ತಿರು​ಪತಿಯ ಶ್ರೀ ವೆಂಕ​ಟೇ​ಶ್ವರ ಭಕ್ತಿ ಚಾನೆಲ್‌ ಈಗ ಕನ್ನ​ಡದ​ಲ್ಲಿ

  • ಶ್ರೀ ವೆಂಕಟೇಶ್ವರ ಭಕ್ತಿ ಚಾನೆಲ್‌(ಎಸ್‌ವಿಬಿಸಿ)ನ ಕನ್ನಡ ಮತ್ತು ಹಿಂದಿ ಆವೃತ್ತಿ ಆರಂಭ
  • 24 ಗಂಟೆಯೂ ಭಕ್ತಿ ವಿಷಯಾಧಾರಿಯ ಕಾರ‍್ಯಕ್ರಮ ಪ್ರಸಾರ

ತಿರುಪತಿ(ಅ.12): ತಿರುಪತಿ(Tirupati) ತಿರುಮಲ ದೇವಸ್ಥಾನ ಮಂಡಳಿ (TTD)ಯ ಶ್ರೀ ವೆಂಕಟೇಶ್ವರ ಭಕ್ತಿ ಚಾನೆಲ್‌(SVBC)ನ ಕನ್ನಡ ಮತ್ತು ಹಿಂದಿ ಆವೃತ್ತಿಗೆ ಆಂಧ್ರಪ್ರದೇಶ(Andhra Pradesh) ಮುಖ್ಯಮಂತ್ರಿ ವೈ.ಎಸ್‌.ಜಗನ್‌ ಮೋಹನ್‌ ರೆಡ್ಡಿ ಮಂಗಳವಾರ ಚಾಲನೆ ನೀಡಿದ್ದಾರೆ. ಶ್ರೀ ರಾಘವೇಂದ್ರ ಮಠ ಮಂತ್ರಾಲಯದ ಶ್ರೀ ಸುಬುದೇಂದ್ರ ತೀರ್ಥ ಸ್ವಾಮಿಯವರ ಉಪಸ್ಥಿತಿಯಲ್ಲಿ ಚಾನೆಲ್ ಲಾಂಚ್ ಮಾಡಲಾಗಿದೆ.

ಉದ್ಘಾಟನಾ ಕಾರ‍್ಯಕ್ರಮಕ್ಕೆ ಕರ್ನಾಟಕ(Karnataka) ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರನ್ನೂ ಆಹ್ವಾನಿಸಲಾಗಿತ್ತು. 24 ಗಂಟೆಯೂ ಭಕ್ತಿ ವಿಷಯಾಧಾರಿಯ ಕಾರ‍್ಯಕ್ರಮ ಪ್ರಸಾರ ಮಾಡುವ ಉಪಗ್ರಹ ವಾಹಿನಿಯು ತೆಲುಗು(Telugu) ಭಾಷೆಯಲ್ಲಿ ಮೊಟ್ಟಮೊದಲ ಬಾರಿಗೆ 2008ರಲ್ಲಿ ಆರಂಭವಾಗಿದ್ದು, ರಾಷ್ಟ್ರಪತಿ ಪ್ರತಿಭಾ ಪಾಟಿಲ್‌ ಚಾಲನೆ ನೀಡಿದ್ದರು. ದಶಕದ ಬಳಿಕ ತಮಿಳು(Tamil) ಭಾಷೆಯಲ್ಲೂ ಆರಂಭಿಸಲಾಗಿತ್ತು.

 

ಹಿಂದೂ ಸನಾತನ ಧರ್ಮದ ಮೌಲ್ಯಗಳನ್ನು ತಿಳಿಸುವ ಹಾಗೂ ವೆಂಕಟೇಶ್ವರ ಹಾಗೂ ದೇವಿ ಪದ್ಮಾವತಿಯ ಮಹಿಮೆಯನ್ನು ಈ ಚಾನೆಲ್ ಮೂಲಕ ತಿಳಿಸಲಾಗುತ್ತದೆ. ಅತ್ಯಂತ ಶ್ರೀಮಂತ ಹಿಂದೂ ದೇವಾಲಯದ ಆಡಳಿತ ಮಂಡಳಿ ಶ್ರೀ ವೆಂಕಟೇಶ್ವರ ಭಕ್ತಿ ಚಾನೆಲನ್ನು 2008ರಲ್ಲಿ ಪ್ರಪಂಚದಾದ್ಯಂತ ಲಾಂಚ್ ಮಾಡಿತ್ತು. ಡಾ. ವೈ.ಎಸ್ ರಾಜಶೇಖರ್ ರೆಡ್ಡಿ ಅವರು ಸಿಎಂ ಆಗಿದ್ದಾಗ ತೆಲುಗು ಚಾನೆಲ್ ಲಾಂಚ್ ಆಗಿತ್ತು.

Andhra Pradesh CM launches Sri Venkateswara Bhakti channels in Hindi and Kannada dpl

ನಿತ್ಯೋತ್ಸವಂ,ವರೋತ್ಸವಂ, ಪಕ್ಷೋತ್ಸವಂ, ಮಾಸೋತ್ಸವಂ,ಸಂವತ್ಸರೋತ್ಸವಂ, ಶ್ರೀವರಿ ಬ್ರಹ್ಮೋತ್ಸವಂ, ಪಾರಾಯಣ, ಪ್ರಮುಖ ತೀರ್ಥಯಾತ್ರಾ ತಾಣಗಳ ಕುರಿತ ಸಾಕ್ಷ್ಯಚಿತ್ರಗಳು ಈ ಚಾನೆಲ್‌ನಲ್ಲಿ ಪ್ರಸಾರವಾಗುತ್ತದೆ. ತಮಿಳು ಭಕ್ತರ ಸತತ ಬೇಡಿಕೆಯ ಪರಿಣಾಮ ಟಿಟಿಡಿ 2017 ಏ.14ರಂದು ತಮಿಳಿನಲ್ಲಿಯೂ ಚಾನೆಲ್ ಆರಂಭಿಸಿತು.

 

ಯಲಹಂಕ ಕ್ಷೇತ್ರದ ಶಾಸಕರು ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ಎಸ್.ಆರ್. ವಿಶ್ವನಾಥ್ ಅವರನ್ನು ತಿರುಮಲ ತಿರುಪತಿ ಟ್ರಸ್ಟ್  ಸದಸ್ಯರನ್ನಾಗಿ ನೇಮಕ ಮಾಡಿ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್ ಆದೇಶ ಹೊರಡಿಸಿದ್ದರು. ಈ ಹಿಂದೆ ಬೆಂಗಳೂರಿನ ತಿರುಮಲ ತಿರುಪತಿ ಟ್ರಸ್ಟ್‌ ನ ಸ್ಥಳೀಯ ಸಲಹಾ ಮಂಡಳಿಯ ಉಪಾಧ್ಯಕ್ಷರಾಗಿ ವಿಶ್ವನಾಥ್ ಅವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *