2 ದಿನ ರಾಜ್ಯದಲ್ಲಿ ಮಳೆ : ಯಲ್ಲೋ ಅಲರ್ಟ್‌

  • ರಾಜ್ಯದಲ್ಲಿ ಮುಂದಿನೆರಡು ದಿನ ಭಾರಿ ಮಳೆಯಾಗಲಿದ್ದು ಎಲ್ಲ ಜಿಲ್ಲೆಗಳಿಗೂ ಯೆಲ್ಲೋ ಅಲರ್ಟ್‌
  • ತಮಿಳುನಾಡಿನ ಕರಾವಳಿಯಲ್ಲಿ ಸೃಷ್ಟಿಯಾಗಿರುವ ಮೇಲ್ಮೈ ಸುಳಿಗಾಳಿಯ ಪ್ರಭಾವ ..

ಬೆಂಗಳೂರು (ಅ.07): ರಾಜ್ಯದಲ್ಲಿ ಮುಂದಿನೆರಡು ದಿನ ಭಾರಿ ಮಳೆ(Heavy Rain) ಯಾಗಲಿದ್ದು ಎಲ್ಲ ಜಿಲ್ಲೆಗಳಿಗೂ ಯೆಲ್ಲೋ ಅಲರ್ಟ್‌ (Yellow Alert) ನೀಡಲಾಗಿದೆ.

ತಮಿಳುನಾಡಿನ (Tamilnadu) ಕರಾವಳಿಯಲ್ಲಿ ಸೃಷ್ಟಿಯಾಗಿರುವ ಮೇಲ್ಮೈ ಸುಳಿಗಾಳಿಯ ಪ್ರಭಾವ ರಾಜ್ಯದ ಮೇಲೆ ಆಗಿದ್ದು ಎಲ್ಲೆಡೆ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಕೇಂದ್ರದ (weather Department) ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯದ ಮುಂಗಾರು ಋುತು ಸೆಪ್ಟೆಂಬರ್‌ಗೆ ಅಧಿಕೃತವಾಗಿ ಕೊನೆಗೊಂಡಿದ್ದರೂ ಹವಾಮಾನ ವೈಪರೀತ್ಯಗಳ ಕಾರಣದಿಂದ ಮಳೆಯ ಅಬ್ಬರ ಮುಂದುವರಿದಿದೆ.

 

ಬುಧವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡ 24 ಗಂಟೆಯ ಅವಧಿಯಲ್ಲಿ ರಾಜ್ಯಾದ್ಯಂತ ಉತ್ತಮ ಮಳೆಯಾಗಿದೆ. ಚಿಕ್ಕಮಗಳೂರಿನ ಕಡೂರಿನಲ್ಲಿ 7 ಸೆಂಮೀ, ದಕ್ಷಿಣ ಕನ್ನಡದ ಬೆಳ್ತಂಗಡಿ 6 ಸೆಂಮೀ, ಕಲಬುರಗಿಯ ಜೇವರ್ಗಿ, ಉತ್ತರ ಕನ್ನಡದ ಜಗಲಬೆಟ್‌, ಬೆಳಗಾವಿಯ ಯರಗತ್ತಿ ತಲಾ 5 ಸೆಂಮೀ ಮಳೆಯಾಗಿದೆ.

ಈ ಅವಧಿಯಲ್ಲಿ ರಾಜ್ಯದ ಗರಿಷ್ಠ ಉಷ್ಣಾಂಶ 34.2 ಡಿಗ್ರಿ ಸೆಲ್ಸಿಯಸ್‌ ರಾಯಚೂರಿನಲ್ಲಿ ಮತ್ತು ಕನಿಷ್ಠ ಉಷ್ಣಾಂಶ 18.6 ಡಿಗ್ರಿ ಸೆಲ್ಸಿಯಸ್‌ ಬೀದರ್‌ನಲ್ಲಿ ದಾಖಲಾಗಿದೆ.

209 ಪ್ರದೇಶ ಡೇಂಜರ್

 

ರಾಜಧಾನಿ ಬೆಂಗಳೂರಿನಲ್ಲಿ (Bengaluru) ಮಳೆ ಪ್ರವಾಹಕ್ಕೆ ತುತ್ತಾಗುವ 209 ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಸ್ಥಳಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ 58 ಅತಿ ಸೂಕ್ಷ್ಮ ಮತ್ತು 151 ಸೂಕ್ಷ್ಮ ಪ್ರದೇಶಗಳಿವೆ.

ಪಾಲಿಕೆ ವ್ಯಾಪ್ತಿಯಲ್ಲಿ ಮುಚ್ಚಿ ಹೋಗಿರುವ ಚರಂಡಿಗಳು ಮತ್ತು ಮಳೆ ನೀರು (Rain water) ಹರಿಯುವ ಚರಂಡಿಗಳ ಮರು ಪರಿಶೀಲನೆ ನಡೆಸುವುದಾಗಿ ಈ ಹಿಂದೆ ಬಿಬಿಎಂಪಿ ((BBMP) ತಿಳಿಸಿತ್ತು. ಆದರೆ, ಮಳೆಗಾಲ ಮುಗಿಯುತ್ತಾ ಬಂದರೂ ಚರಂಡಿಗಳ ವ್ಯವಸ್ಥೆ ಮಾತ್ರ ಸರಿಯಾಗಿಲ್ಲ. ಹೀಗಾಗಿ ಭಾನುವಾರ ಸುರಿದ ಮಳೆಗೆ ಇಷ್ಟೆಲ್ಲಾ ಹಾನಿಯಾಗಲು ಇದು ಕೂಡಾ ಕಾರಣವಾಗಿದೆ. ಚರಂಡಿಗಳ ಹೂಳು ತೆಗೆದು, ಮಳೆ ನೀರು ಸುಗಮವಾಗಿ ಹರಿಯುವಂತೆ ಮಾಡುವಲ್ಲಿ ಬಿಬಿಎಂಪಿ ಸಂಪೂರ್ಣ ವಿಫಲವಾಗಿದೆ ಎಂಬುದು ಸಾರ್ವಜನಿಕರ ಆರೋಪ.

ಮಳೆಗಾಲಕ್ಕೂ ಮುನ್ನವೇ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿದ್ದರೂ ಸರಿಯಾದ ನಿರ್ವಹಣೆ ಮಾಡುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ. ಎಲ್ಲ ವಲಯಗಳಲ್ಲೂ ಭಾನುವಾರ ಸುರಿದ ಮಳೆ ಅವಾಂತರ ಸೃಷ್ಟಿಸಿದ್ದು, ಕೋಟ್ಯಂತರ ರು. ನಷ್ಟಕ್ಕೆ ಕಾರಣವಾಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *