ಅಶ್ಲೀಲ ಚಿತ್ರ :ಪೂನಂ,ಶೆರ್ಲಿನ್ ಭಾಗಿ, ಕುಂದ್ರಾ ಜು.23ರ ವರೆಗೆ ಪೊಲೀಸರ ವಶಕ್ಕೆ
ಮುಂಬೈ : ಆಶ್ಲೀಲ ಚಿತ್ರ ತಯಾರಿಕೆ ಆರೋಪದಲ್ಲಿ ಬಂಧಿತನಾಗಿ ವಶ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಅವರನ್ನು ಜು.23 ರ ತನಕ ನ್ಯಾಯಾಲಯ ಪೋಲೀಸರ ವಶಕ್ಕೆ ಒಪ್ಪಿಸಿದೆ.
ಈ ನಡುವೆ ಅಶ್ಲೀಲ ಚಿತ್ರಗಲ್ಲಿ ಮಾದಕ ಬೆಡಗಿಯರಾದ ಪೂನಂ ಪಾಂಡೆ, ಮತ್ತು ಶೆರ್ಲಿನ್ ಚೋಪ್ರಾ ನಟಿಸಿದ್ದಾರೆ ಎನ್ನುವ ಮಾಹಿತಿ ಬಹಿರಂಗಗೊಂಡಿದೆ.
ಆದರೆ ಈ ಪ್ರಕರಣಕ್ಕೆ ಸಂಬಂಧಿಸಿದ ರಾಜ್ ಕುಂದ್ರಾ ಒಬ್ಬರೇ ಆರೋಪಿಯಲ್ಲ. ಇದಕ್ಕೂ ಮುನ್ನ ಟಿವಿ ಸೀರಿಯಲ್ ತಯಾರಕಿ ಏಕ್ತಾ ಕಪೂರ್ ಮಾರ್ಚ್‌ನಲ್ಲಿ ದೂರು ದಾಖಲಿಸಿದ್ದರು.
ನಟಿಯರಾದ ಪೂನಂ ಪಾಂಡೆ ಮತ್ತು ಶೆರ್ಲಿನ್ ಚೋಪ್ರಾ ಕೂಡ ಭಾಗಿಯಾಗಿರುವುದು ಪೊಲೀಸರ ವಿಚಾರಣೆ ತಿಳಿದು ಬಂದಿದೆ.
ಹಿನ್ನೆಲೆಯಲ್ಲಿ ಇಬ್ಬರು ನಟಿಯರನ್ನು ಮುಂಬೈ ಅಪರಾಧ ವಿಭಾಗದ ಪೊಲೀಸರು ಠಾಣೆಗೆ ಕರೆಸಿಕೊಂಡು ವಿಚಾರಣೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ
ಇವರಿಬ್ಬರು ಈ ಹಿಂದೆ ಸಾಫ್ಟ್ ಪೋರ್ನ್ ಪ್ರಕರಣದಲ್ಲಿ ರಾಜ್ ಕುಂದ್ರಾ ಜೊತೆ ಸಂಬಂಧ ಹೊಂದಿದ್ದರು ಮತ್ತು ರಾಜ್ ಕುಂದ್ರಾ ತಮ್ಮನ್ನು ಸಾಫ್ಟ್ ಪೋರ್ನ್ ದಂಧೆಗೆ ಕರೆತಂದಿದ್ದಾರೆ ಎಂದು ಅವರು ತಮ್ಮ ಹೇಳಿಕೆಯಲ್ಲಿ ತಪ್ಪೊಪ್ಪಿಕೊಂಡಿದ್ದರು ಎನ್ನಲಾಗಿದೆ.
ಶೆರ್ಲಿನ್ ಚೋಪ್ರಾಗೆ ಇಂಥ ಒಂದು ಫಿಲಂಗೆ ಸುಮಾರು 30 ಲಕ್ಷ ರೂ. ನೀಡಲಾಗುತ್ತಿತ್ತು ಎನ್ನಲಾಗಿದೆ.ರಾಜ್ ಕುಂದ್ರಾ ನಿರ್ಮಾಣದ 15ರಿಂದ 20 ಸಾಫ್ಟ್ ಪೋರ್ನ್ ಚಿತ್ರಗಳಲ್ಲಲ್ಲಿ ನಟಿಸಿದ್ದರು ಎನ್ನುವ ಸಂಗತಿ ಬೆಳಕಿಗೆ ಬಂದಿದೆ.
ಪೂನಂ ಪಾಂಡೆ ,ರಾಜ್ ಕುಂದ್ರಾ ಅವರ ಸಂಸ್ಥೆ ಮೀಡಿಯಾದೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಅಂಶವೂ ಬೆಳಕಿಗೆ ಬಂದಿದೆ. ಈ ಸಂಸ್ಥೆ ಹಲವಾರು ರೀತಿಯ ಮೊಬೈಲ್ ಆಪ್‌ಗಳಲ್ಲಿ ಪೋರ್ನ್ ಮತ್ತು ಸಾಫ್ಟ್ ಪೋರ್ನ್ ಅಪ್‌ಲೋಡ್ ಮಾಡುತ್ತಿತ್ತು- ಪೂನಂ ಪಾಂಡೆ ರಾಜ್ ಸಂಸ್ಥೆಯ ಪ್ರಮುಖ ಉದ್ಯೋಗಿಗಳಲ್ಲಿ ಒಬ್ಬರು ಎಂದು ಪೊಲೀಸ್ ವಿಚಾರಣೆಯಲ್ಲಿ ತಿಳಿದು ಬಂದಿದೆ.
ಒಪ್ಪಂದವನ್ನು ಮುಕ್ತಾಯಗೊಳಿಸಿದ ನಂತರವೂ ಪುನಮ್ ಅವರ ವಿಡಿಯೋಗಳನ್ನು ಕಾನೂನುಬಾಹಿರವಾಗಿ ಬಳಸುತ್ತಿದ್ದಾರೆ ಎಂದು ಪೂನಮ್ 2020ರಲ್ಲಿ ಸಂಸ್ಥೆ ಮತ್ತು ರಾಜ್ ವಿರುದ್ಧ ದೂರು ದಾಖಲಿಸಿದ್ದರು, ರಾಜ್ ಕುಂದ್ರಾ ಮತ್ತು ಅವರ ಸಹಚರರ ವಿರುದ್ಧದ ದೂರು ದಾಖಲು ಮಾಡಿದ್ದರು.
ಶಿಲ್ಪಾಶೆಟ್ಟಿಗೆ ಸಮನ್ಸ್
ಈ ನಡುವೆ ನಟಿ ಶಿಲ್ಪಾ ಶೆಟ್ಟಿ ಅವರಿಗೆ ಪೊಲೀಸರು ಸಮನ್ಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದರು.
ಅಶ್ಲೀಲ ಚಿತ್ರಗಳ ತಯಾರಿಕೆಯಲ್ಲಿ ಪತಿಯ ಜೊತೆ ಶಿಲ್ಪಾ ಶೆಟ್ಟಿ ಅವರ ಪಾತ್ರದ ಕುರಿತು ವಿಚಾರಣೆ ನಡೆಸುವ ಸಾಧ್ಯತೆಗಳಿವೆ.