Imran Khan : ಭಾರತದ ಸ್ನೇಹಕ್ಕೆ ಆರ್‌ಎಸ್‌ಎಸ್ ಸಿದ್ಧಾಂತ ಅಡ್ಡಿ ಎಂದ ಪಾಕ್ ಪ್ರಧಾನಿ ಇಮ್ರಾನ್ ಖಾನ್
ಹೈಲೈಟ್ಸ್:
- ಹೊಸ ವರಸೆ ಶುರು ಮಾಡಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್
- ಭಾರತದ ಸ್ನೇಹಕ್ಕೆ RSS ಅಡ್ಡಿ ಎಂದ ಪಾಕಿಸ್ತಾನದ ಪಿಎಂ
- ತಾಲಿಬಾನ್ ಬಗ್ಗೆ ಮಾತನಾಡಲು ಹಿಂಜರಿದ ಇಮ್ರಾನ್ ಖಾನ್
ತಾಶ್ಕೆಂಟ್: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸಿದ್ಧಾಂತಗಳೇ ಪಾಕಿಸ್ತಾನ ಮತ್ತು ಭಾರತದ ನಡುವೆ ಸೌಹಾರ್ದಯುತ ಮಾತುಕತೆಗೆ ಅಡ್ಡಿಯಾಗಿದೆ. ಬಹಳ ಕಾಲದಿಂದ ಭಾರತದೊಂದಿಗೆ ಉತ್ತಮ ನಾಗರಿಕ ನೆರೆ ರಾಜ್ಯವಾಗಿ ಮುಂದವರಿಯಲು ನಾವು ಕಾಯುತ್ತಿದ್ದೇವೆ ಎಂದು ಪಾಕಿಸ್ತಾನ
ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
ಉಜ್ಬೇಕಿಸ್ತಾನದಲ್ಲಿನ ಸೆಂಟ್ರಕ್-ದಕ್ಷಿಣ ಏಷ್ಯಾ ಸಮ್ಮೇಳನದಲ್ಲಿ ಭಾಗಿಯಾಗಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಆರ್‌ಎಸ್‌ಎಸ್ ಸಿದ್ಧಾಂತವು ಭಾರತ-ಪಾಕ್ ನಡುವೆ ಅಡ್ಡಿಯಾಗಿದೆ ಎಂದು ಆರೋಪಿಸಿದ್ದಾರೆ. ಭಾರತವು ಭಯೋತ್ಪಾದನೆ ಮತ್ತು ಮಾತುಕತೆ ಒಟ್ಟಾಗಿ ಸಾಗಲು ಸಾಧ್ಯವಿಲ್ಲಎಂದಿರುವುದಕ್ಕೆ ಸುದ್ದಿಗಾರರು ಖಾನ್ ಅವರಿಂದ ಪ್ರತಿಕ್ರಿಯೆ ಬಯಸಿದ್ದರು.
ಇದೇ ವೇಳೆ ಅಫಘಾನಿಸ್ತಾನದಲ್ಲಿ ತಾಲಿಬಾನ್‌ನಿಂದ ಹಿಂಸಾಚಾರ ಮರುಕಳಿಸುತ್ತಿರುವ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸದೆಯೇ ಇಮ್ರಾನ್ ಖಾನ್ ಜಾರಿಕೊಂಡಿದ್ದಾರೆ.