ಎಸ್ಸೆಸ್ಸೆಲ್ಸಿನಲ್ಲಿ ಅತ್ಯುತ್ತಮ ಅಂಕಗಳಿಸಿದ ಅಪರಾಜಿತೇಶ್ವರಿಗೆ ಸಿಇಓ ಸನ್ಮಾನ
ಬೀದರ : ಭಾಲ್ಕಿ ತಾಲೂಕಿನ ಉಚ್ಚಾ ಗ್ರಾಮದ ಸೂರ್ಯಕಾಂತ ಬಿರಾದಾರ ಅವರು ವೃತ್ತಿಯಲ್ಲಿ
ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿಯಾಗಿರುತ್ತಾರೆ ಇವರ ಪುತ್ರಿ ಕುಮಾರಿ ಅಪರಾಜಿತೇಶ್ವರಿ ಅವರು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದು ರಾಜ್ಯದ ರ‍್ಯಾಂಕ್ ಪಟ್ಟಿಯಲ್ಲಿ 3ನೇ ಸ್ಥಾನ ಹಾಗೂ ಬೀದರ ಜಿಲ್ಲೆಗೆ ಮೊದಲನೇ ಸ್ಥಾನಗಿಟ್ಟಿಸಿ ಅತ್ಯುತ್ತಮ ಸಾಧನೆ ತೋರಿದ್ದಾಳೆ.
ಗಡಿನಾಡು ಬೀದರ ಜಿಲ್ಲೆಯ ಈ ವಿದ್ಯಾರ್ಥಿನಿಯು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ತೋರಿದ್ದಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಗ್ಯಾನೇಂದ್ರಕುಮಾರ ಗಂಗವಾರ ಅವರು ಆಗಸ್ಟ್ 11ರಂದು ಶಾಲುಹೊದಿಸಿ, ಸನ್ಮಾನಿಸಿ ಅಭಿನಂದಿಸಿದರು. .