Mysterious Temple: ಇದುವರೆಗೂ ಬಾಗಿಲು ತೆರೆಯದ ವಿಶ್ವದ ಏಕೈಕ ದೇವಸ್ಥಾನ, ಎಲ್ಲಿದೆ ತಿಳಿಯಿರಿ
ನವದೆಹಲಿ: ಭಾರತದಲ್ಲಿ ಅನೇಕ ದೇವಸ್ಥಾನಗಳಿವೆ. ಪ್ರತಿಯೊಂದು ದೇವಸ್ಥಾನಕ್ಕೂ ತನ್ನದೇ ಆದ ನಂಬಿಕೆಗಳು ಮತ್ತು ಧಾರ್ಮಿಕ ಇತಿಹಾಸವಿದೆ. ಇಲ್ಲಿನ ಹಿಂದೂ ಜನರು ದೇವರನ್ನು ಎಷ್ಟು ನಂಬುತ್ತಾರೆಂದರೆ ದೇವಸ್ಥಾನಕ್ಕಾಗಿ ಏನೂ ಬೇಕಾದರೂ ಮಾಡಲು ಸಿದ್ಧರಾಗಿದ್ದಾರೆ. ಆದರೆ ಇದುವರೆಗೂ ಬಾಗಿಲು ತೆರೆಯದ ಪ್ರಪಂಚದ ಏಕೈಕ ದೇವಾಲಯದ ಬಗ್ಗೆ ನಿಮಗೆ ತಿಳಿದಿದೆಯೇ. ಇದರ ಬಗೆಗಿನ ಕುತೂಹಲಕಾರಿ ಮಾಹಿತಿ ಇಲ್ಲಿದೆ ನೋಡಿ
ಈ ದೇವಾಲಯದಲ್ಲಿ ದೊಡ್ಡ ನಿಧಿ ಇದೆ
ಈ ದೇವಸ್ಥಾನವು ಕೋಟ್ಯಂತರ ರೂ. ಮೌಲ್ಯದ ಅಪಾರ ಸಂಪತ್ತನ್ನು(Sree Padmanabhaswamy Temple Treasure) ಹೊಂದಿದೆ ಎಂದು ಹೇಳಲಾಗಿದೆ. ಈ ದೇವಾಲಯದ ನಂಬಿಕೆಗಳೆಂದರೆ ಪ್ರತಿದಿನ ಸಾವಿರಾರು ಭಕ್ತರು ಇಲ್ಲಿಗೆ ಬಂದು ಲಕ್ಷಾಂತರ ರೂ. ನಗದು ಹಣ, ಚಿನ್ನ, ಬೆಳ್ಳಿ ಇತ್ಯಾದಿ ಬೆಲೆಬಾಳುವ ವಸ್ತುಗಳನ್ನು ದಾನ ಮಾಡುತ್ತಾರೆ. ಜನರು ಭಾವನಾತ್ಮಕವಾಗಿ ಈ ದೇವಸ್ಥಾನದ ಜೊತೆಗೆ ನಂಟು ಹೊಂದಿದ್ದಾರೆ. ಆದರೆ ಇದರ ಹೊರತಾಗಿಯೂ ಈ ದೇವಾಲಯದ ಬಾಗಿಲು ಇನ್ನೂ ತೆರೆದಿಲ್ಲ. ಈ ದೇವಾಲಯದಲ್ಲಿ ಒಂದು ದೊಡ್ಡ ನಿಧಿ ಇದೆ ಎಂದು ಜನರು ನಂಬಿದ್ದಾರೆ. ಆದರೆ ಈ ದೇವಾಲಯದ ನೆಲಮಾಳಿಗೆಯ ಬಾಗಿಲು ಯಾವಾಗ ತೆರೆಯುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇದೀಗ ದೇವಸ್ಥಾನದ ಬಾಗಿಲನ್ನು ಯಾರು ತೆರೆಯಬಹುದು ಎಂಬುದರ ಬಗ್ಗೆ ಕುತೂಹಲ ಮೂಡಿದೆ.
ಭಾರತದ ಅತ್ಯಂತ ಶ್ರೀಮಂತ ದೇವಸ್ಥಾನ ಕೇರಳದಲ್ಲಿದೆ
ಕೇರಳದ ತಿರುವನಂತಪುರಂ ನಗರದ ಮಧ್ಯದಲ್ಲಿರುವ ಶ್ರೀ ಅನಂತ ಪದ್ಮನಾಭಸ್ವಾಮಿ ದೇವಾಲಯ(Sree Padmanabhaswamy Temple)ದ ಬಗ್ಗೆ ನಿಮಗೆ ಗೊತ್ತಿರಬಹುದು. ಇದು ಭಾರತದ ಅತ್ಯಂತ ಶ್ರೀಮಂತ ದೇವಸ್ಥಾನವಾಗಿದೆ. ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾಗಿರುವ ಈ ಪುರಾತನ ದೇವಾಲಯವನ್ನು ಹಿಂದಿನ ರಾಜಮನೆತನದ ತಿರುವಾಂಕೂರಿನವರು ನೋಡಿಕೊಳ್ಳುತ್ತಿದ್ದರು. ಈ ದೇವಾಲಯದ 6 ಕಮಾನುಗಳಲ್ಲಿ ಒಟ್ಟು 20 ಬಿಲಿಯನ್ ನಷ್ಟು ಸಂಪತ್ತು ಇದೆ ಎಂದು ನಂಬಲಾಗಿದೆ. ಅಷ್ಟೇ ಅಲ್ಲ ದೇವಾಲಯದ ಗರ್ಭಗೃಹದಲ್ಲಿ ವಿಷ್ಣುವಿನ ಬೃಹತ್ ಚಿನ್ನದ ವಿಗ್ರಹವಿದ್ದು, ಇದನ್ನು ನೋಡಲು ಸಾವಿರಾರು ಭಕ್ತರು ದೂರದೂರುಗಳಿಂದ ಇಲ್ಲಿಗೆ ಬರುತ್ತಾರೆ. ಈ ವಿಗ್ರಹದ ಅಂದಾಜು ವೆಚ್ಚವೇ 500 ಕೋಟಿ ರೂ. ಅಂತಾ ಹೇಳಲಾಗಿದೆ.