ನಿಮಗೂ LPG ಸಬ್ಸಿಡಿ ಸಿಗುತ್ತಿಲ್ಲವೇ ? ಇಂದೇ ಈ ಕೆಲಸ ಮಾಡಿ, ತಕ್ಷಣ ನಿಮ್ಮ ಖಾತೆಗೆ ಹಣ ಬರುತ್ತದೆ
ನವದೆಹಲಿ : LPG Subsidy : ನಿಮ್ಮ ಎಲ್‌ಪಿಜಿ ಸಿಲಿಂಡರ್‌ಗಳಿಗೆ ಸರ್ಕಾರದಿಂದ ಸಬ್ಸಿಡಿ ಬರುತ್ತಿಲ್ಲವೇ? ಅಥವಾ ಈ ಬಗ್ಗೆ ನಿಮಗೆ ಮಾಹಿತಿ ಗೊತ್ತಿಲ್ಲವೇ? ನೀವು ಎಲ್‌ಪಿಜಿ ಸಿಲಿಂಡರ್‌ಗಳಿಗೆ ಸಬ್ಸಿಡಿ (LPG Subsidy) ಪಡೆಯುತ್ತೀದ್ದಿರೋ ಇಲ್ಲವೋ ಎಂಬುದನ್ನು ಪರಿಶೀಲಿಸಬೇಕಾಗುತ್ತದೆ. ಎಲ್‌ಪಿಜಿ ಸಿಲಿಂಡರ್‌ಗಳು ದಿನೇ ದಿನೇ ದುಬಾರಿಯಾಗುತ್ತಿವೆ. ಹೀಗಿರುವಾಗ, ಸಬ್ಸಿಡಿಯಿಂದಾಗಿ, ಸಾಮಾನ್ಯ ಜನರಿಗೆ ಸ್ವಲ್ಪ ಮಟ್ಟಿಗೆ ಪರಿಹಾರ ಸಿಗುತ್ತದೆ.
ಒಂದು ವೇಳೆ ನಿಮಗೆ ಸಬ್ಸಿಡಿ ಸಿಗದಿದ್ದರೆ, ನೀವು ಈ ವ್ಯಾಪ್ತಿಗೆ ಬಾರದಿರುವುದೇ ಕಾರಣವಾಗಿರಬಹುದು. ನಿಮ್ಮ ಖಾತೆಗೆ ಎಲ್‌ಪಿಜಿ ಸಿಲಿಂಡರ್‌ನ ಸಬ್ಸಿಡಿ (LPG Subsidy) ಹೋಗುತ್ತಿದೆಯೇ ಅಥವಾ ಇಲ್ಲವೇ ಎಂದು ನಿಮಗೆ ತಿಳಿದಿಲ್ಲದಿದ್ದರೆ, ಕಂಡುಹಿಡಿಯುವ ಮಾರ್ಗ ಕೂಡಾ ಸುಲಭ. ಇದಕ್ಕಾಗಿ ಎಲ್ಲಿಗೂ ಹೋಗುವ ಅಗತ್ಯವಿಲ್ಲ ಅಥವಾ ಯಾರನ್ನೂ ಕೇಳುವ ಅಗತ್ಯವಿಲ್ಲ. ಮನೆಯಲ್ಲಿಯೇ ಕುಳಿತು ಈ ಕೆಲಸವನ್ನು ಆನ್‌ಲೈನ್‌ನಲ್ಲಿ (Online) ಮಾಡಬಹುದು. ಈ ವಿಧಾನವು ತುಂಬಾ ಸುಲಭ.
1- ಮೊದಲಿಗೆ www.mylpg.in ವೆಬ್‌ಸೈಟ್‌ಗೆ ಭೇಟಿ ನೀಡಿ
2. ಇದರ ನಂತರ ಬಲಭಾಗದಲ್ಲಿ ಮೂರು ಕಂಪನಿಗಳ ಗ್ಯಾಸ್ ಸಿಲಿಂಡರ್‌ನ (Gas Cylinder) ಫೋಟೋವನ್ನು ಕಾಣಿಸುತ್ತದೆ
3- ನಿಮ್ಮ ಸೇವಾ ಪೂರೈಕೆದಾರರು ಯಾರು ಆ ಗ್ಯಾಸ್ ಸಿಲಿಂಡರ್ ನ ಫೋಟೋ ಮೇಲೆ ಕ್ಲಿಕ್ ಮಾಡಿ.
4. ಇದರ ನಂತರ ಹೊಸ ವಿಂಡೋ ತೆರೆಯುತ್ತದೆ ಇದರಲ್ಲಿ ನಿಮ್ಮ ಗ್ಯಾಸ್ ಸರ್ವೀಸ್ ಪ್ರೊವೈಡರ್ ನ ಮಾಹಿತಿ ಇರುತ್ತದೆ.
5- ಮೇಲಿನ ಬಲಭಾಗದಲ್ಲಿ ಸೈನ್ ಇನ್ ಮತ್ತು ಹೊಸ ಬಳಕೆದಾರರ ಆಯ್ಕೆ ಇರುತ್ತದೆ, ಅದನ್ನು ಆಯ್ಕೆ ಮಾಡಿ.
