ಸಿಎಂ ಗಾದಿ ಕಳೆದುಕೊಳ್ಳುವ ಆತಂಕದ ನಡುವೆಯೂ ಪ್ರವಾಹ ಪೀಡಿತ ಬೆಳಗಾವಿಯತ್ತ ಪ್ರವಾಸ! ಬಿಎಸ್‌ವೈ ಕೊಟ್ಟ ಸಂದೇಶ ಏನು?

ಹೈಲೈಟ್ಸ್‌:

  • ತೀವ್ರಗೊಂಡಿರುವ ಬಿಎಸ್ ಯಡಿಯೂರಪ್ಪ ಬದಲಾವಣೆ ಚರ್ಚೆ
  • ಪ್ರವಾಹ ಪೀಡಿತ ಬೆಳಗಾವಿಗೆ ಪ್ರವಾಸ ಕೈಗೊಂಡ ಯಡಿಯೂರಪ್ಪ
  • ಬದಲಾವಣೆ ವದಂತಿಗಳಿಗೆ ಬೇರೆಯದೇ ರೀತಿ ಸಂದೇಶ ನೀಡಿದರೇ ಬಿಎಸ್‌ವೈ?

ಬೆಂಗಳೂರು: ಮುಖ್ಯಮಂತ್ರಿಯಾಗಿ ಸಿಎಂ ಬಿಎಸ್‌ ಯಡಿಯೂರಪ್ಪ ಮುಂದುವರಿಯಬೇಕೋ ಬೇಡವೋ ಅಥವಾ ಯಾವಾಗ ರಾಜೀನಾಮೆ ನೀಡಬೆಕು ಎಂದು ಹೈಕಮಾಂಡ್ ಸಂದೇಶ ಭಾನುವಾರ ಬರಲಿದೆ. ಜುಲೈ 25 ರಹಸ್ಯ ರಾಜ್ಯ ಬಿಜೆಪಿಯಲ್ಲಿ ತಳಮಳ ಸೃಷ್ಟಿಸಿದರೆ ಬಿಎಸ್‌ ಯಡಿಯೂರಪ್ಪ ಅವರು

ಪ್ರವಾಹ ಪೀಡಿತ ಬೆಳಗಾವಿಗೆ ದೌಡಾಯಿಸಿದ್ದಾರೆ.

ಸಮ್ಮಿಶ್ರ ಸರ್ಕಾರ ಪತನಗೊಂಡು 2019 ರಲ್ಲಿ ಬಿಎಸ್‌ವೈ ರಾಜ್ಯದ ಮುಖ್ಯಮಂತ್ರಿತಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲೂ ರಾಜ್ಯದ ಹಲವೆಡೆ ಪ್ರವಾಹ ಎದುರಾಗಿತ್ತು. ಈ ಸಂದರ್ಭದಲ್ಲಿ ಏಕಾಂಗಿಯಾಗಿ ಯಡಿಯೂರಪ್ಪ ಪ್ರವಾಹ ಕೈಗೊಂಡಿದ್ದರು. ಇದೀಗ ಸಿಎಂ ಸ್ಥಾನ ಕಳೆದುಕೊಳ್ಳುತ್ತಾರೆ ಎಂಬ ಸಂದರ್ಭದಲ್ಲಿ ಪ್ರವಾಹ ಸ್ಥಿತಿ ಇದ್ದು ಬಿಎಸ್‌ವೈ ಪ್ರವಾಸ ರೂಪಕದಂತಿದೆ.

ಭಾನುವಾರ ಬೆಳಗ್ಗೆ 9 ಗಂಟೆಗೆ ವಿಶೇಷ ವಿಮಾನದ ಮೂಲಕ ಯಡಿಯೂರಪ್ಪ ಬೆಳಗಾವಿಗೆ ತೆರಳಿದರು. ಬೆಳಗಾವಿಯ ಹಲವು ಕಡೆಗಳಲ್ಲಿ ಪ್ರವಾಹ ಸ್ಥಿತಿ ಇದ್ದು ಬಿಎಸ್‌ವೈ ಪರಿಶೀಲನೆ ನಡೆಸಲಿದ್ದಾರೆ. ಮಳೆ ಹಾಗೂ ಪ್ರವಾಹ ಸ್ಥಿತಿ ನಿರ್ಮಾನವಾಗಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆಗೆ ಸಿಎಂ ಈಗಾಗಲೇ ವಿಡಿಯೋ ಸಂವಾದ ನಡೆಸಿದ್ದಾರೆ. ಅಲ್ಲದೆ ಜಿಲ್ಲಾ ಉಸ್ತುವಾರಿ ಸಚಿವರುಗಳಿಗೆ ಜಿಲ್ಲೆಯಲ್ಲೇ ಇದ್ದು ಪರಿಸ್ಥಿತಿಗೆ ಸ್ಪಂದಿಸುವಂತೆ ಸೂಚನೆ ನೀಡಿದ್ದಾರೆ.

ಪ್ರವಾಸದ ಮೂಲಕ ಸಂದೇಶ?
ಭಾನುವಾರ ದೆಹಲಿಯಿಂದ ಬರುವ ಸೂಚನೆಯಂತೆ ನಡೆದುಕೊಳ್ಳುತ್ತೇನೆ ಎಂದು ಯಡಿಯೂರಪ್ಪ ಹೇಳಿದರೂ ರಾಜೀನಾಮೆಯ ಕುರಿತಾಗಿ ಯಾವುದೇ ಅಧಿಕೃತ ಹೇಳಿಕೆ ಕೊಟ್ಟಿಲ್ಲ. ಆದರೆ ಜುಲೈ 26 ರಂದು ಸರ್ಕಾರಕ್ಕೆ ಎರಡು ವರ್ಷ ತುಂಬಲಿರುವ ಹಿನ್ನೆಲೆಯಲ್ಲಿ ಸಾಧನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಈ ಸಮಾವೇಶದ ಬಳಿಕ ಯಡಿಯೂರಪ್ಪ ರಾಜೀನಾಮೆ ಕೊಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ ದೆಹಲಿಯಿಂದ ಏನು ಸಂದೇಶ ಬರಲಿದೆ ಎಂಬುವುದು ಮಹತ್ವ ಪಡೆದುಕೊಂಡಿದೆ.

ಈ ನಡುವೆ ಬಿಎಸ್‌ವೈ ಅವರನ್ನು ಸಿಎಂ ಸ್ಥಾನದಿಂದ ಕೆಳಗೆ ಇಳಿಸಬಾರದು ಎಂದು ಮಠಾಧೀಶರು ಒತ್ತಡ ಹೇರುತ್ತಿದ್ದಾರೆ. ಭಾನುವಾರ ಬೆಂಗಳೂರಿನಲ್ಲಿ ಸಮಾವೇಶವನ್ನು ಹಮ್ಮಿಕೊಂಡಿದ್ದಾರೆ. ಮತ್ತೊಂದು ಕಡೆ ರಾಜೀನಾಮೆ ಗೊಂದಲದ ನಡುವೆಯೂ ಬಿಎಸ್‌ವೈ ತಲೆಕೆಡಿಸಿಕೊಳ್ಳದೆ ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳುವ ಮೂಲಕ ವಿರೋಧಿ ಪಾಳಯಕ್ಕೂ ಒಂದು ಸಂದೇಶ ನೀಡಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಿವೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *