ಈ ಬಾರಿ ಜಾಕ್ವೆಲೀನ್ ಹುಟ್ಟುಹಬ್ಬಕ್ಕೆ ಸಿಕ್ಕ ಗಿಫ್ಟ್ ಏನು?
ಮಂಗಳವಾರವಷ್ಟೇ ಬಾಲಿವುಡ್ ನಟಿ ಜಾಕ್ವೆಲೀನ್ ಫರ್ನಾಂಡಿಸ್ ತಮ್ಮ 35ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಕುಟುಂಬದವರ ಜತೆಗೆ ಆಚರಿಸಿಕೊಳ್ಳಲಾಗಲಿಲ್ಲ ಎಂಬ ಬೇಸರವನ್ನು ಅವರು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.
ಹೀಗೆ ಬೇಸರದಲ್ಲಿದ್ದ ಅವರಿಗೆ ಒಂದು ಭರ್ಜರಿ ಬರ್ಥ್ಡೇ ಗಿಫ್ಟ್ ಸಿಕ್ಕಿದೆ. ಆ ಗಿಫ್ಟ್ ಏನು ಎಂಬ ಪ್ರಶ್ನೆ ಸಹಜವಾಗಿಯೇ ಬರಬಹುದು. ವಿಷಯ ಏನೆಂದರೆ, ಜಾಕ್ವೆಲೀನ್ಗೆ ಸಲ್ಮಾನ್ ಖಾನ್ ಜತೆಗೆ ಹೊಸ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದೆ.
ಸಲ್ಮಾನ್ ಮತ್ತು ಜಾಕ್ವೆಲೀನ್ ನಡುವೆ ಎಷ್ಟು ಸ್ನೇಹ ಇದೆ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಅವರಿಬ್ಬರೂ ‘ಕಿಕ್’ ಚಿತ್ರದಲ್ಲಿ ನಾಯಕ-ನಾಯಕಿಯಾಗಿ ನಟಿಸಿದ್ದರು. ಕರೊನಾ ಹಾವಳಿ ಹೆಚ್ಚಾದ ಹಿನ್ನೆಲೆಯಲ್ಲಿ ಘೋಷಿಸಲಾದ ಲಾಕ್ಡೌನ್ ಸಂದರ್ಭದಲ್ಲಿ ಜಾಕ್ವೆಲೀನ್, ಸಲ್ಮಾನ್ ಜತೆಗೆ ಅವರ ಪನ್ವೇಲ್ನ ಫಾರ್ಮ್ ಹೌಸ್ನಲ್ಲೇ ತಂಗಿದ್ದರು. ಇದೀಗ ಸಲ್ಮಾನ್ ಒಟ್ಟಿಗೆ ಇನ್ನೊಂದು ಚಿತ್ರದಲ್ಲಿ ನಟಿಸುವ ಅವಕಾಶ ಬಂದಿದೆ.
ಇಷ್ಟಕ್ಕೂ ಆ ಚಿತ್ರ ಯಾವುದು ಗೊತ್ತಾ? ‘ಕಿಕ್ 2’. ‘ಕಿಕ್’ ಚಿತ್ರ ಯಶಸ್ವಿಯಾದ ಹಿನ್ನೆಲೆಯಲ್ಲಿ ನಿರ್ದೇಶಕ ಮತ್ತು ನಿರ್ಮಾಪಕ ಸಾಜಿದ್ ನಾಡಿಯಾಡ್ವಾಲಾ, ‘ಕಿಕ್ 2’ ಮಾಡುವ ಯೋಚನೆಯಲ್ಲಿದ್ದರು. ಅದೀಗ ಕಾರ್ಯರೂಪಕ್ಕೆ ಬಂದಿದೆ. ಈಗಾಗಲೇ ಚಿತ್ರಕಥೆ ಕೆಲಸಗಳೆಲ್ಲಾ ಮುಗಿದಿದ್ದು, ನಿನ್ನೆ ಜಾಕ್ವೆಲೀನ್ ಹುಟ್ಟುಹಬ್ಬದ ಸಂದರ್ಭದಲ್ಲಿ ಅಧಿಕೃತವಾಗಿ ಘೋಷಿಸಲಾಗಿದೆ.
ಕಿಕ್ 2’ ಅನೌನ್ಸ್ ಆಗಿದ್ದರೂ, ಚಿತ್ರ ಪ್ರಾರಂಭವಾಗುವುದಕ್ಕೆ ಸಾಕಷ್ಟು ಸಮಯವಿದೆ. ಬಹುಶಃ ಚಿತ್ರವೇನಿದ್ದರೂ ಮುಂದಿನ ವರ್ಷ ಪ್ರಾರಂಭವಾಗಬಹುದು ಎಂದು ಹೇಳಲಾಗುತ್ತಿದೆ. ಅದಕ್ಕೂ ಮುನ್ನ, ಸಲ್ಮಾನ್ ಮೊದಲು ‘ರಾಧೇ – ಯುವರ್ ಫೇವರೇಟ್ ಭಾಯ್’ ಎಂಬ ಇನ್ನೊಂದು ಚಿತ್ರ ಮುಗಿಸಬೇಕಿದೆ. ಅದು ಮುಗಿದ ನಂತರವಷ್ಟೇ ‘ಕಿಕ್ 2’ ಪ್ರಾರಂಭವಾಗಲಿದೆ.