32 ನೇ ಒಲಿಂಪಿಕ್ ಕ್ರೀಡಾಹಬ್ಬಕ್ಕೆ ವರ್ಣರಂಜಿತ ಚಾಲನೆ

ಮಾರಕ ಕೊರೊನಾ ಸೋಂಕಿನ ನಡುವೆಯೂ ಜಪಾನ್ ರಾಜಧಾನಿ ಟೋಕಿಯೋದಲ್ಲಿ ಪ್ರತಿಷ್ಠಿತ 32‌ ಒಲಿಂಪಿಕ್‌ ಕ್ರೀಡಾಕೂಟಕ್ಕೆ ಅದ್ದೂರಿ ಚಾಲನೆ ದೊರೆತಿದೆ.
ಕೊರೊನಾ ಸೋಂಕಿನಿಂದಾಗಿ ಒಂದು ವರ್ಷ ಮುಂದೂಡಲ್ಪಟ್ಟಿದ್ದ ಕ್ರೀಡಾಕೂಟ ಆಯೋಜನೆಗೆ 2013ರಲ್ಲಿ ಟೋಕಿಯೊ ಬಿಡ್ ಗೆದ್ದ ಸಮಯದ ಹಿಂದಿನ ವೀಡಿಯೊದೊಂದಿಗೆ ಸಮಾರಂಭಕ್ಕೆ ವಿದ್ಯುಕ್ತ ಚಾಲನೆ ನೀಡಲಾಯಿತು.

ಬಳಿಕ 20 ಸೆಕೆಂಡುಗಳ ಇಂಡಿಗೊ ಮತ್ತು ಬಿಳಿ ಪಟಾಕಿಗಳೊಂದಿಗೆ ಪ್ರದರ್ಶಿಸಲಾದ ಬಣ್ಣಗಳು ಜಪಾನಿನ ಸಂಸ್ಕೃತಿಯನ್ನು ಅನಾವರಣಗೊಳಿಸಿದವು.

ಜಪಾನ್ ಚಕ್ರವರ್ತಿ ನರುಹಿಟೊ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಮುಖ್ಯಸ್ಥ ಥಾಮಸ್ ಬಾಕ್ ಅವರೊಂದಿಗೆ ಸಾಗಿದರು. ಸ ಒಲಿಂಪಿಕ್ ಕ್ರೀಡಾಂಗಣದಲ್ಲಿ ಉದ್ಘಾಟನಾ ಸಮಾರಂಭ ನಡೆಯಿತು. ವಾರಗಳ ಹಿಂದೆ ನಿರ್ಧರಿಸಿದಂತೆ, ಅಮೆರಿಕದ ಪ್ರಥಮ ಮಹಿಳೆ ಜಿಲ್ ಬಿಡೆನ್ ಸೇರಿದಂತೆ ಸುಮಾರು 1,000 ಗಣ್ಯರು ಉದ್ಘಾಟನಾ ಸಮಾರಂಭಕ್ಕೆ ಸಾಕ್ಷಿಯಾದರು. ಕೊರೊನಾ ಸೋಂಕಿನಿಂದಾಗಿ ಈ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಅವಕಾಶ ನಿರಾಕರಿಸಲಾಗಿತ್ರು.

ಪಥ ಸಂಚಲನದಲ್ಲಿ ಭಾರತದ ಧ್ವಜಧಾರಿಗಳಾಗಿ ಬಾಕ್ಸರ್ ಮೇರಿ ಕೋಮ್ ಹಾಗೂ ಹಾಕಿ ಆಟಗಾರ ಮನ್ ಪ್ರೀತ್ ಸಿಂಗ್ ಭಾಗವಹಿಸಿದ್ದರು.

ಉಳಿದಂತೆ ಗ್ರೀಕ್​, ಅರ್ಜೆಂಟಿನಾ, ಜಪಾನ್​, ಚೀನಾ ಸೇರಿದಂತೆ ಅನೇಕ ದೇಶಗಳ ಕ್ರೀಡಾಳುಗಳು ತಮ್ಮ ತಮ್ಮ ದೇಶದ ಧ್ವಜ ಹಿಡಿದುಕೊಂಡು ಸಾಗಿದರು. ಕೊರೊನಾ ವೈರಸ್​ ಕಾರಣ, ಈ ಹಿಂದಿನಂತೆ ಈ ಸಲ ದೊಡ್ಡ ಮಟ್ಟದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಿರಲಿಲ್ಲ.

ಭಾರತದಿಂದಲೂ 126 ಮಂದಿ ಕ್ರೀಡಾಪಟುಗಳು ಜಪಾನ್ ಗೆ ತೆರಳಿದ್ದು ಹಲವು ವಿಭಾಗಗಳಲ್ಲಿ ಪದಕ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *