ಕರೀನಾ ಕಪೂರ್ ಖಾನ್ ಪುಸ್ತಕದ ಶೀರ್ಷಿಕೆ ವಿರುದ್ಧ ಕ್ರೈಸ್ತ ಸಮುದಾಯ ಗುಂಪೊಂದರಿಂದ ದೂರು ದಾಖಲು

ಜನಪ್ರಿಯ ಬಾಲಿವುಡ್​ ನಟಿ ಕರೀನಾ ಕಪೂರ್ ಅವರು ವಿರುದ್ಧ ಅವರು ಬರೆದಿರುವ (ಸಹ ಲೇಖಕಿ) ಪುಸ್ತಕದ ಶೀರ್ಷಿಕೆಗೆ ಸಂಭಂಧಿಸಿದಂತೆ ಮಹಾರಾಷ್ಟ್ರದ ಬೀಡ್​ನಲ್ಲಿ ದೂರೊಂದು ದಾಖಲಾಗಿದೆ. ಕ್ರೈಸ್ತ ಸಮುದಾಯಕ್ಕೆ ಸೇರಿದ ಗುಂಪೊಂದು ಕರೀನಾ ಅವರ ‘ಪ್ರಿಗ್ನೆನ್ಸಿ ಬೈಬಲ್’ ಪುಸ್ತಕ ಶೀರ್ಷಿಕೆಯಾಗಿ ಪವಿತ್ರ ಗ್ರಂಥದ ಹೆಸರನ್ನು ಪುಸ್ತಕಕ್ಕೆ ಇಟ್ಟಿರುವದಕ್ಕೆ ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿ ದೂರು ದಾಖಲಿಸಿದ್ದಾರೆ.

ಲಭ್ಯವಾಗಿರುವ ಮಾಹಿತಿಯ ಪ್ರಕಾರ ಅಲ್ಪಾ, ಒಮೆಗಾ ಕ್ರಿಶ್ಚಿಯನ್ ಮಹಾಸಂಘ ಹೆಸರಿನ ಕ್ರಿಶ್ಚಿಯನ್ ಸಂಸ್ಥೆಯು, ಪುಸ್ತಕದ ಟೈಟಲ್ ಕ್ರಿಶ್ವಿಯನ್ನರ ಭಾವನಗಳಿಗೆ ಘಾಸಿಯುಂಟು ಮಾಡಿದೆ ಎಂದು ಆರೋಪಿಸಿದೆ. ಸಂಸ್ಥೆಯ ಅಧ್ಯಕ್ಷ ಆಶಿಷ್ ಶಿಂಧೆ, ಬೀಡ್ ನಗರದಲ್ಲಿನ ಶಿವಾಜಿ ನಗರ ಪೊಲೀಸ್ ಸ್ಟೇಶನ್​ನಲ್ಲಿ ದೂರನ್ನು ದಾಖಲಿಸಿ ಪುಸ್ತಕದ ಕರ್ತೃ ವಿರುದ್ಧ ದೇವದೂಷಣೆ ಆರೋಪದಡಿ ಕ್ರಮ ತೆಗೆದಗುಕೊಳ್ಳಬೇಕು ಅಂತ ಆಗ್ರಹಿಸಿದ್ದಾರೆ.

ಪವಿತ್ರ ಪದವಾಗಿರುವ ಬೈಬಲ್​ ಅನ್ನು ಸದರಿ ಪುಸ್ತಕದಲ್ಲಿ ಬಳಸಲಾಗಿದ್ದು ಅದು ಕ್ರಿಶ್ಚಿಯನ್ನರ ಧಾರ್ಮಿಕ ಭಾವನೆಗಳಿಗೆ ಘಾಸಿಯನ್ನುಂಟು ಮಾಡಿದೆ ಅಂತ ದೂರಿನಲ್ಲಿ ಹೇಳಿರುವ ಶಿಂಧೆ ಅವರು, ಐಪಿಸಿ ಸೆಕ್ಷನ್ 295-ಎ ( ಯಾವುದೇ ಒಂದು ವರ್ಗದ ಧಾರ್ಮಿಕ ಭಾವನೆ ಮತ್ತು ಧಾರ್ಮಿಕ ನಂಬುಗೆಗಳನ್ನು ಉದ್ದೇಶಪೂರ್ವಕ ಘಾಸಿಗೊಳಿಸುವುದು) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.

