ಮೀಸಲಾತಿ ಬಗ್ಗೆ ಸಂವಿಧಾನದಲ್ಲೇ ಬರೆದಿದೆ, ಅದು ಯಾರ ಭಿಕ್ಷೆಯೂ ಅಲ್ಲ.. ವಿಪಕ್ಷ ನಾಯಕ ಸಿದ್ದರಾಮಯ್ಯ

ಈಶ್ವರಪ್ಪ ಒಬ್ಬ ಪೆದ್ದ. ಸಿದ್ದರಾಮಯ್ಯ ಯಾಕೆ ವರದಿ ತೆಗೆದುಕೊಂಡಿಲ್ಲ ಎಂದು ಕೇಳ್ತಾನೆ. ವರದಿ ಶಿಫಾರಸು ಮಾಡಿದ್ದೇ ನಾನು. ಅವರ ಬ್ರೇನ್ ಹಾಗೂ ನಾಲಿಗೆಗೆ ಲಿಂಕ್ ತಪ್ಪಿದೆ. ಬೇಕು ಅಂತಾ ನೆಪ ಮಾಡಿ ಬಿಜೆಪಿ ಸರ್ಕಾರ ವರದಿ ಪಡೆಯುತ್ತಿಲ್ಲ.‌ ಸೆಕ್ರೆಟರಿ ಇಲ್ಲ ಎಂಬ ಕುಂಟು ನೆಪ ಹೇಳ್ತಿದ್ದಾರೆ ಎಂದು ಕಿಡಿಕಾರಿದರು..

ಕಲಬುರಗಿ : ಜಾತಿಗಳ ವ್ಯವಸ್ಥೆ, ವರ್ಗಗಳ ವ್ಯವಸ್ಥೆಯಿಂದಲೇ, ಅಸಮಾನತೆ ನಿರ್ಮಾಣವಾಗಿದೆ. ಸಮ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ನಾವೆಲ್ಲರೂ ಪ್ರಯತ್ನ ಮಾಡಬೇಕೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.

ನಗರದ ಜಗತ್ ವೃತ್ತದಲ್ಲಿ ಆಯೋಜಿಸಿದ್ದ ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಿಂದುಳಿದ ಹಾಗೂ ಬೇರೆ ಜಾತಿಯಲ್ಲಿರುವ ಜನರು, ಸಾಮಾಜಿಕ ನ್ಯಾಯದ ಬಗ್ಗೆ ಅರ್ಥ ಮಾಡಿಕೊಳ್ಳಬೇಕಿದೆ. ನಮ್ಮ ಸಮಾಜದಲ್ಲಿ ಶ್ರೇಣಿಕೃತ ವ್ಯವಸ್ಥೆ ಜಾರಿಯಲ್ಲಿತ್ತು.

ಸಮಾಜವನ್ನು ನಾಲ್ಕು ಭಾಗಗಳಲ್ಲಿ ವಿಂಗಡಣೆ ಮಾಡಲಾಗಿತ್ತು. ಬ್ರಾಹ್ಮಣರು,ಕ್ಷತ್ರೀಯರು, ವೈಶ್ಯರು ಹಾಗೂ ಶೂದ್ರರು ಎಂದು ವಿಂಗಡಣೆ ಮಾಡಿದ್ದರು. ಸಂವಿಧಾನದಲ್ಲಿ ಡಾ.ಅಂಬೇಡ್ಕರ್ ಅವರು ಸಾಮಾಜಿಕ ನ್ಯಾಯಕ್ಕೆ ಬಹಳ ಪ್ರಾಮುಖ್ಯತೆ ನೀಡಿದ್ದಾರೆ. ಸಮಾಜದ ತಾರತಮ್ಯ ಹೋಗಬೇಕಾದರೇ, ಜಾತಿ ವ್ಯವಸ್ಥೆ ಹೋಗಬೇಕು ಎಂದು ಹೇಳಿದರು.

ಅಧಿಕಾರ ಕೆಲವೇ ಕೆಲವು ಜನರಲ್ಲಿ ಕೇಂದ್ರಿಕೃತವಾಗಿರಬಾರದು. ಎಲ್ಲರಿಗೂ ಸಮವಾದ ಅಧಿಕಾರ ದೊರಕುವಂತೆ ಆಗಬೇಕು. ಯಾರು ಸಂವಿಧಾನವನ್ನು ವಿರೋಧ ಮಾಡುತ್ತಾರೆ ಅವರು, ಮೀಸಲಾತಿ ಹಾಗೂ ಸಂವಿಧಾನದ ವಿರೋಧಿಗಳು ಎಂದು ಹೇಳಿದರು.

ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಯಾರು ಹಿಂದುಳಿದಿದ್ದಾರೆಯೋ, ಅವರಿಗೆ ಮೀಸಲಾತಿ ದೊರೆಯಬೇಕು. ಮೀಸಲಾತಿ ಸಂವಿಧಾನದಲ್ಲೇ ಬರೆದಿದೆ. ಇದು ಯಾರ ಭಿಕ್ಷೆಯೂ ಅಲ್ಲ. ಯಾವ ವ್ಯಕ್ತಿ ನಿಮ್ಮ ಪರವಾಗಿರುವನೋ, ಅವನ ಜೊತೆಯಲ್ಲಿ ಇರಿ. ಪರವಾಗಿ ಇಲ್ಲದೇ ಇದ್ದಲ್ಲಿ ಅವರನ್ನು ಬಿಟ್ಟು ಬಿಡಿ ಎಂದು ಹೇಳಿದರು.

ಈಶ್ವರಪ್ಪ ಒಬ್ಬ ಪೆದ್ದ : ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಸಚಿವ ಈಶ್ವರಪ್ಪ ವಿರುದ್ದ ಹರಿಹಾಯ್ದ ಸಿದ್ದರಾಮಯ್ಯ, ಕುಮಾರಸ್ವಾಮಿ ಅವರು ಬೇಜವಾಬ್ದಾರಿಯಿಂದ ಮಾತನಾಡುತ್ತಾರೆ. ಮಾತಿನಲ್ಲಿ ಅರ್ಥನೇ ಇರುವುದಿಲ್ಲ ಎಂದರು.

ಈಶ್ವರಪ್ಪ ಒಬ್ಬ ಪೆದ್ದ. ಸಿದ್ದರಾಮಯ್ಯ ಯಾಕೆ ವರದಿ ತೆಗೆದುಕೊಂಡಿಲ್ಲ ಎಂದು ಕೇಳ್ತಾನೆ. ವರದಿ ಶಿಫಾರಸು ಮಾಡಿದ್ದೇ ನಾನು. ಅವರ ಬ್ರೇನ್ ಹಾಗೂ ನಾಲಿಗೆಗೆ ಲಿಂಕ್ ತಪ್ಪಿದೆ. ಬೇಕು ಅಂತಾ ನೆಪ ಮಾಡಿ ಬಿಜೆಪಿ ಸರ್ಕಾರ ವರದಿ ಪಡೆಯುತ್ತಿಲ್ಲ.‌ ಸೆಕ್ರೆಟರಿ ಇಲ್ಲ ಎಂಬ ಕುಂಟು ನೆಪ ಹೇಳ್ತಿದ್ದಾರೆ ಎಂದು ಕಿಡಿಕಾರಿದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *