BS Yediyurappa Resigns: ಯಡಿಯೂರಪ್ಪನವರ ಕಣ್ಣೀರಿನ ಶಾಪ ಮುಂದೆ ರಾಜ್ಯ ಬಿಜೆಪಿಗೆ ಸಂಕಷ್ಟ ತರಲಿದೆಯಾ?

ಬೆಂಗಳೂರು(ಜು.27): ಬೂಕನಕೆರೆ ಸಿದ್ಧಲಿಂಗಪ್ಪ ಯಡಿಯೂರಪ್ಪ ರಾಜ್ಯದ ದೊರೆ, ರಾಜ್ಯದ ಬಿಜೆಪಿ ಪಾಲಿನ ಮಹಾನ್ ಶಕ್ತಿ, ಅಭಿಮಾನಿಗಳ  ಪಾಲಿಗೆ ರಾಜಾಹುಲಿ , ಸೈಕಲ್ ಹತ್ತಿ ಸಿಎಂ ಕುರ್ಚಿ ಏರಿದ ಮಹಾನಾಯಕ. ಯಡಿಯೂರಪ್ಪರವರ  ಕಣ್ಣೀರು ಬಿಜೆಪಿ ಪಕ್ಷಕ್ಕೆ ಶಾಪವಾಗಬಹುದು. ವಿದಾಯದ ಭಾಷಣದಲ್ಲಿ ಅವರ ಕಣ್ಣಂಚಲಿ ಬಂದಿತ್ತು ಶ್ರಮದ ಕಣ್ಣೀರು.  ಮಹಾನಾಯಕನ ನಿರ್ಗಮನ ಹೀಗೆ ಅಂತ್ಯವಾಗಬಾರದಿತ್ತು. 

ಹೌದು, ಸೋಮವಾರ(ನಿನ್ನೆ) ಯಡಿಯೂರಪ್ಪ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈಗ ಯಡಿಯೂರಪ್ಪ ಹಂಗಾಮಿ ಸಿಎಂ. ಆದ್ರೆ ಕರ್ನಾಟಕದಲ್ಲಿ ಯಡಿಯೂರಪ್ಪರವರ ಹೆಸ್ರು ಕೇಳಿದ್ರೆ ರಾಜ್ಯ ಬಿಜೆಪಿ ಇತಿಹಾಸ ಕಣ್ಮುಂದೆ ಬರುತ್ತೆ.  ನಿನ್ನೆ ಅವರು ಭಾವುಕರಾಗಿದ್ದಾಗ, ರಾಜ್ಯದ ಶಕ್ತಿಸೌಧ ವಿಧಾನಸೌಧದಲ್ಲಿ ರಾಜೀನಾಮೆ ಘೋಷಣೆ ಮಾಡಿದಾಗ, ರಾಜ್ಯದ ಅದೆಷ್ಟೋ ಅಭಿಮಾನಿಗಳಿಗೆ ಬಾಚಿ ತಬ್ಬಿಬಿಡುವಷ್ಟು ಸಂಕಟವಾಗಿತ್ತು. ರಾಜೀನಾಮೆ ನೀಡುವೆ ಎಂದಾಗ, ಅವರ ಮುಖದಲ್ಲಿ ದುಃಖದೊಳಗಿನ ನಗು ಹೊರಚಿಮ್ಮಿತ್ತು.

ರಾಜ್ಯದಲ್ಲಿ ಕಮಲ ಅರಳಲು ಕಾರಣ ಯಡಿಯೂರಪ್ಪ. ಇಂದು ಅವರ ಕಣ್ಣೀರಿಗೆ ಕಾರಣವಾಗಿದ್ದು ಅದೇ ಕಮಲ…? ಎರಡೇ ಎರಡು ಸ್ಥಾನದಿಂದ ಕರ್ನಾಟಕದಲ್ಲಿ  ಸರ್ಕಾರ ರಚನೆ ಮಾಡಿ ಬಿಜೆಪಿ ಶಾಸಕರು ನಡೆಸುವಷ್ಟು ಕಮಲವನ್ನ ಜೋಪಾನ ಮಾಡಿದ್ದು ಇದೇ ಬೂಕನಕೆರೆ ದೊರೆ ಯಡಿಯೂರಪ್ಪ. ಸುಮಾರು ನಲವತ್ತೈದು ವರ್ಷಗಳ ಕಾಲ ರಾಜಕೀಯ ನಡೆಸಿದವರು ಪಕ್ಷದ ಸಂಘಟನೆಗಾಗಿ ಅದೆಷ್ಟು ಹೋರಾಟಗಳನ್ನು ಯಡಿಯೂರಪ್ಪ ಮಾಡಿದ್ದಾರೆ.

