ಹಳಿ ತಪ್ಪಿದ ಮಂಗಳೂರು-ಮುಂಬೈ ಎಕ್ಸ್ ಪ್ರೆಸ್ ರೈಲು 300 ಪ್ರಯಾಣಿಕರು ಸುರಕ್ಷಿತ
ಭಾರೀ ಮಳೆಯಿಂದಾಗಿ ಭೂಕುಸತ ಸಂಭವಿಸಿದ ಹಿನ್ನೆಲೆಯಲ್ಲಿ ಮುಂಬೈಗೆ ತೆರಳುವ ವಿಶೇಷ ರೈಲು(ಮಂಗಳೂರು-ಮುಂಬೈ ಎಕ್ಸ್ಪ್ರೆಸ್) ದುಧ್ಸಾಗರ್-ಸೋನೌಲಿಮ್ ನಿಲ್ದಾಣಗಳ ನಡುವೆ ಹಳಿ ತಪ್ಪಿದೆ.
ಯಾವುದೇ ಪ್ರಾಣ ಹಾನಿ ಸಂಭವಿಸದೆ ರೈಲಿನಲ್ಲಿದ್ದ ಎಲ್ಲ 345 ಪ್ರಯಾಣಿಕರು ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ. ಎಲ್ಲರನ್ನೂ ಒಂದೇ ಮಡ್ಗಾಂವ್ ಗೆ ವಾಪಸ್ ಕಳುಹಿಸಲಾಗಿದೆ.
ಕರಾವಳಿ ಭಾಗದಲ್ಲಿ ನಿರಂತರ ಮಳೆ ಮತ್ತು ಗೋವಾದಲ್ಲಿ ನದಿಗಳು ಉಕ್ಕಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಕೊಂಕಣ ರೈಲ್ವೆ ಅನೇಕ ರೈಲುಗಳನ್ನು ಮಡ್ಗೊವನ್-ಲೋಂಡಾ-ಮಿರಾಜ್ ಮೂಲಕ ಸಂಚರಿಸುತ್ತಿವೆ. ಮಂಗಳೂರು-ಮುಂಬೈ ರೈಲು ಕಾರ್ವಾರ್, ಮಡ್ಗಾಂವ್, ಲೋಂಡಾ ಮತ್ತು ಮಿರಾಜ್ ಮೂಲಕ ಮುಂಬೈಗೆ ಹೋಗುತ್ತಿತ್ತು.
ಸೌತ್ ವೆಸ್ಟರ್ನ್ ರೈಲ್ವೆಯ ದುಧ್ಸಾಗರ್ ಮತ್ತು ಸೋನಾಲಿಮ್ ನಡುವೆ ಇಂದು ಬೆಳಗ್ಗೆ 6 ಗಂಟೆ ಸುಮಾರಿಗೆ ಎರಡು ಭೂಕುಸಿತ ಸಂಭವಿಸಿದೆ.
ಘಟನೆ ನಡೆದ ತಕ್ಷಣ, ಕ್ಯಾಸಲ್ ರಾಕ್ ಮತ್ತು ವಾಸ್ಕೋ ಡಾ ಗಾಮಾದ ಅಪಘಾತ ಪರಿಹಾರ ರೈಲು(ಎಆರ್ಟಿ) ಸ್ಥಳಕ್ಕೆ ಧಾವಿಸಿ ಪರಿಹಾರ ಕಾರ್ಯಗಳನ್ನು ಕೈಗೊಂಡಿದೆ.
ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅರವಿಂದ್ ಮಲ್ಖೆಡೆ ಸೇರಿದಂತೆ ಹುಬ್ಬಳ್ಳಿ ವಿಭಾಗದ ಹಿರಿಯ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿತು.