Sumalatha: ಮಂಡ್ಯ ಅಕ್ರಮ ಗಣಿಗಾರಿಕೆ ಕುರಿತು ರಾಜ್ಯಪಾಲರನ್ನು ಭೇಟಿಯಾದ ಸಂಸದೆ ಸುಮಲತಾ, ಮನವಿ ಪತ್ರ ಸಲ್ಲಿಕೆ!

ಹೈಲೈಟ್ಸ್‌:

  • ರಾಜ್ಯಪಾಲರನ್ನು ಭೇಟಿಯಾದ ಮಂಡ್ಯ ಸಂಸದೆ ಸುಮಲತಾ ಅಂಬರೀಶ್‌
  • ಮಂಡ್ಯ ಅಕ್ರಮ ಗಣಿಗಾರಿಕೆ ಕುರಿತು ರಾಜ್ಯಪಾಲರೊಂದಿಗೆ ಚರ್ಚೆ
  • ಅಕ್ರಮ ಕಲ್ಲುಗಣಿಗಾರಿಕೆ ಬಗ್ಗೆಯೂ ಮನವಿ ಪತ್ರ ಸಲ್ಲಿಸಿದ್ದೆ ಎಂದ ಸಂಸದೆ

ಬೆಂಗಳೂರು: ಕೆಆರ್‌ಎಸ್‌ ಅಣೆಕಟ್ಟೆ ಸುರಕ್ಷತೆಗೆ ಒತ್ತು ನೀಡುವ ಜತೆಗೆ ಅಕ್ರಮ ಗಣಿಗಾರಿಕೆ ತಡೆಯುವಂತೆ ದನಿ ಎತ್ತಿರುವ ಸಂಸದೆ ಸುಮಲತಾ ಅಂಬರೀಷ್‌ ಈ ವಿಚಾರವಾಗಿ ಇದೀಗ ರಾಜಭವನದ ಬಾಗಿಲು ತಟ್ಟಿದ್ದಾರೆ. ಶುಭಕೋರುವ ವಿಚಾರದಲ್ಲಿ ನೂತನ ರಾಜ್ಯಪಾಲ ತಾವರ್‌ ಚಂದ್‌ ಗೆಹ್ಲೋಟ್‌ ಅವರನ್ನು ಶನಿವಾರ ಭೇಟಿಯಾಗಿ ಕೆಆರ್‌ಎಸ್‌ ಅಣೆಕಟ್ಟೆ ಬಿರುಕು ಮತ್ತು ಗಣಿಗಾರಿಕೆ ವಿಚಾರದಲ್ಲಿ ಮನವಿ ನೀಡಿದ್ದಾರೆ.

”ಸುಪ್ರೀಂ ತೀರ್ಪಿನ ಹೊರತಾಗಿಯೂ ಅಕ್ರಮ ಕಲ್ಲುಗಣಿ ಸ್ಫೋಟ ನಡೆಯುತ್ತಿದೆ. ಸ್ಥಳೀಯ ಜನ ಆರೋಗ್ಯ ತೊಂದರೆ ಸೇರಿದಂತೆ ನಾನಾ ಸಮಸ್ಯೆಗಳನ್ನು ಅನುಭವಿಸುವಂತಾಗಿದೆ. ಜತೆಗೆ ಹಲವು ಮನೆಗಳಿಗೆ ಹಾನಿಯುಂಟಾಗಿದ್ದು, ಅಪಾಯಕಾರಿ ಸ್ಫೋಟಗಳಿಂದ ಅಣೆಕಟ್ಟೆಗೆ ಅಪಾಯ ಉಂಟಾಗುವ ಭೀತಿ ಎದುರಾಗಿದೆ. ಆ ಹಿನ್ನೆಲೆಯಲ್ಲಿ ಕೂಡಲೇ ಆ ಭಾಗದಲ್ಲಿ ನಡೆದಿರುವ ಅಕ್ರಮ ಕಲ್ಲುಗಣಿಗಾರಿಕೆ ಚಟುವಟಿಕೆಗಳನ್ನು ತಡೆ ಹಿಡಿಯಬೇಕಿದೆ,” ಎಂದು ಅವರು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ಭೇಟಿ ಬಳಿಕ ಪ್ರತಿಕ್ರಿಯಿಸಿದ ಸುಮಲತಾ ಅಂಬರೀಷ್‌, ನೂತನ ರಾಜ್ಯಪಾಲರಿಗೆ ಶುಭಾಷಯ ತಿಳಿಸುವ ಜತೆಗೆ ಮಂಡ್ಯದಲ್ಲಿನ ಅಕ್ರಮ ಕಲ್ಲುಗಣಿಗಾರಿಕೆ ಬಗ್ಗೆಯೂ ಮನವಿ ಪತ್ರ ಸಲ್ಲಿಸಿದ್ದೇ. ರಾಜ್ಯಪಾಲರು ಕೆಲವು ಸಲಹೆ ನೀಡಿದ್ದು, ಸರಕಾರಕ್ಕೂ ಮಾಹಿತಿ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ನಟ ದರ್ಶನ್‌- ನಿರ್ಮಾಪಕ ಉಮಾಪತಿ ನಡುವೆ ಜಟಾಪಟಿ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಪ್ರಕರಣದ ಬಗ್ಗೆ ನಾನು ಮಾತನಾಡಲು ಬಯಸುವುದಿಲ್ಲ. ಅನಗತ್ಯ ಹೇಳಿಕೆ ನೀಡುವುದು ಸರಿಯಲ್ಲ. ಹೊಟೇಲ್‌ನಲ್ಲಿ ನಡೆದ ಹಲ್ಲೆಪ್ರ ಕರಣದ ಬಗ್ಗೆ ತನಿಖೆ ನಡೆಯುತ್ತಿದೆ. ಸತ್ಯಾಂಶ ಹೊರಗೆ ಬರಲಿ ಎಂದು ತಿಳಿಸಿದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *