ಮತಾಂತರ ಮಾಡೋರು ದೇಶದ್ರೋಹಿಗಳು… ಫಾರಿನ್ನಿಂದ ದುಡ್ಡು ತಂದು ಇಲ್ಲಿ ಮತಾಂತರ ಮಾಡ್ತಿದ್ದಾರೆ…
ಬೆಂಗಳೂರು: ಮತಾಂತರ ಮಾಡುವವರು ದೇಶದ್ರೋಹಿಗಳು. ಹೊರ ದೇಶಗಳಿಂದ ದುಡ್ಡು ತಂದು ಇಲ್ಲಿ ಮತಾಂತರ ಮಾಡುತ್ತಿದ್ದಾಋಎ. ಮತಾಂತರ ನಿಷೇಧ ಕಾಯ್ದೆಯ ಪರವಾಗಿ ನಾನಿದ್ದೇನೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ಮತಾಂತರ ಪ್ರಕರಣದ ಕುರಿತು ಮಾತನಾಡಿದ ಅವರು ‘ಈ ನೆಲದ ಸಂಸ್ಕೃತಿಯನ್ನು ಹಾಳು ಮಾಡಲು ಮತಾಂತರ ಆಗುತ್ತಿದೆ. ಕಳ್ಳ-ಕಾಕರ ರೀತಿ ಮತಾಂತರ ಮಾಡುವ ಯತ್ನ ನಡೆಯುತ್ತಿದೆ. ಮತಾಂತರ ನಿಷೇಧಕ್ಕೆ ನಮ್ಮ ಸರ್ಕಾರ ಕಾಯ್ದೆ ತಂದೇ ತರುತ್ತದೆ. ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಚಿವರ ಜೊತೆ ಚರ್ಚೆ ಮಾಡುತ್ತೇವೆ. ಶಾಸಕರ ತಾಯಿಯನ್ನೇ ಮತಾಂತರ ಮಾಡಲಾಗಿದೆ. ಇಂಥಾ ಕಳ್ಳರನ್ನ, ಖದೀಮರನ್ನ ಮಟ್ಟ ಹಾಕಲು ಕಠಿಣ ಕಾನೂನು ಬೇಕೇಬೇಕು. ಮತಾಂತರ ನಿಷೇಧ ಕಾಯ್ದೆ ಪರವಾಗಿ ನಾನಿದ್ದೇನೆ ಎಂದು ಮತಾಂತರದ ವಿರುದ್ಧ ಸಚಿವರು ಗುಡುಗಿದರು.