ಸೈಕಲ್ ಹತ್ತಿ ರಾಜ್ಯ ಸುತ್ತಿ ವಿಧಾನಸೌಧದ ಮೂರನೇ ಮಹಡಿಯಲ್ಲಿ ಕುಳಿತುಕೊಳ್ಳಲು ಸೈಕಲ್ ಹೊಡೆದಿದ್ದು ಅಷ್ಟಿಷ್ಟಲ್ಲ. ಈಗ ಅದೆಲ್ಲವೂ ಇತಿಹಾಸ.. ಕರ್ನಾಟಕದಲ್ಲಿ ಇಂದಿನ ರಾಜಕೀಯದಲ್ಲಿ ಜನನಾಯಕರು ಅಂತ ಇರೋದು  ದೇವೇಗೌಡ್ರು, ಸಿದ್ದರಾಮಯ್ಯ, ಹಾಗೇ ಯಡಿಯೂರಪ್ಪ.  ಈ ಮೂರು ಮಂದಿಯೂ ಹೋರಾಟದಿಂದಲೇ  ಬಂದವ್ರು. ಕೆಲವರು ಸೈಡ್ ಟ್ರ್ಯಾಕ್​​ನಿಂದ ಅಧಿಕಾರ ಹಿಡಿದಿದ್ದಾರೆ. ಆದ್ರೆ ಬಿಎಸ್ ವೈ ತನ್ನ ದಿಟ್ಟ ಹೋರಾಟದಿಂದಲೇ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಕೇಸರಿ ಹಾರಿಸಿದವರು.

ಇಂತಹ ಯಡಿಯೂರಪ್ಪ ಸಾಧನಾ ಸಮಾವೇಶದಲ್ಲಿ ಮಾತನಾಡುತ್ತಾ, ಸಿಎಂ ಸ್ಥಾನಕ್ಕೆ ರಾಜೀನಾಮೆ ಘೋಷಣೆ ಮಾಡಿದರು. ಈ ವೇಳೆ, ನಾನು ದುಃಖದಿಂದ ರಾಜೀನಾಮೆ ಕೊಡ್ತಾಯಿಲ್ಲ ಎನ್ನುವ ಯಡಿಯೂರಪ್ಪನವರ ಮುಖದಲ್ಲಿ ನಲವತ್ತೈದು ವರ್ಷದ ಬೆವರು ಕಣ್ಣೀರಾಗಿ ಸುರಿದುಬಂದಿತು ಅಂತ ಹೇಳಿದ್ರೆ ತಪ್ಪಿಲ್ಲ ಅನ್ಸುತ್ತೆ.

ಪ್ರತಿ ಬಾರಿ ಸಿಎಂ ಸ್ಥಾನಕ್ಕೆ ಏರಿದಾಗ ಯಡಿಯೂರಪ್ಪ ಪಟ್ಟ ಕಷ್ಟ ಅಷ್ಟಿಷ್ಟಲ್ಲ.. ಅವರ ಹಾದಿಯಲ್ಲಿ ಹೂವಿನ ಸರಮಾಲೆಗಿಂತ ಕಲ್ಲು, ಮುಳ್ಳುಗಳ ಆರ್ಭಟವೇ ಹೆಚ್ಚಾಗಿತ್ತು.. ತನ್ನ ಜೊತೆಯಲ್ಲೇ ಇದ್ದು, ಅದೆಷ್ಟು ಬಾರಿ ಅವ್ರ ಬೆನ್ನಿಗೆ ಚೂರಿ ಹಾಕಿದ್ದಾರೋ ಆ ದೇವರೇ ಬಲ್ಲ.. ನಾಲ್ಕು ಬಾರಿ ಸಿಎಂ ಆದರೂ ಒಂದು ಬಾರಿಯೂ ಪೂರ್ಣಾವಧಿ ಅಧಿಕಾರ ನಡೆಸದ ದುರಂತ ನಾಯಕ ಯಡಿಯೂರಪ್ಪ.ಆ ನೋವಿನ ಉಂಡೆ ಯಡಿಯೂರಪ್ಪನವರ ಜೀವನದುದ್ದಕ್ಕೂ ಜೊತೆಯಲ್ಲೇ ಇರುತ್ತದೆ.. ಇನ್ನೂ ಎರಡು ವರ್ಷ ಸಿಎಂ ಆಗಿರ್ತೀನಿ ಎಂದು ಅಂದುಕೊಂಡಿದ್ದ ಆ ಜೀವಕ್ಕೆ ನಿನ್ನೆ ಬೇಸರದ ದಿನ. ಅದಕ್ಕೆ  ಬಿಜೆಪಿ ರಾಷ್ಟ್ರೀಯ ನಾಯಕರು ಕಾರಣ ಇರಬಹುದು.  ಅವರ ಕಣ್ಣೀರ ಜೊತೆಯಲ್ಲೇ ಕಮಲ ಕೂಡ ರಾಜ್ಯದಿಂದ ಕೊಚ್ಚಿ ಹೋಗುತ್ತೇನೋ ಎಂಬ ಮಾತು ಸಹ ಕೇಳಿ ಬರುತ್ತಿದೆ.

ಯಡಿಯೂರಪ್ಪ  ರಾಜ್ಯದ ಮಾಸ್ ಲೀಡರ್ ಜೊತೆಗೆ ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕ. ಇಂತಹ ನಾಯಕನ ಕಣ್ಣೀರು ಆ ಸಮುದಾಯದವರಿಗೆ ನೋವು ತಂದಿರಬಹುದು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *