ದರ್ಶನ್ ಅವ್ರೆ.. ನಿರ್ದೇಶಕರು ಯಾವ್ ಪುಡಂಗಿಗಳು ಅಲ್ಲಾ, ಅವ್ರಿಗೆ ಕೊಂಬು ಇರಲ್ಲ: ಜೋಗಿ ಪ್ರೇಮ್ ತಿರುಗೇಟು

ಹೈಲೈಟ್ಸ್‌:

  • ಉಮಾಪತಿ ಶ್ರೀನಿವಾಸ್‌ರನ್ನು ದರ್ಶನ್‌ಗೆ ಪರಿಚಯಿಸಿದ್ದು ಜೋಗಿ ಪ್ರೇಮ್
  • ದರ್ಶನ್ ‘ಕರಿಯ’ ಸಿನಿಮಾ ನಿರ್ದೇಶನ ಮಾಡಿದ್ದು ಜೋಗಿ ಪ್ರೇಮ್
  • ಜೋಗಿ ಪ್ರೇಮ್ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದರ್ಶನ್
  • ದರ್ಶನ್ ಮಾತುಗಳಿಗೆ ಪ್ರತಿಕ್ರಿಯೆ ನೀಡಿದ ಜೋಗಿ ಪ್ರೇಮ್

ನಟ ದರ್ಶನ್ ಮೈಸೂರಿನಲ್ಲಿ ಸಡೆಸಿದ ಸುದ್ದಿಗೋಷ್ಠಿಯಲ್ಲಿ ಉಮಾಪತಿ ಶ್ರೀನಿವಾಸ್ ಅವರನ್ನು ಜೋಗಿ ಪ್ರೇಮ್ ಪರಿಚಯ ಮಾಡಿಸಿದ್ದರು. ಸಿನಿಮಾ ಡೇಟ್ ವಿಚಾರಕ್ಕೆ ಪ್ರೇಮ್‌ಗೆ ಎರಡು ಕೊಂಬು ಇದೆಯಾ? ‘ಕರಿಯ’ ಸಿನಿಮಾ ಟೈಮ್‌ನಲ್ಲಿ ಪ್ರೇಮ್ ಏನು ಅಂತ ನೋಡಿದ್ದೇವೆ ಎಂದು ದರ್ಶನ್ ಹೇಳಿದ್ದರು. ಆ ಮಾತು ಕೇಳಿ ಮನನೊಂದ ಪ್ರೇಮ್ ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕ ದರ್ಶನ್‌ರಿಗೆ ಒಂದಷ್ಟು ಮಾತು ಹೇಳಿದ್ದಾರೆ.

ಪ್ರೇಮ್ ಹೇಳಿದ್ದಿಷ್ಟು…

ದರ್ಶನ್ ಅವರೇ, ನಾನು ‘ಕರಿಯ’ ಸಿನಿಮಾ ಮಾಡ್ಬೇಕಾದ್ರೆ ಯಾವ್ ಪುಡಂಗುನೂ ಅಲ್ಲಾ ನಂಗ್ ಕೊಂಬು ಇರ್ಲಿಲ್ಲ.. ನಾನೊಬ್ಬ ಸಾಮಾನ್ಯ ನಿರ್ದೇಶಕ. ರಾಜಕುಮಾರ್, ಅಂಬರೀಷ್, ವಿಷ್ಣುವರ್ಧನ್ ಹಾಗೂ ರಜನಿಕಾಂತ್ ಒಬ್ಬ ಒಳ್ಳೆ ನಿರ್ದೇಶಕ ಅಂತ ಬೆನ್ನು ತಟ್ಟಿದ್ರು. ಇಡೀ ಕರ್ನಾಟಕ ಜನತೆ ಹರಸಿ ಹಾರೈಸಿ ಹ್ಯಾಟ್ರಿಕ್ ನಿರ್ದೇಶಕ ಅಂತ ಬಿರುದು ಕೊಟ್ಟಾಗಲೂ ನನಗೆ ಕೊಂಬು ಬರಲಿಲ್ಲ. ನಾನು ನಂದೇ ಆದ್ ಸ್ಟೈಲ್‌ನಲ್ಲಿ ಸಿನಿಮಾ ಮಾಡ್ಕೊಂಡು ಬಂದವನು.

