ತೆ 35 ಸಾವಿರ ಪದವೀಧರರನ್ನು ನೇಮಕ ಮಾಡಿಕೊಳ್ಳಲು ಸಂಸ್ಥೆ ನಿರ್ಧರಿಸಿದೆ.
ಸಂಸ್ಥೆಯು ಕನ್ಸಾಲಿಡೇಟೆಡ್ ಲಾಭ 5,195 ಕೋಟಿ ರೂಗಳನ್ನು ಗಳಿಸಿದೆ.
ಇದರ ಜೊತೆಗೆ ಪ್ರಸಕ್ತ ಹಣಕಾಸು ವರ್ಷದಲ್ಲಿ 35 ಸಾವಿರ ಮಂದಿ ಪದವೀಧರರನ್ನು ನೇಮಕ ಮಾಡಿಕೊಳ್ಳುವುದಾಗಿ ಕಂಪನಿ ಘೋಷಿಸಿದೆ.
ಈ ಹಿಂದಿನ ತ್ರೈಮಾಸಿಕದಲ್ಲಿ ಕಂಪೆನಿಯು 5076 ಕೋಟಿ ರೂಪಾಯಿಯನ್ನು ಗಳಿಸಿತ್ತು. ರೂಪಾಯಿ ಲೆಕ್ಕದಲ್ಲಿ ಕನ್ಸಾಲಿಡೇಟೆಡ್ ಆದಾಯ 27,896 ಕೋಟಿ ರೂಪಾಯಿ ಗಳಿಸಿದ್ದರೆ, 2021ರ ಮಾರ್ಚ್ ತ್ರೈಮಾಸಿಕದಲ್ಲಿ 26,311 ಕೋಟಿ ಗಳಿಸಿತ್ತು. ಜೂನ್ ತ್ರೈಮಾಸಿಕದಲ್ಲಿ ಲಾಭ 5402 ಕೋಟಿ ರೂ. ಮತ್ತು ಆದಾಯ 27,718 ಕೋಟಿ ರೂ. ನಿರೀಕ್ಷೆ ಮಾಡಲಾಗಿತ್ತು.
ಜುಲೈ 14ನೇ ತಾರೀಕಿನ ದಿನದ ಕೊನೆಗೆ ಇನ್ಫೋಸಿಸ್ ಷೇರಿನ ಬೆಲೆ ಶೇ 2.07ರಷ್ಟು ಏರಿಕೆಯಾಗಿ, ರೂ. 1576.90ರಲ್ಲಿ ವಹಿವಾಟು ಮುಗಿದೆ. ಇನ್ನು 2021ನೇ ಇಸವಿಯಲ್ಲಿ ಇಲ್ಲಿಯ ತನಕ ಶೇ 26ರಷ್ಟು ಹೆಚ್ಚಳ ದಾಖಲಿಸಿದೆ.
ಈ ಹಣಕಾಸು ವರ್ಷದಲ್ಲಿ 35 ಸಾವಿರ ಮಂದಿ ಪದವೀಧರರನ್ನು ನೇಮಕ ಮಾಡಿಕೊಳ್ಳಲು ಕಂಪನಿ ಘೋಷಿಸಿದೆ. “ಡಿಜಿಟಲ್ ಪ್ರತಿಭೆಗಳ ಬೇಡಿಕೆ ಸ್ಫೋಟಗೊಳ್ಳುತ್ತಿದ್ದಂತೆ, ಉದ್ಯಮದಲ್ಲಿ ಹೆಚ್ಚುತ್ತಿರುವ ಕೆಲಸ ಬಿಡುವ ಮನೋಭಾವವು ಸವಾಲನ್ನು ಒಡ್ಡುತ್ತದೆ. ಕಾಲೇಜು ಪದವೀಧರರ ನೇಮಕಾತಿ ಕಾರ್ಯಕ್ರಮಕ್ಕೆ 35 ಸಾವಿರಕ್ಕೆ ವಿಸ್ತರಿಸುವ ಮೂಲಕ ಈ ಬೇಡಿಕೆಯನ್ನು ಈಡೇರಿಸಲು ನಾವು ಯೋಜಿಸಿದ್ದೇವೆ,” ಎಂದು ಇನ್ಫೋಸಿಸ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ರಾವ್ ಹೇಳಿದ್ದಾರೆ.
ಜೂನ್ ಅಂತ್ಯದ ತ್ರೈಮಾಸಿಕದಲ್ಲಿ ಇನ್ಫೋಸಿಸ್ ಕಂಪೆನಿಯು 2.6 ಬಿಲಿಯನ್ ಅಮೆರಿಕನ್ ಮೌಲ್ಯದ ದೊಡ್ಡ ಒಪ್ಪಂದಗಳಿಗೆ ಸಹಿ ಹಾಕಿದೆ. ಈ ತ್ರೈಮಾಸಿಕದಲ್ಲಿ ಆಪರೇಷನಲ್ ಮಾರ್ಜಿನ್ ಶೇ 23.7 ರಷ್ಟಿದ್ದು, ಹಣದ ಹರಿವು ವರ್ಷಕ್ಕೆ ಶೇ 18.5ರಷ್ಟು ಹೆಚ್ಚಾಗಿದೆ ಎಂದು ಹೇಳಲಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಇನ್ಫೋಸಿಸ್ ಕಂಪೆನಿಯು 4233 ಕೋಟಿ ರೂಪಾಯಿ ಲಾಭವನ್ನು ಗಳಿಸಿತ್ತು ಅದಕ್ಕೆ ಹೋಲಿಸಿದಲ್ಲಿ ವರ್ಷದಿಂದ ವರ್ಷಕ್ಕೆ ಶೇ 22.7ರಷ್ಟು ಹೆಚ್ಚು ಲಾಭವನ್ನು ಕಂಪೆನಿ ಗಳಿಸಿದೆ.