Power Crisis: ದೆಹಲಿ ನಂತರ ಮಹಾರಾಷ್ಟ್ರದಲ್ಲಿ ವಿದ್ಯುತ್ ಬಿಕ್ಕಟ್ಟು, ಕಲ್ಲಿದ್ದಲು ಕೊರತೆಯಿಂದ 13 ಘಟಕಗಳು ಬಂದ್
ಮುಂಬೈ: Power Crisis: ಕಲ್ಲಿದ್ದಲು ಬಿಕ್ಕಟ್ಟಿನಿಂದಾಗಿ ಮಹಾರಾಷ್ಟ್ರ ರಾಜ್ಯ ವಿದ್ಯುತ್ ವಿತರಣಾ ಕಂಪನಿ ಲಿಮಿಟೆಡ್ (MSEDCL) ಗೆ ವಿದ್ಯುತ್ ಪೂರೈಸುವ ಒಟ್ಟು 13 ಘಟಕಗಳ ವಿದ್ಯುತ್ ಸ್ಥಾವರಗಳನ್ನು ಭಾನುವಾರ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ರಾಜ್ಯದಲ್ಲಿ 3330 ಮೆಗಾವ್ಯಾಟ್ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. ಈ ಹಿನ್ನಲೆಯಲ್ಲಿ ರಾಜ್ಯದಲ್ಲಿ ಕಡಿಮೆ ವಿದ್ಯುತ್ ಬಳಸುವಂತೆ ಗ್ರಾಹಕರಿಗೆ ಮನವಿ ಮಾಡಲಾಗುತ್ತಿದೆ.
ಕಡಿಮೆ ವಿದ್ಯುತ್ ಬಳಸಲು ಮನವಿ:
ಬೇಡಿಕೆ ಮತ್ತು ಪೂರೈಕೆಯನ್ನು ಸಮತೋಲನಗೊಳಿಸಲು ಬೆಳಗ್ಗೆ 6 ರಿಂದ 10ರವರೆಗೆ ಮತ್ತು ಸಂಜೆ 6 ರಿಂದ ರಾತ್ರಿ 10 ಗಂಟೆವರೆಗೆ ವಿದ್ಯುತ್ ಬಳಕೆಯನ್ನು ಕಡಿಮೆ ಮಾಡುವಂತೆ MSEDCL ಗ್ರಾಹಕರಿಗೆ ಮನವಿ ಮಾಡಿದೆ. ಚಂದ್ರಾಪುರ, ಭೂಸಾವಲ್ ಮತ್ತು ನಾಸಿಕ್ ನ 210-210 ಮೆಗಾವ್ಯಾಟ್, ಪ್ಯಾರಸ್ -250 ಮೆಗಾವ್ಯಾಟ್ ಮತ್ತು ಭೂಸಾವಲ್ ಮತ್ತು ಚಂದ್ರಾಪುರದ 500 ಮೆಗಾವ್ಯಾಟ್ ಘಟಕಗಳನ್ನು ಮುಚ್ಚಲಾಗಿದೆ. ಇದರ ಹೊರತಾಗಿ, ಪೋಸ್ಟಲ್ ಗುಜರಾತ್ ಪವರ್ ಲಿಮಿಟೆಡ್ (ಗುಜರಾತ್) ನ 640 ಮೆಗಾವ್ಯಾಟ್ ನ 4 ಸೆಟ್ ಮತ್ತು ರತನ್ ಇಂಡಿಯಾ ಪವರ್ ಲಿಮಿಟೆಡ್ (ಅಮರಾವತಿ) ಯ 810 ಮೆಗಾವ್ಯಾಟ್ ನ 3 ಸೆಟ್ ಗಳನ್ನು ಮುಚ್ಚಲಾಗಿದೆ.
