ವಿಶ್ವದ ಅತ್ಯಂತ ಪ್ರಕಾಶಮಾನವಾದ ಟಾರ್ಚ್ ನಿರ್ಮಿಸಿದ ಯೂಟ್ಯೂಬರ್; ಗಿನ್ನೆಸ್ ವಲ್ಡ್ ರೆಕಾರ್ಡ್​​ಗೆ ಸೇರ್ಪಡೆ!

ಕೆನಡಾದ ಜನಪ್ರಿಯ ಯೂಟ್ಯೂಬರ್​ ಹ್ಯಾಕ್ಸ್​ಮಿತ್​​ ವಿಶ್ವದ ಅತ್ಯಂತ ಪ್ರಕಾಶಮಾನವಾದ ಫ್ಲಾಷ್​ಲೈಟ್​​ ಟಾರ್ಚ್​ ನಿರ್ಮಿಸಿದ್ದಾರೆ. ಇದು ಗಿನ್ನೆಸ್​​ ವಲ್ಡ್​ ರೆಕಾರ್ಡ್​ನಲ್ಲಿ ಸೇರಿಕೊಂಡಿದೆ ಮಾತ್ರವಲ್ಲದೆ, ಎರಡನೇ ವಿಶ್ವ ದಾಖಲೆಯನ್ನ ಮುರಿದಿದೆ.

ಯೂಟ್ಯೂಬರ್​ ಹ್ಯಾಕ್​ಮಿತ್​ ಅವರ ನಿಜವಾದ ಹೆಸರು ಜೇಮ್ಸ್​ ಹಾಬ್ಸನ್​. ಈ ಮೊದಲು ಪ್ರೊಟೊ-ಲೈಟ್​​ಸೇಬರ್​ಗಾಗಿ ದಾಖಲೆ ಬರೆದಿದ್ದರು. 300 ಎಲ್ಇಡಿಗಳನ್ನು ಹೊಂದಿಸಿ ಫ್ಲಾಷ್​ಲೈಟ್​​ ಒಳಗೊಂಡಿರುವ ‘ನೈಟ್​​ಬ್ರೈಟ್​​ 300’ ಅನ್ನು ಅಭಿವೃದ್ಧಿಪಡಿಸಿದ್ದರು.

’ನೈಟ್​​ಬ್ರೈಟ್​​ 300’ ಫ್ಲಾಷ್​ಲೈಟ್​ ಟಾರ್ಚ್​ನ ಪ್ರಕಾಶವನ್ನು 501,031 ಲ್ಯುಮೆನ್​ನಲ್ಲಿ ಅಳೆಯುವ ಮೂಲಕ ಹಾಬ್ಸನ್​ ಮತ್ತು ಅವರ ತಂಡ ಗಿನ್ನೆಸ್​ ದಾಖಲೆ ಬರೆದರು.

ಮಾರುಕಟ್ಟೆಯಲ್ಲಿ ಅತ್ಯಂತ ಶಕ್ತಿಶಾಲಿ ಬ್ಯಾಟರಿ, ಇಮ್ಯಾಲೆಂಟ್​ ಎಂಎಸ್​ 18. 18 ಎಲ್​ಇಡಿ ಮತ್ತು 100,000 ಲ್ಯುಮೆನ್​ನಲ್ಲಿ ಹೊಳೆಯುವ ಪವರ್​ಫುಲ್​ ಫ್ಲಾಷ್​ಲೈಟ್​ ಮಾರಾಟ ಮಾಡುತ್ತಾರೆ. ಈ ಹಿಂದೆ ಡಿಐವೈ ವಾಟರ್​​-ಕೀಲ್ಡ್​ ಎಲ್​ಇಡಿ ಮೆಗಾ ಫ್ಲಾಷ್​ಲೈಟ್​ ಕುರಿತು ಸುದ್ದಿಯಾಗಿತ್ತು. ಇದನ್ನು 72,000 ಲ್ಯುಮೆನ್​ ರೇಟ್​ ಮಾಡಲಾಗಿದೆ. ಇದನ್ನು ಸ್ಯಾಮ್​ ಶೆಪರ್ಡ್​ ಎಂಬ ಯೂಟ್ಯೂರ್​ ನಿರ್ಮಿಸಿದ್ದರು.

 

ಸಾಮಾನ್ಯವಾಗಿ ಫುಟ್​ಬಾಲ್​ ಕ್ರೀಡಾಂಗಣದಲ್ಲಿ ಅಳವಡಿಸುವ ಫ್ಲಡ್​ಲೈಟ್ಸ್​  100 ಮತ್ತು 250,000 ಲ್ಯುಮೆನ್​​ ವ್ಯಾಪ್ತಿಯಲ್ಲಿರುತ್ತದೆ. ಅಂದರೆ ಇದನ್ನು ನೈಟ್​ಬ್ರೈಟ್​ 300 ಕಿರಣದಿಂದ ಇರಿಸಲಾಗುತ್ತದೆ. ಆದರೆ ಇದು ಕ್ರೀಡಾಸ್ಪರ್ಧಿಗಳ ಕಣ್ಣನ್ನು ಕುರುಡಾಗಿಸಬಹುದಾಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *