Bollywood: ‘ನಶೆ’ಯಲ್ಲಿರುವ 9 ಸೆಲೆಬ್ರಿಟಿಗಳಿವರು….
ನಟ ಶಾರುಖ್ ಖಾನ್ ಪುತ್ರನ ಡ್ರಗ್ಸ್ ಕೇಸು ಬಹಿರಂಗವಾಗುವುದರೊಂದಿಗೆ, ಬಾಲಿವುಡ್ ಮತ್ತು ಮಾದಕ ವಸ್ತು ನಂಟು ಮತ್ತೊಮ್ಮೆ ಸುದ್ದಿಯಲ್ಲಿದೆ. ದಶಕಗಳಿಂದಲೂ ಬಾಲಿವುಡ್‌ನ ಹಲವಾರು ನಟರು ಹಲವು ಬಾರಿ ಇಂಥ ಪ್ರಕರಣಗಳ ಮೂಲಕ ಸುದ್ದಿಯಾಗುತ್ತಲೇ ಬಂದಿದ್ದಾರೆ. ಅಂಥ ಕುಖ್ಯಾತರೆಡೆಗಿನ ಒಂದು ನೋಟ ಇಲ್ಲಿದೆ.

ಸಂಜಯ್ ದತ್: ನಟ ಸುನಿಲ್ ದತ್ ಪುತ್ರ ಸಂಜಯ್ ದತ್‌ರನ್ನು ಮಾದಕವಸ್ತು ಸೇವನೆ ವಿಚಾರವಾಗಿ 1982ರಲ್ಲಿ ಬಂಧಿಸಲಾಗಿತ್ತು. ಮುಂಬೈ ಸ್ಫೋಟ ಸೇರಿದಂತೆ ಹಲವು ಪ್ರಕರಣಗಳಲ್ಲಿ ಸಂಜಯ್ ದತ್ ಜೈಲು ಪಾಲಾಗಿದ್ದರು.

ಮಮತಾ ಕುಲಕರ್ಣಿ: 90ರ ದಶಕದ ಬಾಲಿವುಡ್‌ನ ಖ್ಯಾತ ತಾರೆ ಮಮತಾ 2014ರಲ್ಲಿ ಮಾದಕವಸ್ತು ಸಾಗಣೆ ಪ್ರಕರಣದಲ್ಲಿ 2014ರಲ್ಲಿ ಕೀನ್ಯಾದಲ್ಲಿ ಬಂಧಿಸಲ್ಪಟ್ಟಿದ್ದರು. ಜೊತೆಗೆ ಇವರ ಪತಿ ವಿಕ್ಕಿ ಗೋಸ್ವಾಮಿ ಸಹಾ ಅರೆಸ್ಟ್ ಆಗಿದ್ದರು.

Geetanjali
ಗೀತಾಂಜಲಿ: ಸುಶ್ಮಿತಾ ಸೇನ್ ಸೇರಿದಂತೆ ಹಲವು ರೂಪದರ್ಶಿಯರು ರಾರಯಂಪ್ ಮೇಲೆ ನಡೆಯುವಂತೆ ಮಾಡಿದ್ದ ಖ್ಯಾತ ಫ್ಯಾಶನ್ ಡಿಸೈನರ್ ಗೀತಾಂಜಲಿ ಮಾದಕವಸ್ತು ಜಾಲಕ್ಕೆ ಸಿಲುಕಿ, ಮನೆಯಿಂದ ಹೊರಬಿದ್ದು ರಸ್ತೆಗಳಲ್ಲಿ ಭಿಕ್ಷೆ ಬೇಡುವ ಪರಿಸ್ಥಿತಿಗೆ ತಲುಪಿದ್ದರು. ಇದನ್ನು 2007ರಲ್ಲಿ ಪತ್ರಕರ್ತರೊಬ್ಬರು ಗುರುತಿಸಿದ್ದರು.

ಗೌರಿ ಖಾನ್: ಶಾರುಖ್ ಖಾನ್‌ರ ಪತ್ನಿ ಗೌರಿ ಖಾನ್ ಸಹ ಮಾದಕ ವಸ್ತು ಹೊಂದಿದ್ದಕ್ಕಾಗಿ ಬರ್ಲಿನ್ ವಿಮಾನ ನಿಲ್ದಾಣದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಆದರೆ ಅವರು ಹೊಂದಿದ್ದ ಮಾದಕವಸ್ತುವಿನ ಪ್ರಮಾಣ ಕಡಿಮೆ ಇದ್ದುದರಿಂದ ಕೇಸು ದಾಖಲಿಸದೇ ಬಿಟ್ಟು ಕಳುಹಿಸಲಾಗಿತ್ತು.

ಸುಸ್ಸನ್ನೇ ಖಾನ್: ನಟ ಹೃತಿಕ್ ರೋಶನ್ ಮಾಜಿ ಪತ್ನಿ ಸುಸ್ಸನ್ನೇ ಹೆಸರೂ ಸಹಾ ಹಲವು ಪ್ರಕರಣಗಳಲ್ಲಿ ಕಾಣಿಸಿಕೊಂಡಿತ್ತು. ಹೃತಿಕ್ ಮತ್ತು ಅವರ ನಡುವಿನ ವಿಚ್ಛೇದನಕ್ಕೂ ಸುಸನ್ನಾ ಅವರ ಮಾದಕ ವಸ್ತು ವ್ಯಸನವೇ ಕಾರಣವಾಗಿತ್ತು.

ರಣಬೀರ್ ಕಪೂರ್: ನಟ ರಿಷಿ ಕಪೂರ್‌ರ ಪುತ್ರ ರಣಬೀರ್ ಕಪೂರ್ ಸಹ ತಾನು ಡ್ರಗ್ ವ್ಯಸನಕ್ಕೆ ಒಳಗಾಗಿದ್ದಾಗಿ ಹೇಳಿಕೊಂಡಿದ್ದರು. ಕಾಲೇಜಿಗೆ ಸೇರಿದ ಹೊಸದರಲ್ಲಿ ಇತರರಿಂದ ಪ್ರಭಾವಿತನಾಗಿ ಮಾದಕ ವಸ್ತು ಸೇವಿಸಲು ಆರಂಭಿಸಿದ್ದಾಗಿ ಹಾಗೂ ಸಿನಿಮಾ ಇಂಡಸ್ಟ್ರೀಗೆ ಬಂದ ನಂತರ ತ್ಯಜಿಸಿದ್ದಾಗಿ ಬಹಿರಂಗಪಡಿಸಿದ್ದರು.

ಮನೀಶಾ ಕೊಯಿರಾಲ: ತನ್ನ ನಟನೆಯಿಂದ ಜನರ ಮನ ಗೆದ್ದಿದ್ದ ಹಾಗೂ ಕ್ಯಾನ್ಸರ್‌ನಿಂದ ಗುಣಮುಖರಾಗಿದ್ದ ನಟಿ ಮನಿಷಾ ಸಹ ತಮ್ಮ ವೃತ್ತಿ ಜೀವನದ ಉಚ್ಚ್ರಾಯ ಸ್ಥಿತಿಯಲ್ಲಿದ್ದಾಗ ಮಾದಕ ವಸ್ತು ಸೇವಿಸುತ್ತಿದ್ದರು. ಆದರೆ ಕ್ಯಾನ್ಸರ್‌ಗೆ ತುತ್ತಾಗಿ ಅದರಿಂದ ಪಾರಾದ ಬಳಿಕ ಮಾದಕ ವಸ್ತು ಸೇವನೆ ಬಿಟ್ಟಿದ್ದರು.

ಹನಿ ಸಿಂಗ್: ಭಾರತದಲ್ಲಿ ತನ್ನ ರಾರಯಪ್ ಸಂಗೀತದಿಂದ ಪ್ರಸಿದ್ಧಿ ಪಡೆದಿದ್ದ ಸಂಗೀತಗಾರ ಹನಿ ಸಿಂಗ್, ತಾನು ಮಾದಕವಸ್ತು ಸೇವನೆಗೆ ಒಳಗಾಗಿ 18 ತಿಂಗಳುಗಳ ಕಾಲ ಇಂಡಸ್ಟ್ರೀ ಇಂದ ದೂರಾಗಿದ್ದೆ. ಪುನರ್ವಸತಿ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಡ್ರಗ್ ವ್ಯಸನದಿಂದ ಹೊ ಬಂದಿದ್ದಾಗಿ ಅವರು ಹೇಳಿದ್ದಾರೆ.

ಫರ್ದೀನ್ ಖಾನ್: ಖ್ಯಾತ ನಟ ಫಿರೋಜ್ ಖಾನ್‌ರ ಪುತ್ರ ಫರ್ದೀನ್ ಖಾನ್ ಕೂಡಾ ಮಾದಕವಸ್ತು ಕೇಸಲ್ಲಿ 2001ರಲ್ಲಿ ಬಂಧನಕ್ಕೆ ಒಳಗಾಗಿದ್ದರು.