ಪ್ರತಿ ಯೂನಿಟ್ ಗೆ 13.60 ರೂ.ನಂತೆ ವಿದ್ಯುತ್ ಖರೀದಿಸಲಾಗಿದೆ:
ಪ್ರಸ್ತುತ, ವಿದ್ಯುತ್ (Power) ಬೇಡಿಕೆ ಮತ್ತು ಪೂರೈಕೆ ನಡುವೆ 3330 ಮೆಗಾವ್ಯಾಟ್ ಅಂತರವನ್ನು ತುಂಬಲು ಮುಕ್ತ ಮಾರುಕಟ್ಟೆಯಿಂದ ವಿದ್ಯುತ್ ಖರೀದಿಸಲಾಗುತ್ತಿದೆ. ದೇಶಾದ್ಯಂತ ವಿದ್ಯುತ್ ಬೇಡಿಕೆ ಹೆಚ್ಚುತ್ತಿರುವ ಕಾರಣ, ವಿದ್ಯುತ್ ಖರೀದಿ ಬೆಲೆಯೂ ದುಬಾರಿಯಾಗುತ್ತಿದೆ. 700 MW ವಿದ್ಯುತ್ ಅನ್ನು ಪ್ರತಿ ಮಾರುಕಟ್ಟೆಗೆ 13.60 ರೂ. ದರದಲ್ಲಿ ಮುಕ್ತ ಮಾರುಕಟ್ಟೆಯಿಂದ ಖರೀದಿಸಲಾಗುತ್ತಿದೆ. ಭಾನುವಾರ ಬೆಳಿಗ್ಗೆ, 900 MW ವಿದ್ಯುತ್ ಅನ್ನು ರಿಯಲ್ ಟೈಮ್ ವಹಿವಾಟುಗಳ ಮೂಲಕ ಪ್ರತಿ ಯೂನಿಟ್‌ಗೆ 6.23 ರೂ. ದರದಲ್ಲಿ ಖರೀದಿಸಲಾಗಿದೆ. ಇದರ ಜೊತೆಗೆ, ಕೊಯ್ನಾ ಅಣೆಕಟ್ಟು ಹಾಗೂ ಇತರ ಸಣ್ಣ ಜಲವಿದ್ಯುತ್ ಸ್ಥಾವರಗಳು ಮತ್ತು ಸಾಂಪ್ರದಾಯಿಕವಲ್ಲದ ಇಂಧನ ಮೂಲಗಳ ಮೂಲಕ ವಿದ್ಯುತ್ ಒದಗಿಸಲಾಗುತ್ತಿದೆ. ಒಂದೆಡೆ ಕಲ್ಲಿದ್ದಲು ಕೊರತೆ ತೀವ್ರವಾಗುತ್ತಿದೆ. ಇದರೊಂದಿಗೆ ರಾಜ್ಯದಲ್ಲಿ ಹೆಚ್ಚುತ್ತಿರುವ ತಾಪಮಾನದಿಂದಾಗಿ ವಿದ್ಯುತ್ ಬೇಡಿಕೆ ಕೂಡ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.
ವಿದ್ಯುತ್ ಬಿಕ್ಕಟ್ಟಿನ ನಡುವೆ ರಾಜಕೀಯ ಹೋರಾಟ :
ಶನಿವಾರ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Arvind Kejriwal), ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವಾಗ, ರಾಜಧಾನಿಯಲ್ಲಿ ಕೇವಲ ಒಂದು ದಿನದ ವಿದ್ಯುತ್ ಪೂರೈಕೆಯನ್ನು ನೀಡಬಹುದು, ಇಷ್ಟು ಕಲ್ಲಿದ್ದಲು ಮಾತ್ರ ಉಳಿದಿದೆ ಎಂದು ಉಲ್ಲೇಖಿಸಿದ್ದಾರೆ. ಆದರೆ, ಕಲ್ಲಿದ್ದಲು ಬಿಕ್ಕಟ್ಟಿನ ವರದಿಗಳನ್ನು ಕೇಂದ್ರ ಸಚಿವ ಆರ್‌ಕೆ ಸಿಂಗ್ ಭಾನುವಾರ ತಳ್ಳಿಹಾಕಿದ್ದು, ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಕೇಂದ್ರ ಸಚಿವರನ್ನು ತರಾಟೆಗೆ ತೆಗೆದುಕೊಂಡರು.
ಕರ್ನಾಟಕದಲ್ಲೂ ಕಲ್ಲಿದ್ದಲಿನ ಕೊರತೆ:
ವಾಸ್ತವವಾಗಿ, ಕರ್ನಾಟಕದಲ್ಲೂ ಕಲ್ಲಿದ್ದಲಿನ ಕೊರತೆ (Coal Shortage In Karnataka) ಎದುರಾಗಿದ್ದು ರಾಜ್ಯದ ಎರಡು ಸ್ಥಾವರಗಳಲ್ಲಿ ಕಡಿಮೆ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಆದರೆ ರಾಜ್ಯದಲ್ಲಿ ವಿದ್ಯುತ್ ಸರಬರಾಜು ಕೊರತೆ ಇಲ್ಲ ಎಂದು ಸಚಿವ ಸುನೀಲ್ ಕುಮಾರ್ (Sunil Kumar) ಸ್ಪಷ್ಟಪಡಿಸಿದ್ದಾರೆ.