ಸುಮಾರು ನಿರ್ಮಾಪಕರು ಹಾಗೂ ನಿಮ್ಮ ಅಭಿಮಾನಿಗಳು ಹಾಗೂ ನನ್ನ ಅಭಿಮಾನಿಗಳು ಪ್ರತಿ ಸಾರಿ ದರ್ಶನ್ ಹಾಗೂ ನಿಮ್ಮ ಕಾಂಬಿನೇಶನ್‌ನಲ್ಲಿ ಯಾವಾಗ ಚಿತ್ರ ಮಾಡ್ತಿರಂತ ಕೇಳುತ್ತಲಿದ್ದರು. ಇದರ ಬಗ್ಗೆ ನಿಮಗೂ ಗೊತ್ತು ನನಗೂ ಗೊತ್ತು. ಇಬ್ಬರು ಸೇರಿ ಸಿನಿಮಾ ಮಾಡೋದರ ಬಗ್ಗೆ ಚೆರ್ಚೆ ಮಾಡಿದ್ದೆವು. ನಾನು ನಮ್ ಬ್ಯಾನರ್ ಅಥವಾ ನಿಮ್ಮ ಬ್ಯಾನರ್‌ನಲ್ಲಿ ಸಿನಿಮಾ ಮಾಡೋಣ ಅಂತ ಮತ್ತೆ ಚರ್ಚೆ ಮಾಡಿದ್ವಿ. ಆದರೆ ನನಗೆ ಉಮಾಪತಿಯವರು, ನೀವು ಹಾಗೂ ದರ್ಶನ್ ಸೇರಿ ನಂಗ್ ಸಿನಿಮಾ ಮಾಡ್ಕೊಡಿ ಅಂತ ಹೇಳಿದ್ದರು. ಅದಕ್ಕೆ ನಾನು ಉಮಾಪತಿ ಅವರನ್ನು ನಿಮಗೆ ಪರಿಚಯ ಮಾಡಿಸಿದೆ.

ನಾವು ಮೂರು ಜನ ಸೇರಿ ಸಿನಿಮಾ ಮಾಡೋಣ ಅಂತ ಡಿಸೈಡ್ ಮಾಡಿದ್ವಿ.. ಆದ್ರೆ ನನ್ ‘ದಿ ವಿಲನ್’ ಸಿನಿಮಾ ಲೇಟ್ ಆದ ಕಾರಣ ನಾನೇ ಉಮಾಪತಿಯವರಿಗೆ ದರ್ಶನ್ ಅವ್ರ ಡೇಟ್ ಇದ್ದ ಕಾರಣ ಬೇರೆ ನಿರ್ದೇಶಕರನ್ನ ಹಿಡಿದು ಸಿನಿಮಾ ಮಾಡಿ ಅಂತ ಹೇಳಿದ್ದೆ. ನನ್ನ ಸಂಭಾವನೆಯನ್ನು ಉಮಾಪತಿಯವರಿಗೆ ವಾಪಾಸ್ ನೀಡಿ ‘ರಾಬರ್ಟ್’ ಸಿನಿಮಾಗೆ ಹಾರೈಸಿದವನು ನಾನು. ಅದೇ ರೀತಿ ‘ರಾಬರ್ಟ್’ ಚಿತ್ರ ಹಿಟ್ ಆಯ್ತು, ಎಲ್ಲರ ಹಾಗೇ ನಾನು ಖುಷಿ ಪಟ್ಟೆ..

ಇದ್ರ ಮಧ್ಯೆ ನನ್ನ ಹೆಸರು ಯಾಕೆ? ದರ್ಶನ್ ಅವ್ರೆ ನಿರ್ದೇಶಕರು ಯಾವ್ ಪುಡಂಗಿಗಳು ಅಲ್ಲಾ, ಅವ್ರಿಗೆ ಕೊಂಬು ಇರಲ್ಲ.. ತೆರೆಮೇಲೆ ಒಬ್ಬ ನಟನನ್ನ ಹುಟ್ಟಾಕಿ ಅವ್ನಿಗೆ ಕೊಂಬು ಬರ್ಬೇಕಾದ್ರೆ ನಿರ್ದೇಶಕನ ಶ್ರಮ ಎಷ್ಟಿರುತ್ತೆಂತ ಪ್ರತಿಯೊಬ್ಬ ಕಲಾವಿದರಿಗೂ ಗೊತ್ತು, ಅದು ನಿಮ್ಗೂ ಗೊತ್ತು.. ದಯವಿಟ್ಟು ಇನ್ನೊಬ್ಬರ ಬಗ್ಗೆ ಮಾತನಾಡಬೇಕಾದರೆ ಯೋಚಿಸಿ ಮಾತಾಡಿ ದರ್ಶನ್ ಅವರೇ… ನಿಮ್ಮ ಮಾತುಗಳಿಗೆ ಧನ್ಯವಾದಗಳು. ದೇವರು ನಿಮಗೆ ಒಳ್ಳೇದು ಮಾಡಲಿ.

Darshan Prem

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *