ಕಲಬುರಗಿ : ಸ್ನೇಹಿತನ ಅಪಹರಿಸಿ ಕೊಲೆ ಮಾಡಿದವರು ಅರೆಸ್ಟ್
ಕಲಬುರಗಿ : ಹಣ ಕೊಟ್ಟ ಸ್ನೇಹಿತನನ್ನೇ ಅಪಹರಿಸಿಕೊಂಡು ಹೋಗಿ ಕೊಲೆ ಮಾಡಿ, ರೈಲಿಗೆ ಬಿದ್ದು ಮೃತಪಟ್ಟಿದ್ದಾನೆ ಎಂಬಂತೆ ಬಿಂಬಿಸಲು ಯತ್ನಿಸಿದ್ದ ಮೂವರು ಆರೋಪಿತರನ್ನು ವಾಡಿ ರೈಲ್ವೆ ಪೆÇಲೀಸರು ಶನಿವಾರ ಬಂಧಿಸಿದ್ದಾರೆ.
ಜೇವರ್ಗಿ ತಾಲೂಕಿನ ನೇದಲಗಿ ಗ್ರಾಮದ ಲಕ್ಷ್ಮಣ ಬಂಡಿವಡ್ಡರ, ರವಿ ಬಂಡಿವಡ್ಡರ ಮತ್ತು ಹಳೆ ಶಹಾಬಾದಿನ ರಾಕೇಶ ಅಲಿಯಾಸ್ ಗಣೇಶ ಯಮನಪ್ಪ ಎಂಬುವವರೇ ಬಂಧಿತರು.
ಜೇವರ್ಗಿ ತಾಲೂಕಿನ ಬಿಲ್ಲಾಡ ಗ್ರಾಮದ ನಿವಾಸಿಯಾಗಿದ್ದ ಚನ್ನಬಸಪ್ಪ ನಾಯ್ಕೋಡಿ (35) ಎಂಬಾತನನ್ನು ಅಪಹರಿಸಿಕೊಂಡು ಬಂದು ಕೊಲೆ ಮಾಡಿ ಮರತೂರ ಸಮೀಪದ ರೈಲು ಹಳಿಯಲ್ಲಿ ಬಿಸಾಕಿ ಪರಾರಿಯಾಗಿದ್ದರು.
ಸ್ನೇಹಿತನಾದ ಲಕ್ಷ್ಮಣಗೆ, ಚನ್ನಬಸಪ್ಪ 2 ಲಕ್ಷ ರೂ.ಹಾಗೂ 10 ಗ್ರಾಂ ಚಿನ್ನ ಕೊಟ್ಟಿದ್ದ. ಅದನ್ನು ಮರಳಿ ಕೇಳಿದ್ದರಿಂದಲೇ ಜು.10ರಂದು ಚನ್ನಬಸಪ್ಪನನ್ನು ಆರೋಪಿಗಳು ಅಪಹರಿಸಿ À ಕೊಲೆ ಮಾಡಿದ್ದರು ಎಂಬುದು ವಿಚಾರಣೆಯಲ್ಲಿ ಗೊತ್ತಾಗಿದೆ ಎಂದು ಪೆÇಲೀಸರು ತಿಳಿಸಿದ್ದಾರೆ. ಪತ್ತೆಯಾಗಿದ್ದ ಶವದ ಕೆಲವು ಭಾಗಗಳ ಮೇಲೆ ಗಾಯದ ಗುರುತುಗಳು ಪತ್ತೆಯಾಗಿದ್ದರಿಂದ ಕೊಲೆಯಾಗಿರಬಹುದು ಎಂದು ರೈಲ್ವೆ ಪೆÇಲೀಸರು ಶಂಕೆ ವ್ಯಕ್ತಪಡಿಸಿದ್ದರು.
ರೈಲ್ವೆ ಎಸ್ಪಿ ಸಿರಿಗೌರಿ ಮಾರ್ಗದರ್ಶನದಲ್ಲಿ ಡಿಎಸ್ಪಿ ವಿ.ಎನ್.ಪಾಟೀಲ್ ನೇತೃತ್ವದಲ್ಲಿ ಸಿಪಿಐ ರಮೇಶ ಕಾಂಬಳೆ, ಪಿಎಸ್‍ಐ ವೀರಭದ್ರ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿತರನ್ನು ಬಂಧಿಸಿದ್ದಾರೆ. ವಾಡಿ ರೈಲ್ವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.