MG ZS: ಈ ಎಲೆಕ್ಟ್ರಿಕ್ ಕಾರು ಒಂದೇ ಚಾರ್ಜ್ ನಲ್ಲಿ 440 ಕಿಮೀ ಓಡುತ್ತದೆ
ನವದೆಹಲಿ: ಪ್ರಸಿದ್ಧ ಆಟೋಮೊಬೈಲ್ ಕಂಪನಿ ಎಂಜಿ ಮೋಟಾರ್ಸ್(Morris Garages Motor) ತನ್ನ ZS ಎಲೆಕ್ಟ್ರಿಕ್ ಕಾರನ್ನು ಅನಾವರಣಗೊಳಿಸಿದೆ. MG ZS ಎಲೆಕ್ಟ್ರಿಕ್ ಕಾರನ್ನು ಕಾಸ್ಮೆಟಿಕ್ ವಿನ್ಯಾಸ ಬದಲಾವಣೆಗಳು ಮತ್ತು ನವೀಕರಿಸಿದ ಪವರ್‌ಟ್ರೇನ್‌ನೊಂದಿಗೆ ನೀಡಲಾಗುತ್ತದೆ. ಇದು ಮುಂದಿನ 1 ವರ್ಷದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಲಭ್ಯವಾಗುವ ನಿರೀಕ್ಷೆಯಿದೆ.
ಪ್ರಸ್ತುತ ದೇಶದಲ್ಲಿ ಎಲೆಕ್ಟ್ರಿಕ್ ಕಾರು(Electric Car)ಗಳನ್ನು ಮಾರಾಟ ಮಾಡುತ್ತಿರುವ ಭಾರತದ ಕೆಲವೇ ವಾಹನ ತಯಾರಕರಲ್ಲಿ ಎಂಜಿ ಮೋಟಾರ್ಸ್ ಕೂಡ ಒಂದು. ಈ ಬ್ರಿಟಿಷ್ ಕಾರ್ ಬ್ರಾಂಡ್ ಕಂಪನಿಯ ಹೇಳಿಕೆ ಪ್ರಕಾರ, ಈ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ ಸುಮಾರು 439 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ. ಇದರೊಂದಿಗೆ ಈ ಕಾರಿನಲ್ಲಿ ಹೊಸ ಇನ್ಫೋಟೈನ್ಮೆಂಟ್ ಸಿಸ್ಟಮ್ ಮತ್ತು ಬಲವಾದ ಬ್ಯಾಟರಿಯನ್ನು ನೀಡಲಾಗಿದೆ. ಈ ನವೀಕರಿಸಿದ ಕಾರಿನ ವೈಶಿಷ್ಟ್ಯಗಳ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.
ವಾಹನದಲ್ಲಿ ವಿವಿಧ ಬದಲಾವಣೆ ಮಾಡಲಾಗಿದೆ
2022 MG ZS ಎಲೆಕ್ಟ್ರಿಕ್ ಕಾರು(2022 MG ZS Electric Car) ಹೊಸದಾಗಿ ಅಭಿವೃದ್ಧಿಪಡಿಸಿದ MG iSMART ಕನೆಕ್ಟಿವಿಟಿ ಸಿಸ್ಟಮ್ ಅನ್ನು ಹೊಂದಿದ್ದು, ಇದು ಒಂದು ಸ್ಮಾರ್ಟ್ಫೋನ್ ಆ್ಯಪ್ ಮೂಲಕ ಸಂಪರ್ಕವನ್ನು ಅನುಮತಿಸುತ್ತದೆ. ಇದರೊಂದಿಗೆ ಬಹು ಕಾರ್ಯಗಳನ್ನು ದೂರದಿಂದಲೇ ನಿಯಂತ್ರಿಸಬಹುದು. ಗಮನಾರ್ಹವಾಗಿ ಎಸ್‌ಯುವಿಯು ವೈರ್‌ಲೆಸ್ ಫೋನ್ ಚಾರ್ಜರ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್ ಮತ್ತು ಹಿಂದಿನ ಮಾದರಿಯಲ್ಲಿದ್ದ 8 ಇಂಚಿನ ಘಟಕಕ್ಕೆ ಬದಲಾಗಿ ಹೊಸ 10.1 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಹೊಂದಿರಲಿದೆ.
ಬಲವಾದ ಬ್ಯಾಟರಿಯೊಂದಿಗೆ ಉತ್ತಮ ಮೈಲೇಜ್
ಈ ವಾಹನವು 72 KWh ದೀರ್ಘ ಶ್ರೇಣಿಯ ಬ್ಯಾಟರಿ(Stronger Battery)ಯಿಂದ ಶಕ್ತಿಯನ್ನು ಹೊಂದಿರಲಿದ್ದು, ಹಿಂದಿನ ಮಾದರಿಯಲ್ಲಿ 263km ಗೆ ಹೋಲಿಸಿದರೆ 440 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ ಎಂದು ಹೇಳಲಾಗಿದೆ. ಮುಂದಿನ ವರ್ಷದ ವೇಳೆಗೆ 51 kWh ಬ್ಯಾಟರಿ ಪ್ಯಾಕ್ ಅನ್ನು ಬಿಡುಗಡೆ ಮಾಡಲಾಗುವುದು ಎಂದು ಕಂಪನಿಯು ಹೇಳಿಕೊಂಡಿದೆ. ಇದು ಒಂದೇ ಚಾರ್ಜ್‌ನಲ್ಲಿ 318 ಕಿಮೀ ದೂರವನ್ನು ಕ್ರಮಿಸಲು ಸಾಧ್ಯವಾಗುತ್ತದೆ.