Navratri 2021: ನವರಾತ್ರಿಯಲ್ಲಿ ಈ 4 ರಾಶಿಯವರ ಮೇಲೆ ದುರ್ಗಾ ಮಾತೆಯ ವಿಶೇಷ ಕೃಪೆ
Navratri 2021: ಗೃಹ ಪ್ರವೇಶ, ಮದುವೆ ಸಂಬಂಧ ಮುಂತಾದ ಹೊಸ ಕೆಲಸಗಳಿಗೆ ನವರಾತ್ರಿಯ (Navratri) ಸಮಯವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ವರ್ಷದಿಂದ ದುರ್ಗಾ ಮಾತೆಯು ಡೋಲಿಯ ಮೇಲೆ ಸವಾರಿ ಮಾಡುತ್ತಿರುವುದರಿಂದ ಇದನ್ನು ವಿಪತ್ತು-ಹಿಂಸೆಯ ಸಂಕೇತವೆಂದು ಪರಿಗಣಿಸಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ಅದರ ಪರಿಣಾಮದ ಬಗ್ಗೆ ಕಾಳಜಿ ಇರುತ್ತದೆ.
ಜ್ಯೋತಿಷ್ಯದ (Astrology) ಲೆಕ್ಕಾಚಾರಗಳ ಪ್ರಕಾರ, ದುರ್ಗಾ ಮಾತೆಯ (Maa Durga) ಡೋಲಿಯ ಸವಾರಿ ಕೂಡ ಕೆಲವು ರಾಶಿಯ ಜನರಿಗೆ ಬಹಳ ಮಂಗಳಕರವಾಗಿದೆ. ಈ ರಾಶಿಚಕ್ರದ (Zodiac Sign) ಜನರು ನವರಾತ್ರಿಯ ಸಮಯದಲ್ಲಿ ಅಕ್ಟೋಬರ್ 15 ರವರೆಗೆ ಮಾ ದುರ್ಗಾಳ ಆಶೀರ್ವಾದ ಪಡೆಯುತ್ತಾರೆ ಎಂದು ಹೇಳಲಾಗುತ್ತಿದೆ.
ನವರಾತ್ರಿಯಲ್ಲಿ ಈ 4 ರಾಶಿಯವರ ಮೇಲೆ ದುರ್ಗಾ ಮಾತೆಯ ವಿಶೇಷ ಕೃಪೆ:
ಮೇಷ ರಾಶಿ (Aries): ಮೇಷ ರಾಶಿಯವರಿಗೆ ಅಕ್ಟೋಬರ್ 15 ರವರೆಗಿನ ಸಮಯ ಅತ್ಯಂತ ಶುಭಕರವಾಗಿರುತ್ತದೆ. ಇನ್ನೂ ಕೂಡ ವಿವಾಹವಾಗದೇ ಇರುವವರಿಗೆ ಕಂಕಣ ಭಾಗ್ಯ ಕೂಡಿಬರುವ ಯೋಗವಿದೆ. ಆರ್ಥಿಕವಾಗಿ (Finance) ಪ್ರಯೋಜನಕಾರಿಯಾಗಲಿದೆ. ನೀವು ವೃತ್ತಿಜೀವನದಲ್ಲಿ ದೊಡ್ಡ ಅವಕಾಶವನ್ನು ಪಡೆಯುತ್ತೀರಿ. ಆರೋಗ್ಯ ಚೆನ್ನಾಗಿರುತ್ತದೆ.
ಕನ್ಯಾ ರಾಶಿ (Virgo): ಕನ್ಯಾ ರಾಶಿಯ ಜನರು ನವರಾತ್ರಿಯ (Navaratri) ಈ ಶುಭ ಸಂದರ್ಭದಲ್ಲಿ ದೊಡ್ಡ ಆರ್ಥಿಕ ಲಾಭಗಳನ್ನು ಪಡೆಯುತ್ತಾರೆ. ಆಸ್ತಿ ಖರೀದಿಸುವ ಯೋಗವಿದೆ. ನೀವು ಹೊಸ ಕೆಲಸವನ್ನು ಪ್ರಾರಂಭಿಸುತ್ತಿದ್ದರೆ ಅದರಲ್ಲಿಯೂ ನೀವು ಯಶಸ್ಸನ್ನು ಪಡೆಯುತ್ತೀರಿ. ಆರೋಗ್ಯ ಉತ್ತಮವಾಗಿರಲಿದೆ.
ಧನು ರಾಶಿ (Sagittarius): ಧನು ರಾಶಿಯ ಜನರಿಗೆ ಹಠಾತ್ ಧನಲಾಭ ಸಿಗಲಿದೆ. ಬಹಳ ದೀರ್ಘ ಕಾಲದಿಂದ ಮುಗಿಯದ ಸಾಲದಿಂದ ಮುಕ್ತರಾಗುವಿರಿ. ಮನೆಯಲ್ಲಿ ಸಂತೋಷ ಇರುತ್ತದೆ. ಆಸ್ತಿಯನ್ನು ಖರೀದಿಸುವ ಯೋಗ ಕೂಡಿ ಬರಲಿದೆ. ಕಾಣಬಹುದು. ವ್ಯಾಪಾರ-ವ್ಯವಹಾರ ಸಂಬಂಧಿತ ನಿಮ್ಮ ಪ್ರಯಾಣ ಯಶಸ್ವಿಯಾಗುತ್ತದೆ. ಆತ್ಮವಿಶ್ವಾಸವನ್ನು ಉಳಿಸಿಕೊಳ್ಳಿ.