6. ನಿಮ್ಮ ಐಡಿ ಈಗಾಗಲೇ ರಚಿಸಿದ್ದರೆ ನೀವು ಸೈನ್ ಇನ್ ಮಾಡಬೇಕು.
7-ಐಡಿ ಇಲ್ಲದಿದ್ದರೆ ನ್ಯೂ ಯೂಸರ್ ಆಯ್ಕೆಯನ್ನು ಆರಿಸಿ .
8. ಇದರ ನಂತರ, ತೆರೆಯುವ ವಿಂಡೋದಲ್ಲಿ, ಬಲಭಾಗದಲ್ಲಿ ಸಿಲಿಂಡರ್ ಬುಕಿಂಗ್ (Cylinder booking) ಹಿಸ್ಟರಿ ಕಾಣಿಸುತ್ತದೆ ಅದನ್ನು ಆಯ್ಕೆ ಮಾಡಿ.
9- ನೀವು ಸಬ್ಸಿಡಿ ಪಡೆಯುತ್ತೀರೋ ಇಲ್ಲವೋ ಎನ್ನುವುದು ತಿಳಿಯುತ್ತದೆ.
10- ಸಬ್ಸಿಡಿ ಸಿಗುತ್ತಿಲ್ಲ ಎಂದಾದರೆ 18002333555 ಟೋಲ್ ಫ್ರೀ ಸಂಖ್ಯೆಗೆ ದೂರು ನೀಡಬಹುದು.
ಸಬ್ಸಿಡಿ ಸಿಗದಿರುವುದಕ್ಕೆ ಕಾರಣ ಏನು ?
ಸರ್ಕಾರವು ಅನೇಕ ಜನರಿಗೆ ಎಲ್‌ಪಿಜಿ ಸಿಲಿಂಡರ್‌ಗಳ (LPG Cylinder) ಮೇಲೆ ಸಬ್ಸಿಡಿ ನೀಡುವುದಿಲ್ಲ. ಇದಕ್ಕೆ ಮೊದಲ ಕಾರಣ ನಿಮ್ಮ ಆಧಾರ್ ಲಿಂಕ್ (Aadhaar) ಮಾಡದಿರಬಹುದು. ಎರಡನೆಯದ್ದು, 10 ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ವಾರ್ಷಿಕ ಆದಾಯ ಹೊಂದಿರುವ ಜನರು, ಸಬ್ಸಿಡಿಯ ವ್ಯಾಪ್ತಿಯಿಂದ ಹೊರಗಿರುತ್ತಾರೆ. ಅಂದರೆ ನಿಮ್ಮ ಆದಾಯವು 10 ಲಕ್ಷಕ್ಕಿಂತ ಹೆಚ್ಚಿದ್ದರೆ ನಿಮಗೆ ಸಬ್ಸಿಡಿ ಸಿಗುವುದಿಲ್ಲ. ಒಂದು ವೇಳೆ ನಿಮ್ಮ ಆದಾಯ 10 ಲಕ್ಷಕ್ಕಿಂತ ಕಡಿಮೆ ಇದ್ದು, ನಿಮ್ಮ ಸಂಗಾತಿಯೂ ಸಂಪಾದಿಸುತ್ತಿದ್ದು, ಇಬ್ಬರ ಆದಾಯವು 10 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನದಾಗಿದ್ದರೆ, ಆಗಲೂ ನಿಮಗೆ ಸಬ್ಸಿಡಿ ಲಭ್ಯವಿರುವುದಿಲ್ಲ.
ಎಷ್ಟು ಸಬ್ಸಿಡಿ ಸಿಗುತ್ತದೆ ?
ಪ್ರಸ್ತುತ ಅಡುಗೆ ಅನಿಲದ ಮೇಲಿನ ಸಬ್ಸಿಡಿ ತುಂಬಾ ಕಡಿಮೆಯಾಗಿದೆ. ಕರೋನಾ (Coronavirus) ಅವಧಿಯಲ್ಲಿ, ಗ್ರಾಹಕರ ಖಾತೆಗೆ ಕೇವಲ 10-12 ರೂ ಮಾತ್ರ ಸಬ್ಸಿಡಿಯಾಗಿ ಬರುತ್ತಿದೆ. ಹಿಂದೆ ಸಿಲಿಂಡರ್ ಮೇಲೆ 200 ರೂಗಳವರೆಗೆ ಸಬ್ಸಿಡಿ ಲಭ್ಯವಿತ್ತು. ಈಗ ಗ್ರಾಹಕರು ಸಿಲಿಂಡರ್‌ಗಳ ಮೇಲೆ ಅತ್ಯಲ್ಪ ಸಬ್ಸಿಡಿ ಪಡೆಯುತ್ತಿದ್ದಾರೆ. ಸಿಲಿಂಡರ್‌ಗಳ ಬೆಲೆಯೂ ಗಣನೀಯವಾಗಿ ಹೆಚ್ಚಾಗಿದೆ.