ದೂರು ಸ್ವೀಕರಿಸಿರುವುದನ್ನು ಖಚಿತಪಡಿಸಿರುವ ಪೊಲೀಸರು ಇನ್ನೂ ಎಫ್​ಐಅರ್ ದಾಖಲಿಸಿಲ್ಲವೆಂದು ಹೇಳಿದ್ದಾರೆ. ಕರೀನಾ ಅವರು ಪುಸ್ತಕವು ಬೀಡ್​ನಲ್ಲಿ ಪ್ರಕಾಶನಗೊಂಡಿಲ್ಲವಾದ್ದರಿಂದ ದೂರನ್ನು ಮುಂಬೈ ಮಹಾನಗರದಲ್ಲಿ ದಾಖಲಿಸುವಂತೆ ದೂರುದಾರರಿಗೆ ತಿಳಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಶಿವಾಜಿ ನಗರ ಪೊಲೀಸ್ ಠಾಣೆಯ ಇನ್-ಚಾರ್ಜ್ ಇನ್ಸ್​ಪೆಕ್ಟರ್ ಸಾಯಿನಾಥ್ ಥೋಂಬ್ರೆ ಅವರು, ‘ ನಾವು ದೂರನ್ನು ಸ್ವೀಕರಿಸಿದ್ದೇವೆ. ಆದರೆ, ಘಟನೆಯು ಬೀಡ್​ನಲ್ಲಿ ನಡೆದಿಲ್ಲವಾದ್ದರಿಂದ ಕೇಸ್ ರಿಜಿಸ್ಟರ್ ಮಾಡಿಲ್ಲ. ನಾವು ಅವರಿಗೆ ಮುಂಬೈಯಲ್ಲಿ ದೂರು ದಾಖಲಿಸುವಂತೆ ಸಲಹೆ ನೀಡಿದ್ದೇವೆ,’ ಎಂದು ಹೇಳಿದರು.

ಕರೀನಾ ಕಪೂರ್ ಖಾನ್ ಅವರ ಪ್ರಿಗ್ನೆನ್ಸಿ ಬೈಬಲ್: ದಿ ಅಲ್ಟಿಮೇಟ್ ಮ್ಯಾನುಯಲ್ ಫಾರ್ ಮದರ್ಸ್ ಟು ಬಿ ಪುಸ್ತಕವು ಕರೀನಾ ಕಪೂರ್ ಖಾನ್ ಮತ್ತು ಆದಿತಿ ಶಾಹ ಭಿಮ್ಜಿಯಾನಿ ಅವರು ಜಂಟಿಯಾಗಿ ಬರೆದಿದ್ದಾರೆ. ಒಬ್ಬ ಸೆಲಿಬ್ರಿಟಿಯಾಗಿ ಕರೀನಾ ಎರಡು ಬಾರಿ ಗರ್ಭಿಣಿಗಾಗಿದ್ದಾಗಿನ ಅನುಭವವನ್ನು ಪುಸ್ತಕದಲ್ಲಿ ವಿವರಿಸಲಾಗಿದೆ. ಭಾರತದಲ್ಲಿ ಸ್ರ್ತೀರೋಗ, ಹೆರಿಗೆ ಮತ್ತು ಪ್ರಸೂತಿ ವೈದ್ಯರ ಅಧಿಕೃತ ಅಂಗವಾಗಿರುವ ಫೆಡರೇಷನ್ ಆಫ್ ಆಬ್ಸ್​ಟೆಟ್ರಿಕ್ ಅಂಡ್ ಗೈನೆಕಾಲಿಜಿಕಲ್ ಸೊಸೈಟೀಸ್ ಆಫ್ ಇಂಡಿಯಾದ (ಎಫ್ಒಜಿಎಸ್ಐ) ಈ ಪುಸ್ತಕವನ್ನು ಪರಿಶೀಲನೆ ಮಾಡಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *