ದಸರಾ ಸಂಭ್ರಮ: ನಾಡಿನ ಜನತೆಗೆ ಶುಭಾಶಯ ಕೋರಿದ ಸಿಎಂ ಬೊಮ್ಮಾಯಿ

ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಗುರುವಾರದಿಂದ ಆರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ನಾಡಿನ ಜನತೆಗೆ ದಸರಾ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, “ಎಲ್ಲರಿಗೂ ದಸರಾ ನಾಡಹಬ್ಬದ ಹಾರ್ದಿಕ ಶುಭಕಾಮನೆಗಳು. ನಾಡದೇವತೆ ಚಾಮುಂಡೇಶ್ವರಿ ಎಲ್ಲರಿಗೂ ಸುಖ, ಸಂತೋಷ, ಆರೋಗ್ಯಗಳನ್ನು ಅನುಗ್ರಹಿಸಲಿ. ಸಾಂಕ್ರಾಮಿಕದ ಕರಿನೆರಳು ದೂರಸರಿದು, ಸಂಭ್ರಮ ಸಮೃದ್ಧಿಗಳ ಹೊಂಬೆಳಕು ಮೂಡಲಿ ಎಂದು ಹಾರೈಸುತ್ತೇನೆ. ಸುರಕ್ಷತಾ ನಿಯಮಗಳನ್ನು ತಪ್ಪದೇ ಪಾಲಿಸಿ ಎಂದು ಹೇಳಿದ್ದಾರೆ.

ಈಗಾಗಲೇ ಮೈಸೂರು ದಸರಾ -2021’ರ ಮಹೋತ್ಸವಕ್ಕೆ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರು ಚಾಲನೆ ನೀಡಿದ್ದಾರೆ.

ಇದಕ್ಕೂ ಮುನ್ನ ಮುಖ್ಯಂತ್ರಿ ಬಸವರಾಜ ಬೊಮ್ಮಾಯಿಯವರು, ಕೃಷ್ಣರಾಜ ಸಾಗರ ಡ್ಯಾಮ್ ಬಳಿ ತಮ್ಮ ಪತ್ನಿ ಸಮೇತವಾಗಿ ತಾಯಿ ಕಾವೇರಿಗೆ ವಿಶೇಷ ಪೂಜೆ ಸಲ್ಲಿಸಿದರು.

ದಸರಾ ಮಹೋತ್ಸವ ಇಂದಿನಿಂದ ಆರಂಭವಾಗಿದ್ದು, ಒಂಬತ್ತು ದಿನಗಳ ಕಾಲ (ಅ.7ರಿಂದ 15ರವರೆಗೆ) ನಡೆಯಲಿದೆ. ಕೋವಿಡ್ ಆತಂಕದ ಹಿನ್ನೆಲೆಯಲ್ಲಿ ಕಳೆದ ಬಾರಿಯಂತೆಯೇ ಈ ಬಾರಿಯೂ ಕೂಡ ನಾಡಿನಲ್ಲಿ ದಸರಾ ಹಬ್ಬವನ್ನು ಸರಣ ಹಾಗೂ ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *