ಕಲಬುರಗಿ : ಕೃಷಿ ವಿಜ್ಞಾನ ಕೇಂದ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ: ನಮೋಶಿ ಸಂತಸ

ಕಲಬುರಗಿ : ನಗರದ ಹೊರವಲಯದ ಆಳಂದ ರಸ್ತೆಯಲ್ಲಿರುವ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರಕ್ಕೆ 2020ನೇ ಸಾಲಿನ ಪಂಡಿತ್ ದೀನ್‍ದಯಾಳ್ ಉಪಾಧ್ಯಾಯ ರಾಷ್ಟ್ರೀಯ ಕೃಷಿ ವಿಜ್ಞಾನ ಕೇಂದ್ರ ಪ್ರಶಸ್ತಿ ಲಭಿಸಿದ್ದು ಅತ್ಯಂತ ಹರ್ಷದಾಯಕವಾದ ಸಂಗತಿವಾಗಿದೆ ಎಂದು ರಾಜ್ಯ ವಿಧಾನ ಪರಿಷತ್ ಸದಸ್ಯ ಶಶಿಲ್ ಜಿ. ನಮೋಶಿ ಅವರು ತಿಳಿಸಿದ್ದಾರೆ.
ಕೃಷಿಯಲ್ಲಿ ತಂತ್ರಜ್ಞಾನಾಧಾರಿತ ಅಧಿಕ ಹಾಗೂ ಗುಣಮಟ್ಟದ ಇಳುವರಿ ಮತ್ತು ಕೃಷಿ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ಕೃಷಿ ವಿಜ್ಞಾನ ಕೇಂದ್ರಗಳಿಗೆ ಈ ಪ್ರತಿಷ್ಠತ ಪ್ರಶಸ್ತಿ ನೀಡಲಾಗುತ್ತದೆ. ಈ ಪ್ರಶಸ್ತಿ 8 ಲಕ್ಷ ರೂ ನಗದು ಮತ್ತು ಟ್ರೋಪಿ ಪ್ರಮಾಣ ಪತ್ರ ಹೊಂದಿದೆ. ಇದು ದೇಶದಲ್ಲಿರುವ ಒಟ್ಟು 722 ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರಗಳ ಪೈಕಿ ಕಲಬುರಗಿ ಕೃಷಿ ವಿಜ್ಞಾನ ಕೇಂದ್ರ ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಪಡೆದು ಕೊಂಡಿದ್ದು ನಮ್ಮ ನಾಡಿಗೆ ಹಾಗೂ ಕಲ್ಯಾಣ ಕರ್ನಾಟಕ ಭಾಗಕ್ಕೆ ಕೀರ್ತಿ ತಂದಿರುವುದು ಸಂತೋಷಕರ ಸಂಗತಿ ಎಂದು ಅವರು ಹೇಳಿಕೆಯಲ್ಲಿ ಶ್ಲಾಘಿಸಿದ್ದಾರೆ.
ಪ್ರಮುಖವಾಗಿ ತೊಗರಿ ಬೆಳೆಯಲ್ಲಿ ಕಂಡು ಬರುವ ನೆಟೆ ಮತ್ತು ಗೊಡ್ಡುರೋಗ ನಿರೋಧಕ ತಳಿಗಳನ್ನು ಅಧಿಕ ಕ್ಷೇತ್ರಗಳಿಗೆ ವಿಸ್ತರಿಸಿ ಪಲ್ಸಮ್ಯಾಜಿಕ್ ತಂತ್ರಜ್ಞಾನದ ಬಳಕೆ ಹಾಗೂ ಸಮಗ್ರ ಕೀಟ ಮತ್ತು ನಿರ್ವಾಹಣಾ ತಂತ್ರಜ್ಞಾನಗಳನ್ನು ರೈತರು ಅಳವಡಿಸಿಕೊಂಡರು ಇದರಿಂದ ಹೆಚ್ಚುವರಿ ಇಳುವರಿ ಪಡೆದು ಆರ್ಥಿಕ ಬಲಗೊಳ್ಳುವಲ್ಲಿ ಕೇಂದ್ರ ತೊಡಗಿಸಿಕೊಂಡಿತ್ತು. ಈ ಪ್ರಶಸ್ತಿ ನಮ್ಮ ಜಿಲ್ಲೆಯ ಕೃಷಿ ವಿಜ್ಞಾನ ಕೇಂದ್ರದ ಮುಡಿಗೆರಿಸಲು ಕೆಲಸ ನಿರ್ವಹಿಸಿದ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ರಾಜು ತೆಗಳ್ಳಿರವರ ತಂಡಕ್ಕೆ ಅವರು ಅಭಿನಂದಿಸಿದ್ದಾರೆ.
ಅದೆ ರೀತಿಯಾಗಿ ಪ್ರಗತಿಪರ ಕೃಷಿಕರಾದ ಹಾಳ್ ಸುಲ್ತಾನಪುರ ಶರಣಬಸಪ್ಪ ಪಾಟೀಲ್ ಅವರಿಗೆ ರಾಷ್ಟ್ರಮಟ್ಟದ ಐಸಿಎಆರ್ “ಜಗಜೀವನ್ ರಾಮ್ ಅವಿಷ್ಕಾರ ಕೃಷಿಕ ಪುರಸ್ಕಾರ ಪ್ರಶಸ್ತಿ-2020” ಲಭಿಸಿದೆ. ಈ ಭಾಗದ ನೀರಿನ ಸದ್ಬಳಕೆ ಮಾಡುವುದು, ಸೌರಶಕ್ತಿ ವಿದ್ಯುತ್ ದೀಪ ಹಾಗು ಇನ್ನಿತರೆ ಕೃಷಿ ಚಟುವಟಿಕೆಗಳಿಗೆ ಬೇಕಾದ ಉಪಯುಕ್ತ ಆವಿಷ್ಕಾರಕ್ಕಾಗಿ ಹಿಂದುಳಿದ ಭಾಗಕ್ಕೆ ಲಭ್ಯಿಸಿದ್ದು ಅವರಿಗೂ ಕೂಡಾ ಅಭಿನಂದನೆಗಳನ್ನು ಸಲ್ಲಿಸುವುದಾಗಿ ನಮೋಶಿ ಅವರು ತಿಳಿಸಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *